ಧರ್ಮಸ್ಥಳ ಯಕ್ಷಗಾನ ಮೇಳ: ಸೇವೆ ಬಯಲಾಟ ಪ್ರದರ್ಶನ

11:19 PM, Thursday, November 21st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಉಜಿರೆ: ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಗೆ 200 ವರ್ಷಗಳ ಭವ್ಯ ಇತಿಹಾಸ ಮತ್ತು ಪರಂಪರೆ ಇದೆ.

ಇಂದಿನಿಂದ (ಗುರುವಾರ) 2025ರ ಮೇ 23ರ ವರೆಗೆ ಭಕ್ತಾದಿಗಳ ವತಿಯಿಂದ ಸೇವೆ ಬಯಲಾಟ ಪ್ರದರ್ಶನ ಆಯೋಜಿಸಲಾಗಿದೆ.

ಕಳೆದ ಏಳು ವರ್ಷಗಳಿಂದ ಸಂಜೆ ಗಂಟೆ 7 ರಿಂದ ರಾತ್ರಿ 12 ಗಂಟೆ ವರೆಗೆ ಕಾಲಮಿತಿಯ ಬಯಲಾಟ ಪ್ರದರ್ಶನ ಆಯೋಜಿಸಲಾಗುತ್ತಿದೆ. ಇದರಿಂದಾಗಿ ಕಲಾಭಿಮಾನಿ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯೆ, ಪ್ರೋತ್ಸಾಹ ಬರುತ್ತಿದೆ. ಕಲಾವಿದರಿಗೂ ಹೆಚ್ಚಿನ ಅಧ್ಯಯನ, ಅಭ್ಯಾಸಕ್ಕೂ ಅನುಕೂಲವಾಗುತ್ತದೆ.

ಸಾಂಪ್ರದಾಯಿಕ ವೇಷಭೂಷಣಗಳು, ಜಾನಪದ ಶೈಲಿಯ ಪರಂಪರೆಯ ಪ್ರದರ್ಶನ, ಕೇವಲ ಪೌರಾಣಿಕ ಪ್ರಸಂಗಗಳ ಪ್ರದರ್ಶನ ಧರ್ಮಸ್ಥಳ ಮೇಳದ ವೈಶಿಷ್ಟ್ಯವಾಗಿದೆ. ಸೇವೆ ಬಯಲಾಟ ಪ್ರದರ್ಶನದೊಂದಿಗೆ ಧರ್ಮಪ್ರಭಾವನೆ ಹಾಗೂ ನೈತಿಕ ಮೌಲ್ಯಗಳ ಉದ್ದೀಪನಕ್ಕೂ ಪ್ರೋತ್ಸಾಹ ನೀಡಲಾಗುತ್ತದೆ.

ಸೇವೆ ಬಯಲಾಟ ಪ್ರದರ್ಶನದ ಊರುಗಳಲ್ಲಿ ಮೇಳದ ಜೊತೆ ಇರುವ ಶ್ರೀ ಮಹಾಗಣಪತಿ ದೇವರನ್ನು ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು,

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English