ಮಂಗಳೂರು : ದಕ್ಷಿಣ ಕನ್ನಡದ ಮಂಗಳೂರು ತಾಲೂಕಿನಲ್ಲಿ ಕಳೆದ 24 ವರ್ಷಗಳಲ್ಲಿ37 ಆಸ್ತಿಗಳು ವಕ್ಫ್ ಪಾಲಾಗಿದ್ದು, ಆ ಪೈಕಿ ಶೇ.50ರಷ್ಟು ಆಸ್ತಿಗಳು ಸರ್ಕಾರಿ ಭೂಮಿ ಮತ್ತು ವಕ್ಫ್ ಬೈ ಯೂಸರ್ ಎಂಬ ಆಧಾರದಲ್ಲಿ ಹಸ್ತಾಂತರವಾಗಿದೆ. ಇದು ಕೇವಲ ಸ್ಯಾಂಪಲ್ ಮಾತ್ರ
ಸರ್ಕಾರಿ ಭೂಮಿಯನ್ನು ವಕ್ಫ್ ಆಸ್ತಿಯಾಗಿ ಬದಲಿಸುವುದು ಹಾಗೂ ಅದನ್ನು ವಕ್ಫ್’ಗೆ ಕೊಟ್ಟ ಮೇಲೆ 1995ರ ತಿದ್ದುಪಡಿ ಕಾಯ್ದೆ ಪ್ರಕಾರ ಪ್ರಶ್ನಿಸುವ ಅಧಿಕಾರವಿರುವುದು ಟ್ರ್ಯಬುನಲ್’ಗೆ ಮಾತ್ರ. ವಕ್ಫ್ ಟ್ರ್ಯಬುನಲ್ ಆದೇಶ ಪ್ರಶ್ನಿಸುವ ಅಧಿಕಾರ ಹೈಕೋರ್ಟ್-ಸುಪ್ರೀಂಕೋರ್ಟ್’ಗೂ ಇಲ್ಲ. ಹೀಗಿರುವಾಗ, ವಕ್ಫ್ ಕಾಯ್ದೆಯು ನಮ್ಮ ಸಂವಿಧಾನ ವಿರೋಧಿ ಕಾಯ್ದೆಯಾಗಿದೆ.
ದೇಶದಲ್ಲಿ ರಕ್ಷಣಾ ಇಲಾಖೆ ಹಾಗೂ ರೈಲ್ವೆ ಇಲಾಖೆ ಬಿಟ್ಟರೆ ಅತಿ ಹೆಚ್ಚು ಲ್ಯಾಂಡ್ ಬ್ಯಾಂಕ್ ಹೊಂದಿರುವುದು ವಕ್ಫ್ ಮಂಡಳಿ.
ಕರ್ನಾಟಕದಲ್ಲಿ ವಕ್ಪ್ ಆಸ್ತಿಯಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ಆಗಿರುವುದಾಗಿ ಅನ್ವರ್ ಮಾಣಿಪ್ಪಾಡಿ ಈಗಾಗಲೇ ನೀಡಿರುವ ವರದಿ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ಅಕ್ರಮದಲ್ಲಿ ಭಾಗಿಯಾಗುವುದರ ಮೂಲಕ ಮುಸಲ್ಮಾನ ಸಮುದಾಯಕ್ಕೆ ದ್ರೋಹ ಬಗೆದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು.
ಕೇಂದ್ರ ಸರ್ಕಾರ ವಕ್ಪ್ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಈ ಸಂದರ್ಭದಲ್ಲೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ತರಾತುರಿಯಲ್ಲಿ ವಕ್ಪ್ ಆಸ್ತಿ ಹೆಸರಿನಲ್ಲಿ ರೈತರ ಭೂಮಿಯನ್ನು ಕಬಳಿಸಲು ಹೊರಟಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಸಿಎಂ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ವಕ್ಪ್ ಆಸ್ತಿಯಲ್ಲಿ ಹಗರಣ ಮಾಡಲು ಹೊರಟಿರುವ ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಸಚಿವ ಜಮೀರ್ ಅಹಮದ್ ಖಾನ್ ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಕಾಂಗ್ರೆಸ್ ಪಕ್ಷಕ್ಕೆ ಮುಸಲ್ಮಾನ ಸಮುದಾಯದ ಬಗ್ಗೆ ನಿಜವಾದ ಕಳಕಳಿ, ಕಾಳಜಿ ಇದ್ದರೆ ಕೇಂದ್ರ ಸರ್ಕಾರ ತರಲು ಹೊರಟಿರುವ ವಕ್ಪ್ ಕಾಯ್ದೆ ತಿದ್ದುಪಡಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿಯಲ್ಲಿ ಪಾಲ್ಗೊಂಡು ತಿದ್ದುಪಡಿ ಪ್ರಕ್ರಿಯೆಗಳಿಗೆ ಬೆಂಬಲ ನೀಡಲಿ.
ವಕ್ಫ್ ಬೈ ಯೂಸರ್( ಬಳಕೆದಾರರಿಂದ ವಕ್ಪ್ ) ಪರಿಭಾಷೆಯಡಿ ಓರ್ವ ವ್ಯಕ್ತಿ ಯಾರದ್ದೋ ಭೂಮಿ ಬಳಕೆ ಮಾಡುತ್ತಿದ್ದು, ಅದನ್ನು ವಕ್ಪ್ ಕೊಟ್ಟರೆ ಅದರ ಮೂಲ ಮಾಲೀಕ ಕೂಡ ಟ್ರ್ಯಬುನಲ್’ಗೆ ಹೋಗಿ ಅದು ತನ್ನ ಆಸ್ತಿ ಎಂಬುದಾಗಿ ಹೋರಾಡಬೇಕಾದ ಒಂದು ವಿಚಿತ್ರ ಕಾನೂನು ವಕ್ಫ್ ಕಾಯ್ದೆ ಹೊಂದಿದೆ.
ಈ ಹಿನ್ನಲೆಯಲ್ಲಿ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಸರ್ಕಾರವು, ಸರ್ಕಾರಿ ಭೂಮಿ ವಕ್ಪ್ ಗೆ ಹಸ್ತಾಂತರಿಸುವಂತಿಲ್ಲ ಮತ್ತು ವಕ್ಫ್ ಬೈ ಯೂಸರ್ ಎನ್ನುವ ಪರಿಭಾಷೆಯನ್ನು ತೆಗೆದು ಹಾಕಿ ಯಾರು ಉಪಯೋಗ ಮಾಡುತ್ತಿದ್ದಾರೆಯೋ ಅವರ ಆಸ್ತಿಯನ್ನು ವಕ್ಫ್’ಗೆ ನೀಡುವಂತಿಲ್ಲ ಎಂಬುದಾಗಿ ವಕ್ಫ್ ಕಾಯ್ದೆಗೆ ಮಹತ್ವದ ತಿದ್ದುಪಡಿ ತರುತ್ತಿದೆ.
ಈ ತಿದ್ದುಪಡಿಯಿಂದ ಧಾರ್ಮಿಕ ಚಟುವಟಿಕೆಗಳಿಗೆ, ಬಡವರಿಗೆ ಸಹಾಯ ಮಾಡಲು, ಮುಸ್ಲಿಂ ಮಕ್ಕಳಿಗೆ ಶಿಕ್ಷಣ ಕೊಡಿಸಲು ಬಳಕೆಯಾಗಬೇಕಿದ್ದ ವಕ್ಪ್ ಭೂಮಿಯು ಇತರ ಕಾರಣಗಳಿಗೆ ದುರ್ಬಳಕೆಯಾಗುವುದಕ್ಕೆ ಕಡಿವಾಣ ಬೀಳಲಿದೆ.
ಇದು ನಮ್ಮ ಮುಖ್ಯ ನಿಲುವಾಗಿದ್ದು, ಆ ಮೂಲಕ ವಕ್ಫ್ ಹೆಸರಿನಲ್ಲಿ ಸರಕಾರದ, ಮುಸ್ಲಿಂ ಸಮುದಾಯದವರ ಆಸ್ತಿ ದುರ್ಬಳಕೆ ಆಗಬಾರದು ಎನ್ನುವುದು ನಮ್ಮ ಉದ್ದೇಶ ಹಾಗೂ ವಕ್ಫ್ ಕಾಯ್ದೆ ವಿರುದ್ಧದ ಬಿಜೆಪಿಯ ಹೋರಾಟವಾಗಿದೆ.
Click this button or press Ctrl+G to toggle between Kannada and English