ಮಂಗಳೂರು : ಅತ್ತಾವರ ವೃತ್ತದ ಬಳಿಯ ಮುರು ಅಂತಸ್ತಿನ ರಾಕ್ಸ್ ಹೆಸರಿನ ಐಸ್‍ಕ್ರೀಂ ಪಾರ್ಲರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಜರಂಗ ದಳ ಮತ್ತು ದುರ್ಗಾ ವಾಹಿನಿ ಸಂಘಟನೆಗಳು ದೂರು ನೀಡಿದ ಹಿನ್ನೆಲೆಯಲ್ಲಿ ಬುಧವಾರ ಸಂಜೆ ಪೊಲೀಸರು ದಾಳಿ ಮಾಡಿ ನಾಲ್ವರು ಯುವಕರು ಮತ್ತು ಮುವರು ಯುವತಿಯರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು.
ರಾಕ್ಸ್ ಕೆಫೆ 3 ಮಾಳಿಗೆಗಳ ವ್ಯಾಪಾರ ಮಳಿಗೆಯಾಗಿದ್ದು, 3 ನೇ ಮಾಳಿಗೆಯಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ ಎಂದು ಬಜರಂಗ ದಳ ಮತ್ತು ದುರ್ಗಾ ವಾಹಿನಿ ಸಂಘಟನೆಗಳಿಂದ ದೂರು ಹಲವು ದಿನ ಗಳಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ ಸಂದರ್ಭ ಬಜರಂಗ ದಳ ಮತ್ತು ದುರ್ಗಾ ವಾಹಿನಿ ಸಂಘಟನೆಗಳು ಪೋಲೀಸರ ಜೊತೆಗಿದ್ದರು. ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಸಂಘಪರಿವಾರದ ಮಹಿಳಾ ಸಂಘಟನೆ ದುರ್ಗಾವಾಹಿನಿ ದಾಳಿ ನಡೆಸಿತು. ಮಹಿಳೆಯರೇ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಬಜರಂಗಿಗಳು ಹಿಂದೆ ಸರಿದಿದ್ದರಿಂದ ಈ ದಾಳಿಯಲ್ಲಿ ಯಾವುದೇ ಮಾರಾಮಾರಿಯ ಘಟನೆ ವರದಿಯಾಗಿಲ್ಲ.
ದಾಳಿ ನಡೆದ ಸಂದರ್ಭದಲ್ಲಿ ಇಲ್ಲಿ ಯುವಕ- ಯುವತಿಯರು ಸಿಗರೇಟು ಸೇದುತ್ತಿದ್ದು, ಅಮಲಿನಲ್ಲಿದ್ದರು ಎಂದು ತಿಳಿದುಬಂದಿದೆ. ದಾಳಿಯ ಸೂಚನೆ ತಿಳಿಯುತ್ತಿರುವಂತೆ ಕೆಲವರು ಹಿಂಬಾಗಿಲಿನಿಂದ ಓಡಿ ಪರಾರಿಯಾದ್ದಾರೆ ಆದರೆ ನಾಲ್ವರು ಯುವತಿಯರು ಮತ್ತು ಮೂವರು ಯುವಕರು ಸಿಕ್ಕಿಬಿದ್ದಿದ್ದಾರೆ. ಇವರನ್ನು ಠಾಣೆಗೆ ಕರೆ ತಂದು ವಿಚಾರಣೆ ನಡೆಸಿ ಬಳಿಕ ಎಚ್ಚರಿಕೆ ನೀಡಿ ಬಿಡುಗಡೆ ಮಾಡಲಾಗಿದೆ. ಈ ನಾಲ್ವರು ಯುವತಿಯರಲ್ಲಿ ಒಬ್ಬಳು ಯುವ ಕಾಂಗ್ರೆಸ್ ಮುಖಂಡನೊಬ್ಬನ ಸಂಬಂಧಿ ಎಂದು ತಿಳಿದು ಬಂದಿದೆ.
Click this button or press Ctrl+G to toggle between Kannada and English