ಬರಹವು ಕಬ್ಬಿನ ಜಲ್ಲೆ ಯಂತೆ ಜಗಿದಷ್ಟು ಸಿಹಿಯಾಗಿರಬೇಕು : ರೇಖಾ ಸುದೇಶ್ ರಾವ್

11:05 PM, Sunday, December 1st, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮೈಸೂರು : ಮೈಸೂರಿನ ಲೇಖಕ , ಸಾಮಾಜಿಕ ಚಿಂತಕ ಎನ್.ವಿ. ರಮೇಶ್ ಅವರ 74 ರ ಜನ್ಮ ದಿನಾಚರಣೆ ಅಂಗವಾಗಿ ಮೈಸೂರಿನ ನಮನ ಕಲಾ ಮಂಟಪದಲ್ಲಿ ರಾಜ್ಯದ ಲೇಖಕರಿಗೆ ನಡೆಸಲಾದ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಹಾಗು ಲೇಖಕರಿಗೆ “ನಾನೇಕೆ ಬರೆಯುತ್ತೇನೆ ” ಎಂಬ ವಿಷಯದ ಕುರಿತಾದ ವಿಚಾರ ಸಂಕಿರಣ 1/12/2024 ರ ಅದಿತ್ಯವಾರದಂದು ನಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರಿನ ಲೇಖಕಿ , ಕವಯತ್ರಿ, ಶಿಕ್ಷಕಿ ರೇಖಾ ಸುದೇಶ್ ರಾವ್ ಮಾತನಾಡಿ ಬರಹವು ಕಬ್ಬಿನ ಜಲ್ಲೆ ಯಂತೆ ಜಗಿದಷ್ಟು ಸಿಹಿ ಬರುವಂತೆ ಬರಹ ಓಡಿದಷ್ಟು ಮತ್ತೆ ಮತ್ತೆ ಓದಬೇಕು ಎನ್ನುವ ಹಂಬಲ ಹುಟ್ಟಬೇಕೆ ಹೊರತು ಈ ಕೃತಿ ಯಾಕಾದರೂ ಓದುತ್ತಿದ್ದೇನೆ ಎಂಬ ಭಾವನೆ ಓದುಗರಿಗೆ ಮೂಡಬಾರದು ಎಂದ ಅವರು ಭಾವನೆ ಕಲ್ಪನೆಗಳ ಆಗರ ಬರಹ ಎಂದು ಹೇಳಿದರು.

ಮುಂದುವರಿದು ಮಾತನಾಡುತ್ತಾ ತನ್ನ ಬರಹಕ್ಕೆ ಹಲವಾರು ಕಿರಿಯ ಕಿರಿಯ ಸಾಹಿತಿಗಳ ಜೀವನ ಗಾತೆ ಪ್ರೇರಣೆ ಎಂದು ಅವರು ಹೇಳಿದರು.

ಕೊಪ್ಪಳದ ಲೇಖಕಿ ಅನುಸೂಯ ಜಹಾಂಗೀರ್ ಧಾರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಎನ್.ವಿ.ರಮೇಶ್ , ಸ್ಮೈಲ್ ಶಿವ್, ಲೇಖಕ ದಾ.ಕೊಲ್ಚಪ್ಪೇ ಗೋವಿಂದ ಭಟ್. ಕಾದಂಬರಿಕಾರ ಪೀ .ವಿ. ಪ್ರದೀಪ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English