ಮುಸ್ಸಂಜೆಯಲ್ಲಿ ಮುದಗೊಳಿಸಿದ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಮೆರವಣಿಗೆ

1:47 AM, Wednesday, December 11th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ 30ನೇ ರ‍್ಷದ ಆಳ್ವಾಸ್ ವಿರಾಸತ್‌ನ ಮೊದಲ ದಿನವಾದ ಮಂಗಳವಾರ ಉದ್ಘಾಟನೆಯ ಬಳಿಕ ಮೂಡಿಬಂದದ್ದು, ಶ್ರದ್ಧೆ-ಭಕ್ತಿಯ ನಾಡು-ನುಡಿಯ ಕಲಾ ವೈಶಿಷ್ಟ್ಯತೆಯ ಸಾಂಸ್ಕೃತಿಕ ವೈಭವ. ಭಾರತದ ಭವ್ಯ ಸಂಸ್ಕೃತಿಯ ಕಲಾರೂಪವೇ ಧರೆಗಿಳಿದು ಬಿದಿರೆಯ ನಾಡಿಗೆ ಬಂದಂತೆ ಭಾಸವಾಯಿತು. ಉತ್ತರ ಭಾರತದಿಂದ ಹಿಡಿದು ದಕ್ಷಿಣದ ತುತ್ತ ತುದಿವರೆಗಿನ ವೈವಿಧ್ಯ ಕಲಾಪ್ರಕಾರಗಳೂ ಮಾತ್ರವಲ್ಲ, ಶ್ರೀಲಂಕಾ ಸೇರಿದಂತೆ ನೆರೆಹೊರೆ ರಾಷ್ಟ್ರಗಳ ಸಂಸ್ಕೃತಿ ಶ್ರೀಮಂತಿಕೆಗೆ ಆಳ್ವಾಸ್ ಆವರಣ ಸಾಕ್ಷಿಯಾಯಿತು.

ಕರ‍್ಯಕ್ರಮದಲ್ಲಿ ಸಾನಿಧ್ಯವಿದ್ದ ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕರ‍್ತಿ ಪಂಡಿತಾಚರ‍್ಯರ‍್ಯ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಕೊಂಡೆವೂರು ಯೋಗಾನಂದ ಸ್ವಾಮೀಜಿ, ಕೊಂಡವೂರು, ಮಾಣಿಲ ಮೋಹನದಾಸ ಸ್ವಾಮೀಜಿ ಹಾಗೂ ಕಟೀಲು ದೇವಳದ ಆನುವಂಶಿಕ ಮೊಕ್ತೇಸರ ಲಕ್ಷ್ಮೀ ನಾರಾಯಣ ಅಸ್ರಣ್ಣ ಅವರು ವೇದಿಕೆಯ ಬಲಭಾಗದಲ್ಲಿದ್ದ ರಥದಲ್ಲಿ ದೇವರ ಪ್ರತಿಷ್ಠಾಪನೆ ಮಾಡಿ ಭವ್ಯ ಸಾಂಸ್ಕೃತಿಕ ಮೆರವಣಿಗೆಗೆ ಚಾಲನೆ ನೀಡಿದರು.

ನಿಗದಿಯಂತೆ ಕ್ಲುಪ್ತ ಸಮಯಕ್ಕೆ ಆರಂಭಗೊಂಡ ಈ ಭವ್ಯ ಸಾಂಸ್ಕೃತಿಕ ಮೆರವಣಿಗೆಯು ಜಾತ್ರೆಯ ಮೆರುಗನ್ನು ಮೂಡಿಸಿತು. ಇಕ್ಕೆಲೆಗಳಲ್ಲಿ ರಥದ ಸ್ವರೂಪ, ಯಕ್ಷ ಕಿರೀಟ, ಮುಖವಾಡ, ನವಿಲು, ಗಣಪ, ಬೃಹತ್ ಕಾಲುದೀಪಗಳಿಂದ ಶೋಭಾಯಮಾನವಾದ ಸಭಾಂಗಣದಲ್ಲಿ ಸಂಜೆ 6.35ರಿಂದ ರಾತ್ರಿ 8.30ರ ವರೆಗೆ 150ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾ ತಂಡಗಳಿಂದ 4000 ಸಾವಿರಕ್ಕೂ ಮಿಕ್ಕಿದ ಕಲಾವಿದರನ್ನು ಒಳಗೊಂಡ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಿತು.

ಶಂಖ, ದಾಸಯ್ಯ, ಕೊಂಬು, ರಣ ಕಹಳೆ, ಕಹಳೆ, ಕಾಲ ಭೈರವ, ಕೊರಗಡೋಲು, ಸ್ಯಾಕ್ಸೋಫೋನ್, ಬ್ಲಾಕ್ ಎನಿಮಲ್, ನಂದಿ ಧ್ವಜ, ಸುಗ್ಗಿ ಕುಣಿತ, ಶ್ರೀರಾಮ, ಪರಶುರಾಮ, ಘಟೋತ್ಕಜ , ಊರಿನ ಚೆಂಡೆ, ತಟ್ಟಿರಾಯ, ನಾದಸ್ವರ ತಂಡ, ಕೊಡೆಗಳು, ಪರ‍್ಣಕುಂಭ, ಲಂಗ ದಾವಣಿ ತರುಣಿಯರು, ಅಪ್ಸರೆಯರು, ಯಕ್ಷಗಾನ ವೇಷ, ಗೂಳಿ ಮತ್ತು ಕಟ್ಟಪ್ಪ, ಗೊರವರ ಕುಣಿತ, ಕಿಂದರಿ ಜೋಗಿ, ಸೋಮನ ಕುಣಿತ, ಆಂಜನೇಯ ಮತ್ತು ವಾನರ ಸೇನೆ, ಮಹಾಕಾಳೆಶ್ವರ, ಶಿವ, ಮರಗಾಲು, ತಮಟೆ ವಾದನ, ಆಂಜನೇಯ, ಮಹಿಳಾ ಪಟ ಕುಣಿತ, ಕಂಬಳ ಚಿತ್ರಣ, ಹುಲಿವೇಷ , ತೆಯ್ಯಮ್, ಚಿಟ್ಟೆ ಮೇಳ, ಶಿವ ಮತ್ತು ಅಘೋರಿಗಳು, ಕಿಂಗ್ ಕಾಂಗ್, ಶಿಲ್ಪಾ ಗೊಂಬೆ ಬಳಗ, ಆಳ್ವಾಸ್ ಗೊಂಬೆ ಬಳಗ, ಚೈನೀಸ್ ಡ್ರ‍್ಯಾಗನ್, ಚೈನಾ ಲಯನ್, ಬ್ಯಾಂಡ್ ಸೆಟ್, ಆಳ್ವಾಸ್ ಕರ‍್ಟೂನ್ಸ್, ಸ್ನೇಹ ಗೊಂಬೆ ಬಳಗ, ಚಿಲಿಪಿಲಿ ಬೊಂಬೆ, ವಂಶಿಕಾ ಗೊಂಬೆ ಬಳಗ, ಬಿದಿರೆ ಮೂಡುಬಿದಿರೆ ಗೊಂಬೆಗಳು, ಶೆಟ್ಟಿ ಬೊಂಬೆಗಳು, ಶಾರದಾ ರ‍್ಟ್ಸ್ ಗೊಂಬೆ, ಶಾರದಾ ರ‍್ಟ್ಸ್ ಚೆಂಡೆ, ಟಾಲ್ ಮ್ಯಾನ್, ಹಿಮ ಕರಡಿ ಗೊಂಬೆ, ಚಿರತೆ ಗೊಂಬೆ, ಏರ್ ಬಲೂನ್ ಬೊಂಬೆ, ಕರಡಿ ಗೊಂಬೆ, ಗಜಹುಲಿ, ಕಾಟಿ, ಗಣಪತಿ, ನರಸಿಂಹ, ಹುಲಿ, ಬೋಳಾರ್ ಮತ್ತು ಟೀಮ್ ರ‍್ತನ, ವಾರ್ ಕ್ರಾಫ್ಟ್, ಚಿಟ್ಟೆ, ಸಿಂಗಳೀಕ, ಗಣಪತಿ, ಜೋಡಿ ಸಿಂಹ, ಜೋಡಿ ಜಿಂಕೆ, ಚಿತ್ರದರ‍್ಗ ಬ್ಯಾಂಡ್, ಪೂಜಾಕುಣಿತ, ಬೇಡರ ಕುಣಿತ, ಮಹಿಳೆಯರ ಕೋಲಾಟ, ಹಗಲುವೇಷ, ಕೋಳಿಗಳು, ನಾಸಿಕ್ ಬ್ಯಾಂಡ್, ಮೀನುಗಳು, ಕರ‍್ಟೂನ್ಸ್, ಪುರವಂತಿಕೆ, ವೀರಭದ್ರನ ಕುಣಿತ, ಜಗ್ಗಳಿಕೆ ಮೇಳ, ಪಟದ ಕುಣಿತ, ಕೊಂಚಾಡಿ ಚೆಂಡೆ, ಶ್ರೀಲಂಕಾ ಕಲಾವಿದರು, ಶ್ರೀಲಂಕಾದ ಮುಖವಾಡ, ವೀರಗಾಸೆ, ಕರಡಿ ಮಜಲು, ಕಂಸಾಳೆ, ಪುರುಷರ ನಗಾರಿ, ಮಹಿಳೆಯರ ನಗಾರಿ, ದಪ್ಪು, ತಿರುವಾದಿರ, ಡೊಳ್ಳು ಕುಣಿತ, ಪಂಚವಾದ್ಯ, ಎಂಜೆಲ್ಸ್, ಎಲ್ವ್ಸ್, ಸಂತಾಕ್ಲಾಸ್, ನಾಸಿಕ್ ಬ್ಯಾಂಡ್, ಶಿಂಗಾರಿ ಮೇಳ, ರ‍್ಧ ನಾರೀಶ್ವರ, ಪೂಕಾವಡಿ, ಕೇರಳದ ಚಿಟ್ಟೆ, ಕಥಕ್ಕಳಿ ವೇಷ, ಕೇರಳದ ಅರೆನಾ ವೇಷ, ಕೇರಳದ ಕಮಲ ವೇಷ, ತಮಿಳುನಾಡಿನ ನೃತ್ಯ, ಶೃಂಗಾರಿ ಮೇಳ, ಕೇರಳದ ದೇವರ ವೇಷ, ಕೇರಳದ ದೇವರ ವೇಷ, ಕೇರಳದ ಡಿಜಿಟಲ್ ವೇಷ, ತೆಯ್ಯಮ್ ಉಡುಪಿ, ಬ್ಲೂ ಬ್ರಾಸ್ ಬ್ಯಾಂಡ್, ಕೋಳಿ ಉಡುಪಿ, ಮೀನುಗಳು ಉಡುಪಿ, ಕಾಮಿಡಿಯನ್ಸ್, ಗರುಡ , ದಪ್ಪು, ಕ್ಯಾರಲ್, ಡೊಳ್ಳು ಕುಣಿತವು ಸಾಗಿಬಂತು.

ಅದರೊಂದಿಗೆ ಎನ್.ಸಿ.ಸಿ-ನೇವಲ್, ಎನ್.ಸಿ.ಸಿ- ಆರ್ಮಿ , ಎನ್.ಸಿ.ಸಿ-ಏರ್ ಫರ‍್ಸ್, ಆಳ್ವಾಸ್ ಬ್ಯಾಂಡ್ ಸೆಟ್, ಸ್ಕೌಟ್ಸ್ ಮತ್ತು ಗೈಡ್ಸ್, ರೋರ‍್ಸ್, ರೇಂರ‍್ಸ್ ಪಥಸಂಚಲನ ಸಾಥ್ ನೀಡಿತು.

ಇಂದ್ರಲೋಕವೇ ಧರೆಗಿಳಿದು ಬಂದಂತೆ, ಪುಟಾಣಿಗಳಿಂದ ಹಿಡಿದು ಹಿರಿಯರೆಲ್ಲ ಸೇರಿದ್ದ ಸಭಾಂಗಣವಿಡೀ ನಂದನವನದಂತೆ ಕಂಡು ಬಂತು.

ಆ ಬಳಿಕ ವೇದಘೋಷಗಳು, ಭಜನೆಗಳು, ಪುಷ್ಪಪಲ್ಲಕ್ಕಿಗಳು, ಮಂಗಳವಾದ್ಯಗಳೊಂದಿಗೆ ಹುಲಿ, ಸಣ್ಣ ರಥದಲ್ಲಿ ವಿಘ್ನನಿವಾರಕ ಗಣಪತಿ ಹಾಗೂ ಪಲ್ಲಕ್ಕಿಯಲ್ಲಿ ಶಕ್ತಿ ಮತ್ತು ಭಕ್ತಿಯ ಪ್ರತೀಕವಾಗಿ ಹನುಮಂತ, ಸಂಪತ್ತಿನ ಧ್ಯೋತಕವಾದ ಮಹಾಲಕ್ಷ್ಮಿ ಹಾಗೂ ವಿದ್ಯಾಮಾತೆ ಮಹಾ ಸರಸ್ವತಿ ಮರ‍್ತಿಗಳನ್ನು ಕರೆ ತರಲಾಯಿತು. ರಥದಲ್ಲಿ ಪೀಠಸ್ಥರಾದ ರ‍್ಯಾದಾ ಪುರುಷೋತ್ತಮ ಶ್ರೀರಾಮ ಹಾಗೂ ಜೀವನೋಲ್ಲಾಸದ ಪ್ರತೀಕ ಶ್ರೀ ಕೃಷ್ಣಾದಿ ಆರೂಢ ದೇವರ ಮೆರವಣಿಗೆಯೊಂದಿಗೆ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ರಥ ಸಂಚಲನ ಶ್ರದ್ಧೆ ಭಕ್ತಿಯಿಂದ ನಡೆಯಿತು.

ರಥಯಾತ್ರೆಯ ಮುಂಭಾಗದಲ್ಲಿ ಮೈಸೂರು, ಪಂಡರಾಪುರ ಹಾಗೂ ಮಂಗಳೂರು ಹರೇಕೃಷ್ಣ ಪಂಥದ ಭಜನಾ ತಂಡಗಳ ಭಜನೆ ಹಾಡಿನ ಮೂಲಕ ಭಕ್ತಿ ಪ್ರಭಾವಳಿ ಮೂಡಿಸಿದರು. ಅರ್ಚಕರು ಮಂತ್ರ ಘೋಷ ಮಾಡಿದರು. ಕೊಂಬು, ಕಹಳೆ ನಾದ ಮೊಳಗಿದವು. ಛತ್ರಿ, ಚಾಮರಗಳೊಂದಿಗೆ ದೊಂದಿಗಳು ಬೆಳಗಿದವು. ಮಂಗಳ ವಾದ್ಯ ನಿನಾದ ಮೂಡಿಸಿತು.

ಹರಿದ್ವಾರದಿಂದ ಬಂದ ವಿಪುಲ್ ರ‍್ಮಾ ನೇತೃತ್ವದ ಗಂಗಾರತಿ ತಂಡವು ಮಂತ್ರ ಘೋಷಗಳೊಂದಿಗೆ ಆರತಿ ಬೆಳಗಿದಾಗ ಶ್ರದ್ಧೆ -ಭಕ್ತಿಯ ಪ್ರಜ್ವಲನವಾಯಿತು. ಭಕ್ತರು ಜಯಕಾರ ಹಾಕಿದರು. ಭಕ್ತರು ಭಾವಪರವಶರಾದರು. ಆಗಸದಲಿ ಮೂಡಿದ ಪಟಾಕಿಯ ಸಿಂಚನ- ಸಿಡಿಮದ್ದು ಜಾತ್ರೆಯನ್ನು ನೆನಪಿಸಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English