ಬಿಜೈ ಮಸಾಜ್ ಸಲೂನ್ ರಾಮಸೇನಾ ಕಾರ್ಯಕರ್ತರ ದಾಳಿ, 14 ಮಂದಿಯ ಬಂಧನ

12:11 AM, Friday, January 24th, 2025
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ನಗರದ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಆದಿತ್ಯ ಕಾಂಪ್ಲೆಕ್ಸ್‌ನಲ್ಲಿರುವ “ಕಲರ್ಸ್” ಯುನಿಸೆಕ್ಸ್ ಮಸಾಜ್ ಸಲೂನ್ ನಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರ ಮತ್ತು ಇತರ ಕಾರ್ಯಕರ್ತರು ದಾಳಿ ನಡೆಸಿ ಸಲೂನ್ ನಲ್ಲಿರುವ ವಸ್ತುಗಳನ್ನು ಧ್ವಂಸಗೊಳಿಸಿದ ಬಗ್ಗೆ ದೂರು ನೀಡಲಾಗಿದೆ.

ಈ ಘಟನೆ ಬೆಳಗ್ಗೆ ಸುಮಾರು 11:50 ಕ್ಕೆ ನಡೆದಿದ್ದು ಸಲೂನ್ ಮಾಲಕರಾದ ಸುಧೀರ್ ಶೆಟ್ಟಿ ಬರ್ಕೆ ಪೊಲೀಸರಿಗೆ ದೂರು ನೀಡಿದ್ದು ಅದರಂತೆ ಸುಮಾರು ಹದಿನಾಲ್ಕು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೇಲೆ 11 ಮಂದಿಯ ಗುಂಪು ಏಕಾಏಕಿ ಮಸಾಜ್‌ ಸಲೂನ್ ಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಮಸಾಜ್‌ ಸೆಂಟರ್‌ ನಲ್ಲಿರುವವರಿಗೆ . ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಮಹಿಳಾ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿದರು, ಸಲೂನ್ ಅನ್ನು ಧ್ವಂಸಗೊಳಿಸಿದರು.ಉಪಕರಣಗಳು, ಮತ್ತು ನೌಕರರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಲಾಗಿದೆ.

ಆರೋಪಿಗಳಾದ ಬಂಟ್ವಾಳ ತಾಲೂಕು ಪರಂಗಿಪೇಟೆಯ ಹರ್ಷರಾಜ್ @ ಹರ್ಷಿತ್, ವಾಮಂಜೂರು ಮೂಡುಶೆಡ್ಡೆಯ ಮೋಹನ್ ದಾಸ್ @ ರವಿ, ಕಾಸರಗೋಡು ಉಪ್ಪಳದ ಪುರಂದರ, ವಾಮಂಜೂರು ಅಂಬೇಡ್ಕರ್ ನಗರದ ಸಚಿನ್, ವಾಮಂಜೂರು ಉಳಾಯಿಬೆಟ್ಟು ರವೀಶ್, ಬಂಟ್ವಾಳ ತಾಲೂಕು ಬೆಂಜನಪದವಿನ ಸುಕೇತ್, ವಾಮಂಜೂರಿನ ಅಂಕಿತ್, , ವಾಮಂಜೂರು ಮೂಡುಶೆಡ್ಡೆ ಶಿವಾಜಿನಗರದ ದೀಪಕ್, ತಾರಿಗುಡ್ಡೆ, ಬೊಂಡಂತಿಲದ ವಿಘ್ನೇಶ್, ಮಂಗಳೂರು ಅಮರ್ ಆಳ್ವ ರಸ್ತೆ, ಮಂಕಿ ಸ್ಟ್ಯಾಂಡ್ನ ಶರಣ್ ರಾಜ್, ವಾಮಂಜೂರು ಮೂಡುಶೆಡ್ಡೆ ಶಿವಾಜಿನಗರದ ಪ್ರದೀಪ್ ಪೂಜಾರಿ,ನಿಡ್ಡಲೆ, ಗೋಕರ್ಣ ಪ್ರಸಾದ್ ಅತ್ತಾವರ ಎಂದು ಗುರುತಿಸಲಾಗಿದೆ.

ಬರ್ಕೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅಪರಾಧ ಸಂಖ್ಯೆಃ 06/2025 ರಂತೆ ಠಾಣೆ. ಸೆಕ್ಷನ್ 329(2), 324(5), 74, BNS ನ 351(3), 115(2), 109, 352, ಮತ್ತು 190 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English