ಬಿಜೆಪಿ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತ :ಜಿ. ಪರಮೇಶ್ವರ್‌

6:17 PM, Thursday, January 31st, 2013
Share
1 Star2 Stars3 Stars4 Stars5 Stars
(No Ratings Yet)
Loading...

G Parameshwarಮಂಗಳೂರು : ಕರ್ನಾಟಕದಲ್ಲಿ ನಾಲ್ಕೂವರೆ ವರ್ಷಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಕೊಂಡಿದ್ದು ತಾವು ಆಡಳಿತ ನಡೆಸಲು ಅಸಮರ್ಥರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಹೇಳಿದರು. ಅವರು ಕೆಪಿಸಿಸಿ ವತಿಯಿಂದ ಯೋಜನೆಗೊಂಡ “ಕಾಂಗ್ರೆಸ್ ನಡಿಗೆ  ಸಾಮರಸ್ಯದ ಕಡೆಗೆ ” ಪಾದಯಾತ್ರೆಯ ಎರಡನೇ ದಿನವಾದ ಬುಧವಾರ ಅವರು ಮೂಲ್ಕಿಯಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

ಕಾಂಗ್ರೆಸ್‌ನಿಂದ ಮಾತ್ರ ಜನಪರ ಆಡಳಿತ ನೀಡಲು ಸಾಧ್ಯವಿದ್ದು, ಜನತೆ ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವ ಸಂಕಲ್ಪ ಮಾಡಬೇಕು ಎಂದರು. ರಾಷ್ಟ್ರಕ್ಕೆ ಮಾದರಿಯಾಗಿದ್ದ ಕರಾವಳಿಯಲ್ಲಿ ಸಾಮರಸ್ಯವನ್ನು ಕೆಡಿಸುವ ಕಾರ್ಯವನ್ನು ಬಿಜೆಪಿ, ಸಂಘಪರಿವಾರ ಮಾಡುತ್ತಾ ಬಂದಿದೆ. ಇದರ ವಿರುದ್ದ ಜನಜಾಗೃತಿಯನ್ನು ಮೂಡಿಸಿ ಮತ್ತೆ ಇಲ್ಲಿ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ  ಕಾಂಗ್ರೆಸ್‌ ಈ ಪಾದಯಾತ್ರೆಯನ್ನು ನಡೆಸುತ್ತಿದೆ ಎಂದರು.

ಸಭೆಯಲ್ಲಿ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ, ವಿಧಾನ ಪರಿಷತ್‌ ವಿಪಕ್ಷ ನಾಯಕ ಎಸ್‌.ಆರ್‌. ಪಾಟೀಲ್‌, ನಾಯಕರಾದ ಬಿ.ಎಲ್‌. ಶಂಕರ್‌, ವಿ. ಸುದರ್ಶನ್‌, ಸಿ.ಎಂ. ಇಬ್ರಾಹಿಂ, ನಾರಾಯಣ್‌ ರಾವ್‌, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಬಿ. ರಮಾನಾಥ ರೈ, ಎಂ.ಸಿ. ವೇಣುಗೋಪಾಲ್‌, ಬೋಸರಾಜ್‌, ಯು.ಟಿ. ಖಾದರ್‌, ಪ್ರತಾಪಚಂದ್ರ ಶೆಟ್ಟಿ, ಐವನ್‌ ಡಿ’ಸೋಜಾ, ಜೆ.ಆರ್‌. ಲೋಬೋ, ಶಶಿಕಾಂತ್‌ ಶೆಟ್ಟಿ, ಬಿ.ಎ. ಮೊದೀನ್‌ ಬಾವಾ, ಮಿಥುನ್‌ ರೈ, ಮಮತಾ ಗಟ್ಟಿ, ಎಂ.ಎ. ಗಫೂರ್‌, ಗುಲ್ಜಾರ್‌ ಬಾನು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English