ನಾಡಿನ ಕಲಾ ತಂಡವನ್ನು ಸ್ವಾಗತಿಸಿ ಗೌರವಿಸುವದು ಮುಂಬಯಿಗರ ಒಳ್ಳೆಯ ಗುಣ – ಐಕಳ ಹರೀಶ್ ಶೆಟ್ಟಿ

11:15 PM, Monday, November 25th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮುಂಬಯಿ : ಇಂದು ವಿಜಯ ಕಲಾವಿದರು ಕಿನ್ನಿಗೋಳಿ ಇವರ ಈ ವರ್ಷದ ಮುಂಬಯಿ ಪ್ರವಾಸದ ಪ್ರಥಮ ಪ್ರದರ್ಶನವನ್ನು ಕುಲಾಲ ಪ್ರತಿಷ್ಠಾನದ ಮಂಗಳೂರು ವತಿಯಿಂದ ನಡೆಸುತ್ತಿರುವುದು ಹಾಗೂ ಅದರೊಂದಿಗೆ ಊರಿನ ಕುಲಾಲ ಸಮಾಜ ಬಾಂದವರನ್ನು ಕರೆಸಿ ಸನ್ಮಾನಿಸುತ್ತಿರುವುದು ಅಬಿನಂದನೀಯ. ಊರಿನ ನಾಟಕ ತಂಡ ಮತ್ತು ಯಕ್ಷಗಾನ ತಂಡ ಮುಂಬಯಿಗಾಗಮಿಸಿದಲ್ಲಿ ಮುಂಬಯಿಗರು ಆರ್ಥಿಕವಾಗಿ ಹಾಗೂ ಕಲಾ ಪ್ರದರ್ಶನವನ್ನು ನೋಡಿ ಪ್ರೋತ್ಸಾಹಿಸುತ್ತಿರುವುದು ಮುಂಬಯಿಗರ ಒಳ್ಳೆಯ ಗುಣ. ಇಂದು ಸನ್ಮಾನಿತರಾದವರೆಲ್ಲರೂ ಕುಲಾಲ ಸಮಾಜದ ಗಣ್ಯ ವ್ಯಕ್ತಿಗಳು. ಸಮಾಜ ಗಟ್ಟಿಯಾಗಲು ಸಮಾಜದ ಬಗ್ಗೆ ಚಿಂತನೆ ಮಾಡುವ ಇಂತಹ ವ್ಯಕ್ತಿಗಳು ಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಯವರು ನುಡಿದರು.

ನ 23ರಂದು ವಿಜಯ ಕಲಾವಿದರ ಕಿನ್ನಿಗೋಳಿ ಇವರ ಈ ವರ್ಷದ ಮುಂಬಯಿ ಪ್ರವಾಸದ ಪ್ರಥಮ ನಾಟಕ “ಅಮ್ಮ ಆಮುಂಡರ” ಉದ್ಘಾಟನಾ ಕಾರ್ಯಕ್ರಮ ಸಂತಾಕ್ರೂಸ್ ಪೂರ್ವದ ಬಿಲ್ಲವ ಭವನದಲ್ಲಿ ನಡೆದಿದ್ದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ತಂಡದ ಮುಂಬಯಿ ಪ್ರವಾಸದ ಉದ್ಘಾಟನೆ ಮಾಡಿದ ಅವರು ನಾವು ಹುಟ್ಟಿದ ಊರು, ತಂದೆ, ತಾಯಿ ಮುಖ್ಯವಾಗಿ ನಾವು ಹುಟ್ಟಿದ ಸಮಾಜ ಎಲ್ಲಕ್ಕಿಂತಲೂ ಮಿಗಿಲು ಎನ್ನುತ್ತಾ ಸನ್ಮಾನಿತರಿಗೆ ಹಾಗೂ ವಿಜಯ ಕಲಾವಿದರು ಕಿನ್ನಿಗೋಳಿ ನಾಟಕ ತಂಡಕ್ಕೆ ಶುಭ ಕೋರಿದರು.

ಬಂಟರ ಸಂಘ ಮುಂಬಯಿಯ ಎಸ್. ಎಮ್. ಶೆಟ್ಟಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಮಾತನಾಡುತ್ತಾ ಇಲ್ಲಿ ನಾವೆಲ್ಲರೂ ಬಾಂದವ್ಯದ ಮೂಲಕ ಒಟ್ಟಾಗಿದ್ದೇವೆ. ಶರತ್ ಶೆಟ್ಟಿ ಹಾಗೂ ದಿನೇಶ್ ಕುಲಾಲ್ ಇವರದ್ದು ಪತ್ರಕರ್ತರಾಗಿ ಬಾಂದವ್ಯ. ಕಳೆದ 30-35 ವರ್ಷಗಳಿಂದ ಪ್ರಕಾಶ್ ಶೆಟ್ಟಿ ಸುರತ್ಕಲ್ ಊರಿನ ಕಲಾವಿದರನ್ನು ಮುಂಬಯಿಗೆ ತರಿಸಿ ಪ್ರೋತ್ಸಾಹಿಸುತ್ತಿದ್ದು ಅಂತಹ ಕಾರ್ಯಕ್ರಮಕ್ಕೆ ಸಹಕರಿಸಲು ಸಂತೋಷವಾಗುತ್ತಿದೆ ಎಂದರು.

ಸಂತಾಕ್ರೂಸ್ ಪೂರ್ವದ ಶ್ರೀಮಂತ್ರದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ವಾಸುದೇವ ಬಂಜನ್ ಮಾತನಾಡುತ್ತಾ ಈ ನಾಟಕವು ಸಮಾಜಕ್ಕೆ ಉತ್ತಮ ಸಂದೇಶವನ್ನು ನಾಟಕವು ಯಶಸ್ವಿಯಾಗಿ ಪ್ರದರ್ಶನಗೊಳ್ಳಲಿ. ಅದೇ ರೀತಿ ನಾಟಕದ ಪ್ರಥಮ ಪ್ರದರ್ಶನಕ್ಕೆ ಅವಕಾಶ ನೀಡಿದ ಕುಲಾಲ ಪ್ರತಿಷ್ಠಾನದ ಮಂಗಳೂರು ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮಯೂರ್ ಉಲ್ಲಾಳ್, ಕುಲಾಲ ಪ್ರತಿಷ್ಠಾನದ ಮಂಗಳೂರು ಇದರ ಆಡಳಿತಗೆ ಒಳಪಟ್ಟ ಶ್ರೀ ದೇವಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸದಾಶಿವ ಕುಲಾಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾದಳದ ದಳಪತಿ ಪ್ರದೀಪ್ ಅತ್ತವರ್ ಇವರನ್ನು ಗಣ್ಯರು ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ಇದರ ಅಧ್ಯಕ್ಷರಾಗಿ ಮರು ಆಯ್ಕೆಯಾದ ಮಯೂರ್ ಉಲ್ಲಾಳ್ ಅವರು , ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಿಂದ ಸನ್ಮಾನ ಸ್ವೀಕರಿಸಿದ್ದು ನನ್ನ ಸೌಭಾಗ್ಯ. ಐಕಳ ಹರೀಶ್ ಶೆಟ್ಟಿಯವರು ಎಲ್ಲಾ ಸಮುದಾಯದ ಪ್ರತಿನಿಧಿ ಮಾತ್ರವಲ್ಲದೆ ಸಾಂಸ್ಕೃತಿಕ ರಾಯಬಾರಿ. ಸಮಾಜದ ಬಡವರ ಬಗ್ಗೆ ಕಾಳಜಿ ವಹಿಸುತ್ತಿರುವ ದಿನೇಶ್ ಕುಲಾಲ್ ಅವರು ಕುಲಾಲ ಸಮಾಜದ ಆಸ್ತಿ. ಕೇವಲ ಎರಡು ವರ್ಷಗಳಲ್ಲಿ ಶತಮಾನವನ್ನು ಪೂರೈಸಲಿರುವ ದ.ಕ.ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃಸಂಘ ಮಂಗಳೂರು ತನ್ನ ನೂರನೇ ವರ್ಷದಲ್ಲಿ ಸಮಾಜದ ಹೆಣ್ಮಕ್ಕಳಿಗೆ ಮಂಗಳೂರಿನ ವೀರನಾರಾಯಣ ದೇವಸ್ಥಾನದ ಸಮೀಪ ವಸತಿ ನಿಲಯ ಸ್ಥಾಪನೆಯ ಯೋಜನೆಯನ್ನು ಕೈಗೊಂಡಿದೆ ಎಂದರು.

ಶ್ರೀ ದೇವಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸದಾಶಿವ ಕುಲಾಲ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಸೇವಾದಳದ ದಳಪತಿ ಪ್ರದೀಪ್ ಅತ್ತಾವರ್ ಇವರು ಮಾತನಾಡುತ್ತಾ ಕುಲಾಲ ಪ್ರತಿಷ್ಠಾನಕ್ಕೆ ದನ್ಯವಾಸ ಸಮರ್ಪಿಸಿ ವಿಜಯ ಕಲಾವಿದರು ಕಿನ್ನಿಗೋಳಿ ತಂಡದ ಈ ವರ್ಷದ ಮುಂಬಯಿ ಪ್ರವಾಸಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಅತಿಥಿಗಳಾದ ಉದ್ಯಮಿ ಬಾಲಕೃಷ್ಣ ಶೆಟ್ಟಿ ಉಳೆಪಾಡಿ್, ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್- ದಹಿಸರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಸತೀಶ್ ಬಂಗೇರ, ಟೆಂಡರ್ ಫ್ರೆಶ್ ಐಸ್ಕ್ರೀಂಮ್ ನ ನಿರ್ದೇಶಕಿ ಉಷಾ ವಿ ಶೆಟ್ಟಿ, ಗೋರೆಗಾಂವ್ ಪೂರ್ವದ ನಿತ್ಯಾನಂದ ಡೈಸ್ & ಟೂಲ್ಸ್ ಆಡಳಿತ ನಿರ್ದೇಶಕ ಶ್ರೀಧರ್ ಮೂಲ್ಯ, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು.

ಕುಲಾಲ ಸಂಘ ಮುಂಬಯಿಯ ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರಾದ ಶಂಕರ ವೈ ಮೂಲ್ಯ, ಕುಲಾಲ ಸಂಘ ಮುಂಬಯಿಯ ಕಾರ್ಯಕಾರಿ ಸಮಿತಿ ಸದಸ್ಯ ಉಮೇಶ್ ಬಂಗೇರ, ಕುಲಾಲ ಪ್ರತಿಷ್ಠಾನದ ಯೋಗೇಶ್ ಬಂಗೇರ ಮತ್ತು ಕುಲಾಲ ಸಂಘ ಮುಂಬಯಿಯ ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿಯ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಗೀತಾ ವೈ ಬಂಗೇರ ಅತಿಥಿಗಳನ್ನು ಗೌರವಿಸಿದರು.

ನಾಟಕ ತಂಡದಲ್ಲಿ ಕುಲಾಲ ಸಮಾಜದ ಏಳು ಮಂದಿ ಕಲಾವಿದರು ಅಭಿನಯಿಸುತ್ತಿದ್ದು, ನಾಟಕದ ಕಲಾವಿದೆ ಕಾವ್ಯ ಕುಲಾಲ್ ಅವರಿಗೆ ಬಂಟರ ಸಂಘ ಮುಂಬಯಿಯ ಎಸ್. ಎಮ್. ಶೆಟ್ಟಿ ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ರತ್ನಾಕರ್ ಶೆಟ್ಟಿ ಮುಂಡ್ಕೂರು ಇವರು ಐಕಳ ಹರೀಶ್ ಶೆಟ್ಟಿ ಯವರ ಉಪಸ್ಥಿತಿಯಲ್ಲಿ ವಿದ್ಯಾನಿಧಿಯನ್ನು ಹಸ್ತಾಂತರಿಸಿದರು. ಶರದ್ ಶೆಟ್ಟಿ ಕಿನ್ನಿಗೋಳಿ, ನರೇಂದ್ರ ಕೆರೆಕಾರ್ ಮತ್ತು ದಿನೇಶ್ ಕುಲಾಲ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಶರತ್ ಶೆಟ್ಟಿ ನೇತೃತ್ವದ ಕಿನ್ನಿಗೋಳಿ ವಿಜಯಾ ಕಲಾವಿದರು ಅಭಿನಯಿಸಿದ, ಹರೀಶ್ ಪಡುಬಿದ್ರಿಯವರ ರಚನೆಯ ವಿಜಯಕುಮಾರ್ ಕೊಡಿಯಾಲ್‌ಬಲ್ ನಿರ್ದೇಶನದ ಈ ಬಾರಿಯ “ಅಮ್ಮು ಆಮುಂಡರಾ” ತುಳು ನಾಟಕ ಪ್ರದರ್ಶನ ನಡೆಯಿತು.

ವರದಿ : ಈಶ್ವರ ಎಂ. ಐಲ್

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English