ಮಂಗಳೂರು : ಅಭಿಮಾನ್? ಸಮೂಹ ಸಂಸ್ಥೆಗಳ ಮೆನೇಜಿಂಗ್ ಡೈರೆಕ್ಟರ್ ಆಗಿದ್ದ ಮನಮೋಹನ ಮಲ್ಲಿ ಆಕಸ್ಮಿಕ ಸಾವಿನ ಪ್ರಕರಣಕ್ಕೆ ಜನವರಿ 15ರಂದು ಮೂರು ತಿಂಗಳು ಪೂರ್ತಿಗೊಳ್ಳುತ್ತಿದೆ. ಓರ್ವ ಯಶಸ್ವಿ ಉದ್ಯಮಿಯಾಗಿದ್ದು, ಸಾರ್ವಜನಿಕ ರಂಗದಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಜನಮೆಚ್ಚುಗೆ ಪಡೆದಿದ್ದ ಮಲ್ಲಿ ಸಾವಿನ ಕುರಿತು ಪ್ರಾರಂಭದಲ್ಲೇ ಸಂಶಯಗಳಿತ್ತಾದರೂ ಉತ್ತರ ಸಿಗದ ಪ್ರಶ್ನೆಗಳು ಇಂದಿಗೂ ಹಾಗೇ ಉಳಿದು ಕೊಂಡಿವೆ. ಮಲ್ಲಿ ರೈಲಿನಿಂದ ಬಿದ್ದು ಆಕಸ್ಮಿಕ ಸಾವಿಗೀಡಾದರೆಂದು ಹೇಳಲಾಗಿತ್ತಾದರೂ ಇಂದಿಗೂ ಅವರ ಮಿತ್ರರು, ಬಂಧು ವರ್ಗ ಮಾತ್ರ ಇದನ್ನು ನಿರಾಕರಿಸುತ್ತ ಮಲ್ಲಿ ಸಾವಿನ ಹಿಂದೆ ಬಿಡಿಸಲಾರದ ಕಗ್ಗಂಟು ಇದೆ ಎನ್ನುತ್ತಿದ್ದಾರೆ.
ಮನಮೋಹನ ಮಲ್ಲಿ ತನ್ನ ಗೆಳೆಯರಾದ ಕೆ.ಟಿ. ಶೆಟ್ಟಿ ಹಾಗೂ ಚಿತ್ತರಂಜನ್ ಶೆಟ್ಟಿ ಜೊತೆ ವಿಹಾರಾರ್ಥ ಗೋವಾಕ್ಕೆ ತೆರಳಿದ್ದರು. ಅಲ್ಲಿಂದ ಅಕ್ಟೋಬರ್ 15ರಂದು ರಾತ್ರಿ ವಾಪಸ್ ಆಗುವಾಗ ರೈಲಿನ ಎ.ಸಿ. ಕೋಚ್ ನಲ್ಲಿ ಪ್ರಯಾಣ ಬೆಳೆಸಿದ್ದರು. ರೈಲು ಉಡುಪಿ ಜಿಲ್ಲೆಯ ಇನ್ನಂಜೆ-ಪಾಂಗಾಳ ಮಧ್ಯ ಭಾಗದಲ್ಲಿ ಸಂಚರಿಸುತ್ತಿದ್ದಾಗ ನಸುಕಿನ ವೇಳೆ ಮಲ್ಲಿ ಆಕಸ್ಮಿಕವಾಗಿ ರೈಲಿನಿಂದ ಎಸೆಯಲ್ಪಟ್ಟು ಸಾವನ್ನಪ್ಪಿದರೆಂದು ಉಭಯ ಜಿಲ್ಲೆಗಳ ಪೊಲೀಸ್ ಕಡತಗಳಲ್ಲಿ ದೂರು ದಾಖಲಾಗಿವೆ. ಮಲ್ಲಿಯ ಕಿಸೆಯಲ್ಲಿ 12 ಸಾವಿರ ರೂಪಾಯಿ ನಗದು ಮತ್ತು ಎರಡು ಮೊಬೈಲ್ ಗಳು ಸ್ಥಳದಲ್ಲಿ ಬಿದ್ದಿದ್ದರಿಂದ ಕಾಪುವಿನ ಸಮಾಜಸೇವಕ ಸೂರಿಯವರು ಮೃತರ ಮನೆಯವರಿಗೆ ಮಾಹಿತಿ ನೀಡಿದ್ದರು. ಅಲ್ಲಿಂದ ಮುಂದೆ ಮಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದು ಮಲ್ಲಿ ರೈಲಿನಿಂದ ಬಿದ್ದು ಮೃತಪಟ್ಟರು ಎಂದು ಶರಾ ಬರೆಯುವಲ್ಲಿಗೆ ಮಲ್ಲಿ ಆಕಸ್ಮಿಕ ಸಾವಿನ ಪ್ರಕರಣ ಬಹುತೇಕ ?ಕ್ಲೋಸ್? ಆಗಿದೆ.
ಆದರೆ ಇಂದಿಗೂ ಮಲ್ಲಿಯ ಮಿತ್ರರು, ಬಂಧುವರ್ಗದವರು ಮತ್ತು ನಾಗರಿಕರು? ಮಲ್ಲಿ ರೈಲಿನಿಂದ ಬಿದ್ದು ಸಾವನ್ನಪ್ಪಿದರು? ಎಂಬ ಮಾತನ್ನು ನಂಬಲು ಸಿದ್ಧರಿಲ್ಲ. ಮಲ್ಲಿಯವರಿಗೆ ಮದ್ಯಪಾನ, ಸಿಗರೇಟು ಸೇವನೆಯ ಅಭ್ಯಾಸವಿತ್ತು. ಆದರೆ ತೀರಾ ಅದನ್ನೇ ಚಟವನ್ನಾಗಿ ಮಾಡಿಕೊಂಡಿರಲಿಲ್ಲ. ಹೀಗಿರುವಾಗ ಮಲ್ಲಿಯವರು ಪ್ರಯಾಣದ ನಡುವೆ ವಿಪರೀತ ಮದ್ಯ ಸೇವಿಸಿರುವ ಸಾಧ್ಯತೆಗಳು ಕಡಿಮೆ, ಅದರಲ್ಲೂ ಎ.ಸಿ.ಕೋಚ್ ನಲ್ಲಿ ಪ್ರಯಾಣ ನಡೆಸುವ ವೇಳೆ ಸಿಗರೇಟು ಸೇವಿಸುವ ಉದ್ದೇಶದಿಂದ ಬಾಗಿಲು ತನಕ ಬಂದಿರುವ ಸಾಧ್ಯತೆಗಳು ಕಡಿಮೆ ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ ಮಲ್ಲಿಯವರನ್ನು ಹತ್ತಿರದಿಂದ ಬಲ್ಲವರು.
ಮಲ್ಲಿಯವರು ಇನ್ನಂಜೆ-ಪಾಂಗಾಳ ರೈಲ್ವೇ ಹಳಿಗಳ ನಡುವೆ ಅನಾಥ ಶವವಾಗಿ ಬಿದ್ದಿದ್ದರೂ ಅವರ ಜೊತೆಗಾರರ ಗಮನಕ್ಕೆ ಬಂದಿದ್ದು ರೈಲು ಮಂಗಳೂರು ರೈಲು ನಿಲ್ದಾಣದಲ್ಲಿ ನಿಂತಾಗಲೇ. ? ಅವರೂ ಕೂಡಾ ವಿಪರೀತ ಮದ್ಯ ಸೇವಿಸಿ ಮಲಗಿದ್ದರು, ಹೀಗಾಗಿ ಮಲ್ಲಿಯವರು ಬಾಗಿಲಿಗೆ ಹೋಗಿದ್ದು ಮತ್ತು ಆಯತಪ್ಪಿ ಕೆಳಕ್ಕೆ ಬಿದ್ದಿದ್ದು ಗೊತ್ತೇ ಇರಲಿಲ್ಲ. ಮಂಗಳೂರು ರೈಲು ನಿಲ್ದಾಣದಲ್ಲಿ ಮಲ್ಲಿಯವರಿಗಾಗಿ ಕಾದಿದ್ದ ಕಾರು ಚಾಲಕ ವಿಚಾರಿಸಿದಾಗಲೇ ಮಲ್ಲಿ ಕಾಣೆಯಾಗಿರುವುದು ಮತ್ತು ಸಾವನ್ನಪ್ಪಿರುವುದು ಗಮನಕ್ಕೆ ಬಂದಿದೆ? ಎನ್ನುತ್ತದೆ ಪೊಲೀಸರ ವರದಿ. ಇದು ನಿಜವೇ ಆಗಿದ್ದರೆ ಮಲ್ಲಿ ಸೇರಿದಂತೆ ಮೂವರೂ ಸ್ನೇಹಿತರು ಗೋವಾದಿಂದ ಮಂಗಳೂರಿಗೆ ಪ್ರಯಾಣದ ನಡುವೆ ಸ್ಮೃತಿಯೇ ತಪ್ಪುವಷ್ಟು ಮದ್ಯ ಸೇವಿಸಿ ಪ್ರಯಾಣಿಸುವ ಜರೂರತ್ತು ಏನಿತ್ತು ಎನ್ನುವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ.
ಮಲ್ಲಿ ರೈಲುಕಂಬಿಗಳ ನಡುವೆ ಇನ್ನಿಲ್ಲವಾಗಿದ್ದಾರೆ. ಇದು ರೈಲಿನಲ್ಲಿ ನಡೆದಿರುವ ದರೋಡೆಯಾಗಿರಬಹುದೇ ಎಂಬ ಜನರ ಸಂದೇಹವನ್ನೇ ತೆಗೆದುಕೊಂಡರೆ ಮಲ್ಲಿಯವರ ಬಳಿಯಿದ್ದ ಎರಡು ದುಬಾರಿ ಮೊಬೈಲ್ ಗಳು, 12 ಸಾವಿರ ನಗದು ಎಲ್ಲವೂ ಸ್ಥಳದಲ್ಲೇ ಇತ್ತು. ಹೀಗಿರುವಾಗ ಕೊಲೆಗೆ ವೈಯಕ್ತಿಕ ಇಲ್ಲವೇ ವ್ಯಾವಹಾರಿಕ ಕಾರಣಗಳಿರುವ ಸಾಧ್ಯತೆಯನ್ನು ಸುಲಭವಾಗಿ ತಳ್ಳಿಹಾಕುವಂತಿಲ್ಲ. ಯಾಕೆಂದರೆ ರಿಯಲ್ ಎಸ್ಟೇಟ್ ವ್ಯವಹಾರ, ಕಟ್ಟಡ ನಿರ್ಮಾಣದಲ್ಲಿ ತೊಡಗಿದ್ದ ಮಲ್ಲಿಯವರಿಗೆ ಸಹಜವಾಗಿಯೇ ಅನೇಕ ವಿರೋಧಿಗಳು ಹುಟ್ಟಿಕೊಂಡಿರಬಹುದು. ಪಾಲುದಾರಿಕೆ ಉದ್ಯಮದಲ್ಲೂ ವೈರತ್ವ ಬೆಳೆಸಿ ಕೊಂಡಿರಬಹುದು. ಇದೇ ಹಿನ್ನೆಲೆಯಲ್ಲಿ ಮಲ್ಲಿಯವರನ್ನು ಉದ್ದೇಶಪೂರ್ವಕವಾಗಿಯೇ ರೈಲಿನಿಂದ ತಳ್ಳಿ ಕೊಲೆ ಮಾಡಿದ್ದಾರೆಯೇ ಎಂಬ ಶಂಕೆ ಮಲ್ಲಿ ಆತ್ಮೀಯರ ನಡುವೆ ಪ್ರಾರಂಭದಲ್ಲೇ ಕೇಳಿಬಂದಿತ್ತು, ಅದು ಇಂದಿಗೂ ಉತ್ತರ ಸಿಗದ ಪ್ರಶ್ನೆಯಾಗಿಯೇ ಉಳಿದಿದೆ.
Click this button or press Ctrl+G to toggle between Kannada and English