ಅಡಿಕೆ ಕ್ಯಾನ್ಸರ್ ಕಾರಕ ಎಂಬ ವಿಶ್ವ ಆರೋಗ್ಯ ಸಂಸ್ಥೆಯ ವಾದ ಸತ್ಯಕ್ಕೆ ದೂರವಾದುದು – ಕಿಶೋರ್ ಕುಮಾರ್ ಕೊಡ್ಗಿ

12:36 AM, Saturday, November 23rd, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : 1973ರಲ್ಲಿ ಅಡಿಕೆ ಬೆಳೆಗಾರರ ಹಿತ ಕಾಪಾಡಲು ಬಹುರಾಜ್ಯ ಸಹಕಾರ ಕಾಯಿದೆ ಅಡಿಯಲ್ಲಿ ಸ್ಥಾಪಿಸಲ್ಪಟ್ಟ ಕ್ಯಾಂಪ್ಕೊ ಕಳೆದ 5 ದಶಕಗಳಿಂದ ರೈತರ ಹಿತ ಕಾಪಾಡಲು ನಿರಂತರ ಪ್ರಯತ್ನ ಮಾಡುತ್ತಿದೆ.
ಅಡಿಕೆಯು ಆಯುರ್ವೇದೀಯ ಗುಣಗಳನ್ನು ಹೊಂದಿದ್ದರೂ, ಅದು ಕ್ಯಾನ್ಸರ್ ಕಾರಕ ವೆಂಬ ವಿಶ್ವ ಆರೋಗ್ಯ ಸಂಸ್ಥೆ(WHO)ಯ ಏಕಪಕ್ಷೀಯ ನಿರ್ಣಯಕ್ಕೆ ಕ್ಯಾಂಪ್ಕೊ ಅಧ್ಯಕ್ಷರಾದ ಎ.ಕಿಶೋರ್ ಕುಮಾರ್ ಕೊಡ್ಗಿಯವರು ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.

ಪುರಾತನ ಕಾಲದಿಂದಲೂ ಅಡಿಕೆಯು ಭಾರತೀಯ ಸಂಸ್ಕೃತಿಯಲ್ಲಿ ಪವಿತ್ರ ಸ್ಥಾನವನ್ನು ಪಡೆದಿದೆ. ಶುಭ ಸಮಾರಂಭಗಳಲ್ಲಿ ವೀಳ್ಯದೆಲೆಯೊಂದಿಗೆ ಅಡಿಕೆಯನ್ನು ಸೇರಿಸಿ ತಾಂಬೂಲ ನೀಡುವುದು ಭಾರತೀಯ ಸಂಸ್ಕೃತಿ ಪ್ರತೀಕ. ಆಯುರ್ವೇದ ಶಾಸ್ತ್ರದಲ್ಲಿಯೂ ಅಡಿಕೆಗೆ ಅದರ ಔಷದೀಯ ಗುಣಗಳಿಂದಾಗಿ ವಿಶೇಷ ಸ್ಥಾನಮಾನವಿದೆ.ಅಡಿಕೆ ಕಫ ಮತ್ತು ಪಿತ್ಥದ ಸಮಸ್ಯೆ ಶಮನಗೊಳಿಸುವ ಮತ್ತು ಜೀರ್ಣಕ್ರೀಯೆಯನ್ನು ಉದ್ದೀಪನಗೊಳಿಸುವ ಗುಣ ಹೊಂದಿದೆ. ಇದರ ಆಯುರ್ವೇದದ ಸತ್ವದಿಂದಾಗಿ ವಿಳ್ಯದೆಲೆಯೊಂದಿಗೆ ಅಡಿಕೆ ಬಳಸಿ ತಾಂಬೂಲ ತಿನ್ನುವುದು ಸತ್-ಸಂಪ್ರದಾಯ ಮತ್ತು ಆರೋಗ್ಯದಾಯಕ.

ಅಡಿಕೆ ಕ್ಯಾನ್ಸರ್ ಕಾರಕ ಎಂಬ WHO ನ ವರದಿ ಅಡಿಕೆ ಬೆಳೆಗಾರರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದ ಬೆಳೆಗಾರರ ಹಿತ ರಕ್ಷಣೆಗೆ ಶ್ರಮಿಸುತ್ತಿರುವ ಕ್ಯಾಂಪ್ಕೊ ಗೆ ಕಾನೂನಾತ್ಮಕ ತೊಂದರೆಗಳನ್ನು ಅನುಭವಿಸುತ್ತಿದೆ. IARC ವರದಿಗಳು ಸಂಶೋಧನೆಗಳ ಸಂಪೂರ್ಣ ಮಾಹಿತಿಗಳನ್ನು ಬಹಿರಂಗ ಪಡುಸಿರುವುದಿಲ್ಲ. ಹಾಗಾಗಿ ಸತ್ಯಾಸತ್ಯತೆಗಳನ್ನು ಮುಚ್ಚಿಟ್ಟಿರಬಹುದು ಅಥವಾ ವರದಿಗಳನ್ನು ತಿರುಚಿರಬಹುದೆಂಬ ಸಂಶಯ ಮೂಡುತ್ತಿದೆ. ಪುರಾತನ ಕಾಲದಿಂದಲೂ ಅಡಿಕೆಯ ಔಷದೀಯ ಗುಣಗಳ ಬಗ್ಗೆ ಜನ ಸಾಮಾನ್ಯರಿಗೂ ಅರಿವು ಇದೆ. ಹೀಗಿದ್ದರೂ ಕೂಡ WHO ಅಡಿಕೆಯ ಉಪಯೋಗದ ಬಗೆಗಿನ ನೈಜ ವರದಿಗಳನ್ನು ಗಣನೆಗೆ ತೆಗೆದುಕೊಳ್ಳದೆ ಏಕಪಕ್ಷೀಯ ನಿರ್ಣಯ ತೆಗೆದುಕೊಂಡಿರುವುದಕ್ಕೆ ಕ್ಯಾಂಪ್ಕೊ ಖಂಡನೆಯನ್ನು ವ್ಯಕ್ತಪಡಿಸುತ್ತದೆ.

ಕ್ಯಾಂಪ್ಕೊ ಈಗಾಗಲೇ ಹಲವು ಸಂಶೋಧನೆಗಳನ್ನು ನಡೆಸಿದ್ದು ,ಅವುಗಳ ವರದಿಗಳೆಲ್ಲಾ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಬದಲಾಗಿ ರೋಗವನ್ನು ಶಮನಗೊಳಿಸುವ ಔಷದೀಯ ಗುಣಗಳನ್ನು ಹೊಂದಿರುವ ಬಗ್ಗೆ ದೃಢಪಡಿಸಿದೆ.

1974 ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ,ಬೆಂಗಳೂರಿ ನ ಕುಮಾರಿ ಮತ್ತು ಇತರರು ನಡೆಸಿದ ಅಧ್ಯಯನವು ತಂಬಾಕು ರಹಿತ ಅಡಿಕೆ ಮತ್ತು ವಿಳ್ಯದೆಲೆಯ ಸೇವನೆಯಿಂದ ಯಾವುದೇ ಟ್ಯೂಮರ್ ಗಳು ಉಂಟಾಗಿರುವುದನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ, ಬದಲಾಗಿ ಟ್ಯೂಮರ್ ಗಳ ಬೆಳವಣಿಗೆಯನ್ನು ತಡೆಯುವಲ್ಲಿ ಯಶಸ್ವಿಯಾಗಿರುವುದು ಕಂಡುಬಂದಿದೆ.

2016ರಲ್ಲಿ ವಿನ್ ಶಿಪ್ ಕ್ಯಾನ್ಸರ್ ಇನ್ಸ್ಟಿ ಟ್ಯೂಟ್ ಆಫ್ ಎಮೆರಾಯ್ ಯೂನಿವರ್ಸಿಟಿ ,ಅಟ್ಲಾಂಟ (ಅಮೇರಿಕಾ)ದಲ್ಲಿ 25 ಜನರ ತಂಡವು ನಡೆಸಿದ ಅಧ್ಯಯನವು ಅಡಿಕೆಯಿಂದ ತೆಗೆದ ಸಾರವು ಹೆಪಟೋಸೆಲ್ಯುಲರ್ ಕ್ಯಾನ್ಸರ್ ಗೆ ಸಂಬಂಧಿಸಿದಂತೆ ಟ್ಯೂಮರ್ ಬೆಳವಣಿಗೆಯನ್ನು ತಡೆಯುವ ಗುಣಹೊಂದಿದೆ ಎಂಬುದಾಗಿ ವರದಿ ನೀಡಿದೆ.

2022ರಲ್ಲಿ ನಿಟ್ಟೆ ಯುನಿವರ್ಸಿಟಿ ಸಂಶೋಧನೆ ನಡೆಸಿದೆ. ಅವರ ಅಧ್ಯಯನವೂ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎಂಬ ವಾದವನ್ನು ಪುಷ್ಠೀಕರುಸಿದೆ.

2023 ರಲ್ಲಿ ಓರಲ್ ಮೆಡಿಸಿನ್ ಡಿಪಾರ್ಟ್ ಮೆಂಟ್, ಯುನಿವರ್ಸಿಟಾಸ್ ಸಿಯಿಯಾ ಕೌಲಾ ,ಇಂಡೋನೇಷಿಯಾದಲ್ಲಿ ಶ್ರೀಯುತ ಸಾರು ಮತ್ತು ಇತರರು ನಡೆಸಿದ ಅಧ್ಯತನವು ಅಡಿಕೆಯಿಂದ ತೆಗೆದ ಸಾರವು ವಿವಿಧ ರೋಗಗಳ ವಿರುದ್ಧ ಸಕರಾತ್ಮಕ ಮತ್ತು ಪರಿಣಾಮಕಾರಿ ಫಲಿತಾಂಶ ನೀಡಿದ ಬಗ್ಗೆ ವರದಿ ನೀಡಿದ್ದಾರೆ.

ಇತ್ತೀಚೆಗೆ ವಿಶ್ವ ಆರೋಗ್ಯ ಸಂಸ್ಥೆ (WHO)ಯ ಮಾಜಿ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರನ್ನು ಕ್ಯಾಂಪ್ಕೊ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ.ಬಿ.ವಿ.ಸತ್ಯನಾರಾಯಣ ಹಾಗೂ ARDF ನ ಡಾ.ಕೇಶವ ಭಟ್ ಅವರು ಬೇಟಿ ಮಾಡಿ ಚರ್ಚಿಸಿದಾಗ ,ICMR ಮತ್ತು ICAR ನಲ್ಲಿ ಸಂಶೋಧನೆ ನಡೆಸಿ ಅಡಿಕೆ ಕ್ಯಾನ್ಸರ್ ಕಾರಕ ಎಂಬ ವಾದವನ್ನು ಸಮರ್ಥವಾಗಿ ಪ್ರಶ್ನಿಸುವಂತೆ ಸಲಹೆ ನೀಡಿದ್ದಾರೆ.

WHO ನ ನಿಲುವನ್ನು ಮರುಪರಿಶೀಲಿಸುವಂತೆ ಮಾಡಲು ICMR,ICAR,AIUMS,CSIR,CFTRI,ಮೈಸೂರು ಅಥವಾ ಭಾತೀಯ ವಿಜ್ಞಾನ ಸಂಸ್ಥೆಯಂತಹ ಸರಕಾರಿ ಮಾನ್ಯತೆ ಪಡೆದ ಹಾಗೂ ನುರಿತ ಸಂಶೋಧನಾ ಸಂಸ್ಥೆಗಳಲ್ಲಿ ಅಧ್ಯಯನ ನಡೆಸಿ ವರದಿ ಮಂಡಿಸಲು ಸಹಕಾರ ನೀಡುವಂತೆ ಕೇಂದ್ರ ಸರಕಾರದಲ್ಲಿ ರೈತರ ಪರವಾಗಿ ಕ್ಯಾಂಪ್ಕೊ ಮನವಿ ಮಾಡುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English