ಬಜೊಡಿಯ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆದ 2013ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭ

5:39 PM, Monday, January 28th, 2013
Share
1 Star2 Stars3 Stars4 Stars5 Stars
(No Ratings Yet)
Loading...

Sandesha Awardsಮಂಗಳೂರು : ಸಂದೇಶ ಪ್ರತಿಷ್ಠಾನ ನೀಡುವ 2013ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭವು ಭಾನುವಾರ ಸಂಜೆ ಬಜೊಡಿಯ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆಯಿತು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 9 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಕರಾವಳಿ ಅಂದರೆ ಸಾಮರಸ್ಯದ ಕಲಾವಳಿ. ಇಲ್ಲಿ ಮತ, ಧರ್ಮ, ಭಾಷೆ, ಸಂಸ್ಕೃತಿಯ ವೈವಿಧ್ಯ ನಲಿದಾಡುತ್ತಿರುತ್ತದೆ. ಬಹುತ್ವವನ್ನು ಗಟ್ಟಿಗೊಳಿಸುವ ಸಂದೇಶ ಸಾರುವ ಸಾಂಸ್ಕೃತಿಕ ಪ್ರಭಾವಳಿ, ತನ್ನ ವಿವೇಕ ತಂಡದ ಮೊದಲ ನಾಟಕದ ಪಯಣ ಆರಂಭವಾಗಿದ್ದೇ ಕರಾವಳಿಯ ಕಟಪಾಡಿಯಿಂದ. ಅದು ಈಗ ಸಂದೇಶ ಪ್ರಶಸ್ತಿ ತನಕ ಮುಟ್ಟಿದೆ. ಭಾರತದಲ್ಲಿ ಜನಾಂಗೀಯ ಸಾಮರಸ್ಯ ಗಟ್ಟಿಯಾಗಿ ಉಳಿದಿರುವುದು ಸಂಗೀತದಿಂದ. ಇದನ್ನು ಪೋಷಿಸುವ ಸಂದೇಶವು ಪ್ರದರ್ಶನ ಕಲೆಯ ಕೋರ್ಸ್ ನಿಲ್ಲಿಸಬಾರದು ಎಂದು ಕನ್ನಡ ಪ್ರಸಿದ್ಧ ಚಲನಚಿತ್ರ ಸಂಗೀತಕಾರ ಹಂಸಲೇಖ ರವರು ಪ್ರಶಸ್ತಿ ಸ್ವೀಕರಿಸಿ ಹೇಳಿದರು.

ಸಂದೇಶ ಪತ್ರಿಕಾ ನಿವೃತ್ತ ಪತ್ರಕರ್ತ ಅರ್ಜುನ್‌ದೇವ ಮಾತನಾಡಿ, ಇಂದಿನ ಕ್ಷೋಭೆಗಳಿಗೆ ಮಾಧ್ಯಮ, ಸಿನಿಮಾ, ಮೊಬೈಲ್ ಕಾಣಿಕೆ ನೀಡುತ್ತಿವೆ. ರೂಪಾಂತರಗೊಳ್ಳುತ್ತಿರುವ ಮಾಧ್ಯಮಕ್ಕೆ ಸಾಮಾಜಿಕ ಜವಾಬ್ದಾರಿ ಇದೆ. ಪತ್ರಕರ್ತರು ಕುಚೋದ್ಯ, ಕುಚೇಷ್ಟೆ ಮಾಡಬಾರದು. ನಾಳಿನ ಪರಿಣಾಮ ಬಗ್ಗೆ ಯೋಚಿಸಿ ಬರೆಯಬೇಕು. ಪತ್ರಕರ್ತರು ವೃತ್ತಿಯಲ್ಲಿ ಇರುವಷ್ಟು ದಿನ ಉಂಡ ಬಾಳೆಲೆಯಂತೆ. ವೃತ್ತಿಯಿಂದ ಹೊರಬಂದ ತಕ್ಷಣ ತೆಗೆದು ಬಿಸಾಕುತ್ತಾರೆ. ಆದ್ದರಿಂದ ವೃತ್ತಿ ಬಗ್ಗೆ ಭಯ, ಭಕ್ತಿಯಿಂದ ಯಾರಿಗೂ ಅಂಜದೆ ಕೆಲಸ ಮಾಡಬೇಕು ಎಂದರು.

ಉಳಿದಂತೆ ಸಂದೇಶ ಸಾಹಿತ್ಯ ಪ್ರಶಸ್ತಿಯನ್ನು ಪ್ರಸಿದ್ಧ ಸಾಹಿತಿ ಕುಂ.ವೀರಭದ್ರಪ್ಪ, ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ಲಿಯೋ ಡಿಸೋಜ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿಯನ್ನು ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಸಂದೇಶ ಕಲಾ ಪ್ರಶಸ್ತಿಯನ್ನು ಜಯಲಕ್ಷ್ಮೀ ಆಳ್ವ, ಸಂದೇಶ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರೊ.ಕೆ.ಇ.ರಾಧಾಕೃಷ್ಣ, ಕೊಂಕಣಿ ಕೋಗಿಲೆ ವಿಲ್ಫಿ ರೆಬಿಂಬಸ್ ಸ್ಮಾರಕ ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಯನ್ನು ಫಾದರ್ ವೆಲೇರಿಯನ್ ಮೆಂಡೋನ್ಸ ಮತ್ತು ಸಂದೇಶ ವಿಶೇಷ ಮಾನ್ಯತಾ ಪ್ರಶಸ್ತಿಯನ್ನು ಯು.ಸಿ. ಪೌಲೋಸ್ ಸ್ವೀಕರಿಸಿದರು.

ಸಂದೇಶ ಪ್ರತಿಷ್ಠಾನದ ಅಧ್ಯಕ್ಷ, ಬಳ್ಳಾರಿ ಬಿಷಪ್ ಡಾ.ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಐಜಿಪಿ ಪ್ರತಾಪ್ ರೆಡ್ಡಿ ಮುಖ್ಯ ಅತಿಥಿಯಾಗಿದ್ದರು. ಸಂದೇಶದ ಪ್ರಿನ್ಸಿಪಾಲ್ ಫಾದರ್ ಜಯಪ್ರಕಾಶ್ ಡಿಸೋಜ, ಆಯ್ಕೆ ಸಮಿತಿ ಅಧ್ಯಕ್ಷ ಡಾ.ನಾ. ಡಿಸೋಜ, ಟ್ರಸ್ಟಿಗಳಾದ ರೋಯ್ ಕ್ಯಾಸ್ಟಲಿನೊ, ಪಿ.ಎಂ. ಕ್ಯಾಸ್ಟಲಿನೊ, ಜಯನಾಥ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English