ಮಂಗಳೂರು : ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ, ಕೇರಳ-ಗೋವಾ ರಾಜ್ಯಗಳ ಮಾದರಿಯಲ್ಲಿ ಕರಾವಳಿಯಲ್ಲೂ ಬೀಚ್ ಅಭಿವದ್ಧಿಗೆ ಅವಕಾಶಗಳಿದ್ದು ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕಷ್ಣ ಜೆ. ಪಾಲೆಮಾರ್ ಹೇಳಿದರು. ಅವರು ಪಣಂಬೂರಿನಲ್ಲಿ ರವಿವಾರ ನಡೆದ ಬೀಚ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರವಿವಾರ ಪಣಂಬೂರು ಬೀಚ್ ಉತ್ಸವಕ್ಕೆ ಅಪಾರ ಜನಸಾಗರವೇ ಹರಿದು ಬಂದಿದ್ದು, ಬೀಚ್ ನಲ್ಲಿ ಏರ್ಪಡಿಸಲಾದ ವಿವಿಧ ಸ್ಪರ್ದೆಗಳಲ್ಲಿ ಜನರು ಭಾಗವಹಿಸಿ ಸಂತಸಪಟ್ಟರು. ಈ ಬಾರಿ ಬೀಚ್ ಉತ್ಸವದಲ್ಲಿ ಯುವ ಪೀಳಿಗೆಯ ಜನರ ಪಾಲೇ ಅಧಿಕವಿದ್ದು ಸಾಗರೋತ್ಪನ್ನ ಆಹಾರದ ರುಚಿ ಸವಿದರು. ಬೀಚ್ ನಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಮಾತನಾಡಿ, ಪಣಂಬೂರು ಬೀಚ್ ಉತ್ಸವವನ್ನು ಮುಂದಿನ ವರ್ಷಗಳಲ್ಲಿ ಮತ್ತಷ್ಟು ಜನಪ್ರಿಯಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದರು.
ಮೇಯರ್ ಗುಲ್ಜಾರ್ ಬಾನು, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಡಾ| ಹರೀಶ್ ಕುಮಾರ್, ಜಿಲ್ಲಾ ಪಂಚಾಯತ್ ಸಿಇಒ ಡಾ| ಕೆ.ಎನ್. ವಿಜಯಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು. ಕರಾವಳಿ ಉತ್ಸವ ಸಮಿತಿ ಅಧ್ಯಕ್ಷ ಸಹಾಯಕ ಆಯುಕ್ತ ಎನ್. ವೆಂಕಟೇಶ್ ಸ್ವಾಗತಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರ್ವಹಿಸಿದರು. ಪಣಂಬೂರು ಬೀಚ್ ಅಭಿವೃದ್ಧಿ ಸಂಯೋಜನೆಯ ಸಿಇಒ ಯತೀಶ್ ಬೆಕಂಪಾಡಿ ವಂದಿಸಿದರು.
Click this button or press Ctrl+G to toggle between Kannada and English