ಮಂಗಳೂರು: ಗುಜರಾತ್ ನ ರಾಜ್ ಕೋಟ್ ನಲ್ಲಿ ನವೆಂಬರ್ ೩೦ ರಂದು ಮುಕ್ತಾಯಗೊಂಡ 68ನೇ ಎಸ್ ಜಿ ಎಫ್ಐ (ಸ್ಕೂಲ್ ಗೇಮ್ಸ್) ರಾಷ್ಟ್ರಮಟ್ಟದ ಈಜುಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ಅಂಡರ್ 19 ಬಾಲಕರ ವಿಭಾಗದ 50 ಮತ್ತು 100 ಮೀಟರ್ ಬಟರ್ ಫ್ಲೈ, 50 ಮೀಟರ್ ಫ್ರಿಸ್ಟೈಲ್, 4 x 100 ಫ್ರಿಸ್ಟೈಲ್ ರಿಲೇ, 4 x 100 ಮಿಡ್ಲೆ ರಿಲೇ ಈಜುಸ್ಪರ್ಧೆಯಲ್ಲಿ ಮಂಗಳಾ ಈಜು ಕ್ಲಬ್ ನ ಸದಸ್ಯ ಚಿಂತನ್ ಎಸ್. ಶೆಟ್ಟಿ ಇವರು 5 ಚಿನ್ನದ ಪದಕಗಳನ್ನು ಗಳಿಸಿ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿರುತ್ತಾರೆ.
ಇವರು ರಾಮಕೃಷ್ಣ ಪದವಿ ಪೂರ್ವ ಕಾಲೇಜು, ಮಂಗಳೂರು ಇಲ್ಲಿನ ವಿದ್ಯಾರ್ಥಿಯಾಗಿರುತ್ತಾರೆ. ಇವರು ಕ್ಲಬ್ಬಿನ ಹಿರಿಯ ಈಜು ತರಬೇತುದಾರರಾದ ಶ್ರೀ ಎಂ. ಶಿವಾನಂದ ಗಟ್ಟಿ ಇವರ ಮಾರ್ಗದರ್ಶನದಲ್ಲಿ ಮುಖ್ಯ ತರಬೇತುದಾರರಾದ ಶ್ರೀ ಶಿಶಿರ್ ಎಸ್. ಗಟ್ಟಿ (ಎನ್.ಐ.ಎಸ್), ತರಬೇತುದಾರರಾದ ಶ್ರೀ ಕೀರ್ತನ್ ಎಸ್. ಶೆಟ್ಟಿ, ಶ್ರೀ ಚೇತನ್ ಎಸ್. ಶೆಟ್ಟಿ, ಶ್ರೀ ರಾಜೇಶ್ ಖಾರ್ವಿ ಬೆಂಗ್ರೆ ಹಾಗೂ ಶ್ರೀ ಪ್ರಥಮ್ ಕುಂದರ್ ಇವರಿಂದ ಎಮ್ಮೆಕೆರೆ ಸ್ಮಾರ್ಟ್ ಸಿಟಿ ಅಂತರಾಷ್ಟ್ರೀಯ ಈಜು ಕೊಳ ಹಾಗೂ ಮಂಗಳೂರು ಮಹಾನಗರಪಾಲಿಕೆ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಪ್ರಸ್ತುತ ಬೆಂಗಳೂರು ಲಕ್ಷ್ಮಿ ಸ್ಪೋಟ್ಸ್೯ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಚಿಂತನ್ ಶೆಟ್ಟಿ ಅವರು ಶಶಿಧರ ಶೆಟ್ಟಿ ಮತ್ತು ಹರಿಣಾಕ್ಷಿ ಎಸ್ ಶೆಟ್ಟಿ ಇವರ ಪುತ್ರ.
Click this button or press Ctrl+G to toggle between Kannada and English