ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಇದರ ನಾರು ಮಂಡಳಿ ಪ್ರಾದೇಶಿಕ ಕಚೇರಿ ಆಶ್ರಯದಲ್ಲಿ ಯೆಯ್ಯಾಡಿಯಲ್ಲಿ ಬುಧವಾರ ಬೆಳಿಗ್ಗೆ `ನಾರು ಕುರಿತ ಕಾರ್ಯಗಾರ’ವನ್ನು ಸಂಸದ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.
ಕಾರ್ಯಗಾರಗಳ ಮೂಲಕ ಸರಕಾರದ ಯೋಜನೆಗಳು ಜನಸಾಮಾನ್ಯರ ಬಳಿಗೆ ತಲುಪುವಂತಾಗಬೇಕು. ಇಂತಹ ಕಾರ್ಯಗಾರಗಳಲ್ಲಿ ಜನರು ಭಾಗವಹಿಸುವ ಮೂಲಕ ಸ್ವಂತ ಉದ್ದಿಮೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಉದ್ಘಾಟನೆ ಬಳಿಕ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಸರಕಾರದ ಯೋಜನೆಗಳನ್ನು ಅಧಿಕಾರಿಗಳು ಜನರಿಗೆ ತಲುಪಿಸುವ ಮೂಲಕ ಸಫಲಗೊಳಿಸಬೇಕು. ತಾಲೂಕು ಮಟ್ಟದ ಯೋಜನೆಗಳನ್ನು ಜಿಲ್ಲಾ ಮಟ್ಟಕ್ಕೂ ತಲುಪಿಸಲು ಅಧಿಕಾರಿಗಳು ಜವಾಬ್ದಾರಿ ವಹಿಸಬೇಕು ಎಂದು ನಳಿನ್ ತಿಳಿಸಿದರು.
ಶಾಸಕ ಯು.ಟಿ. ಖಾದರ್ ನಮ್ಮ ಜಿಲ್ಲೆಯಲ್ಲಿ ಅಧಿಕವಾಗಿ ಸಿಗುವ ತೆಂಗಿನ ನಾರು ಮತ್ತು ಅವುಗಳ ಉಪಯುಕ್ತತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹೆಚ್ಚು ಮಾಡಬೇಕು. ಸಣ್ಣ ಕೈಗಾರಿಕೆಗಳು ಹೆಚ್ಚು ಸಫಲವಾಗಲು ಸರಕಾರ ಹೆಚ್ಚು ಅನುದಾನ ನೀಡಬೇಕು ಎಂದುಹೇಳಿದರು.
ನಾರು ಮಂಡಳಿ ಸದಸ್ಯ ಟಿ.ಎಂ.ಶಾಹಿದ್, ವಾಣಿಜ್ಯ ಇಲಾಖೆ ಜಂಟಿ ನಿದೇಶಕ ಚಂದ್ರಶೇಖರ. ದ.ಕ.ಜಿಲ್ಲಾ ಸಣ್ಣ ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಧರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English