ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ರೋಹನ್ ಕಾಪೋ೯ರೇಶನ್ ನಡೆಸಿದ ಎರಡು ದಿನಗಳ ಬೀಚ್ ಉತ್ಸವ ಭಾನುವಾರ ಸಮಾರೋಪಗೊಂಡಿತು.
ಮಂಗಳೂರು ಉತ್ತರ. ಶಾಸಕ ಭರತ್ ಶೆಟ್ಟಿ ಅವರು ಸಮಾರೋಪದಲ್ಲಿ ಮಾತನಾಡಿ, ಬೀಚ್ ಉತ್ಸವದಿಂದ ಪ್ರವಾಸೋದ್ಯಮಕ್ಕೆ ಹೆಚ್ಚು ಉತ್ತೇಜನ ದೊರಕಲಿದೆ. ಕರಾವಳಿಯ ಸೊಬಗನ್ನು ಹೆಚ್ಚಿಸಲು ಇಂತಹ ಕಾಯ೯ಕ್ರಮಗಳು ಇನ್ನಷ್ಟು ನಡೆಯಲಿ ಎಂದು ಹೇಳಿದರು.
ಸಮಾರಂಭದಲ್ಲಿ ಮೇಯರ್ ಮನೋಜ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್, ನಗರ ಪೊಲೀಸ್ ಕಮೀಷನರ್ ಅನುಪಮ್ ಅಗ್ರವಾಲ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್ ಕುಮಾರ್, ಉದ್ಯಮಿ ರೋಹನ್ ಮೊಂಥೆರೋ, ಮೂಡಾ ಆಯುಕ್ತ ನೂರ್ ಜಹರಾ ಖಾನಂ , ಪಿಲಿಕುಲ ಆಯುಕ್ತ ಡಾ. ಅರುಣ್ ಶೆಟ್ಟಿ, ಆರ್ ಟಿ ಓ ಶ್ರೀಧರ್ ಮಲ್ನಾಡ್, ಮತ್ತಿತರರು ಉಪಸ್ಥಿತರಿದ್ದರು.
ರವಿವಾರ ಕಡಲ ಕಿನಾರೆಯಲ್ಲಿ ಯೋಗ ಕಾಯ೯ಕ್ರಮ, ಉದಯ ರಾಗ, ಜಲಕ್ರೀಡೆ, ಮರಳು ಶಿಲ್ಪ ಸ್ಪಧೆ೯ ನಡೆಯಿತು. ಸಮಾರೋಪದ ಬಳಿಕ ನೃತ್ಯೋತ್ಸವ ಹಾಗೂ ಖ್ಯಾತ ಗಾಯಕ ರಘು ದೀಕ್ಷಿತ್ ಅವರ ಲೈವ್ ಕಾಯ೯ಕ್ರಮ ನಡೆಯಿತು.
Click this button or press Ctrl+G to toggle between Kannada and English