ಮಂಗಳೂರು: “ನನ್ನ ಮಗಳು ಬಿ.ಎಸ್.ಅಲ್ಲೋನ್ಸಾ ಎನ್ನುವವಳಾದ ನಾನು 2022ರಲ್ಲಿ ಸೇಂಟ್ ಆನ್ಸ್ ಕಾಲೇಜ್ ಆಫ್ ನರ್ಸಿಂಗ್ ಮುಲ್ಕಿ ಪ್ರವೇಶ ಹೊಂದಿದ್ದಳು. ಮೊದಲ ಶೈಕ್ಷಣಿಕ ವರ್ಷವನ್ನು ಮುಗಿಸಿ ಎರಡನೇ ವರ್ಷಕ್ಕೆ ಪ್ರವೇಶವನ್ನು ಹೊಂದಿದ್ದಳು. ಇದಕ್ಕೆ ಸಂಬಂಧಪಟ್ಟ ಕಾಲೇಜಿನ ಶುಲ್ಕವನ್ನು ಕೂಡ ಭರಿಸಿದ್ದೆ. ಆದರೆ 2024ರಅಕ್ಟೋಬರ್ 5ನೇ ತಾರೀಕಿನಂದು ಮೊಬೈಲ್ ಬಳಕೆ ಮಾಡಿದ್ದಾಳೆ ಎನ್ನುವ ಕಾರಣಕ್ಕೆ ಕಾಲೇಜಿನಿಂದ ಅಮಾನತು ಮಾಡಿ ರಾತ್ರೋ ರಾತ್ರಿ ಮನೆಗೆ ಕಳುಹಿಸಿದ್ದಾರೆ. ಲೋಕಲ್ ಗಾರ್ಡಿಯನ್ ಗೂ ಯಾವುದೇ ರೀತಿಯ ಮಾಹಿತಿ ನೀಡಿರಲಿಲ್ಲ. ನನ್ನ ಪೋಷಕರು ತೆರಳಿ ಕಾರಣ ಕೇಳಿದರು ಕೂಡ ಕಾಲೇಜಿನ ಪ್ರಾಂಶುಪಾಲರಾಗಲಿ, ಕಾಲೇಜಿನ ನಿರ್ದೇಶಕ ಎರಿಕ್ ಲೋಬೋ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ“ಎಂದು ಬಾಲಕಿಯ ತಂದೆ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.
”ಬೇರೆ ಕಾಲೇಜಿಗೆ ಸೇರಲು ಅನೇಕ ಬಾರಿ ಹೋಗಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಅಂಕ ಪ್ರತಿಗಳನ್ನು ಕೇಳಿದರು ಕೂಡ ನೀಡದೆ ಸತಾಯಿಸುತ್ತಿದ್ದಾರೆ. ಈ ಬಗ್ಗೆ 12/12/2024ರಂದು ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಪ್ರಯೋಜವವಾಗಿಲ್ಲ. ಬೇರೆ ಕಾಲೇಜಿಗೆ ಸೇರಲು ಬಿಡದೆ ಮಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದ್ದಾರೆ. ಮುಲ್ಕಿ ನರ್ಸಿಂಗ್ ಕಾಲೇಜಿನ ಎರಿಕ್ ಲೋಬೋ ಮತ್ತು ಅವರ ಪತ್ನಿ ಸರಿತಾ. ಈ ರೀತಿ ಅನೇಕ ವಿದ್ಯಾರ್ಥಿಗಳಿಗೆ ಇದೇ ರೀತಿಯ ಮೋಸವನ್ನು ಮತ್ತು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ವಕೀಲರ ಮೂಲಕ ನೋಟಿಸ್ ನೀಡಿದರು ಅದಕ್ಕೂ ಪ್ರತಿಕ್ರಿಯೆನೀಡುತ್ತಿಲ್ಲ. ಇದರಿಂದ ನಾವು ರೋಸಿಗೋಗಿದ್ದೇವೆ. ಮಾನಸಿಕವಾಗಿ ನೊಂದು ಹೋಗಿದ್ದೇವೆ. ನನ್ನ ಮಗಳ ಜೀವಕ್ಕೆ ಅಪಾಯ ಆದರೆ ಅದಕ್ಕೆ ಆನ್ಸ್ ಕಾಲೇಜ್ ಆಫ್ ನರ್ಸಿಂಗ್ ನಿರ್ದೇಶಕ ಎರಿಕ್ ಲೋಬೋ ಮತ್ತು ಸರಿತಾ ಕಾರಣವಾಗಿರುತ್ತಾರೆ“ ಎಂದು ಆರೋಪಿಸಿದ್ದಾರೆ.
Click this button or press Ctrl+G to toggle between Kannada and English