ಲೇಡಿಗೋಶನ್‌ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಸಾವು ಆಸ್ಪತ್ರೆಯ ವೈಧ್ಯರು, ಸಿಬ್ಬಂಧಿಗಳ ವಿರುದ್ಧ ಪ್ರತಿಭಟನೆ

11:53 AM, Saturday, February 2nd, 2013
Share
1 Star2 Stars3 Stars4 Stars5 Stars
(No Ratings Yet)
Loading...

Ladygoschen hospitalಮಂಗಳೂರು : ಶುಕ್ರವಾರ ನಗರದ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಎರಡು ನವಜಾತ ಶಿಶುಗಳು ಸಾವನ್ನಪ್ಪಿದ್ದು, ಮಕ್ಕಳ ಸಾವಿಗೆ ಆಸ್ಪತ್ರೆ ಸಿಬ್ಬಂದಿಗಳ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಕುಟುಂಬಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆಯ ವೈಧ್ಯರು ಹಾಗೂ ಸಿಬ್ಬಂಧಿಗಳ ವಿರುದ್ಧ ಪ್ರತಿಭಟಿಸಿದರು.

ಶುಕ್ರವಾರ ಎರಡು ಮಕ್ಕಳು ಸಾವನ್ನಪ್ಪಿದ್ದು, ಶಿಶುವೊಂದು ಬೆಳಗ್ಗೆ  ತಾಯಿ ಹೊಟ್ಟೆಯಲ್ಲಿರುವಾಗಲೇ ಮೃತಪಟ್ಟಿದ್ದರೆ, ಇನ್ನೊಂದು ಜನನವಾದ ಬಳಿಕ ಮೃತಪಟ್ಟಿದೆ. ಮೃತಪಟ್ಟ ಮಕ್ಕಳ ಪೋಷಕರು ನಂದಿಗುಡ್ಡೆ ಸ್ಮಶಾನದಲ್ಲಿ ಮಕ್ಕಳ ಅಂತ್ಯಸಂಸ್ಕಾರ ಮಾಡಲು ತೆಗೆದುಕೊಂದು ಹೋದಾಗ  ಅಲ್ಲಿನ ಸಿಬ್ಬಂದಿಗಳು ಆಸ್ಪತ್ರೆಯ ವೈದ್ಯಾಧಿಕಾರಿಗಳು ಶಿಶುಗಳ ಸಾವಿಗೆ ಸರಿಯಾದ ದಾಖಲೆಪತ್ರಗಳನ್ನು ನೀಡಿಲ್ಲ. ಹಾಗಾಗಿ ಅಂತ್ಯಸಂಸ್ಕಾರ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.  ಇದರಿಂದ ಕೋಪಗೊಂಡ ಶಿಶುಗಳ ಪಾಲಕರು ಸಾವಿಗೆ ಆಸ್ಪತ್ರೆಯ ವೈಧ್ಯರ, ಸಿಬ್ಬಂಧಿಗಳ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಆಸ್ಪತ್ರೆಗೆ ತೆರಳಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಬಗ್ಗೆ  ಆಸ್ಪತ್ರೆ ಅಧೀಕ್ಷಕಿ ಡಾ.ಶಕುಂತಲ ಪ್ರತಿಕ್ರಿಯಿಸಿ ಮಹಿಳೆ ಆಸ್ಪತ್ರೆಗೆ ದಾಖಲಾಗುವ ಮೊದಲೇ ಆಕೆಯ ಭ್ರೂಣದಲ್ಲಿದ್ದ ಶಿಶು ಸಾವನ್ನಪ್ಪಿತ್ತು. ನಾವು ನಮ್ಮ ಕೈಲಾದ ಎಲ್ಲಾ ಪ್ರಯತ್ನಗಳನ್ನು ಮಾಡಿತಾಯಿಯನ್ನು ಉಳಿಸಿದ್ದೆವು. ಈ ಆಸ್ಪತ್ರೆಯಲ್ಲಿ ಪ್ರತಿ ದಿನ 20ರಿಂದ 25 ಮಕ್ಕಳು ಹುಟ್ಟುವುದರಿಂದ ಇಲ್ಲಿ ಈಗ ಜಾಗದ ಕೊರತೆ ಕೂಡ ಇದೆ ಆದರೂ ನಾವು ನಮ್ಮ ಪ್ರಯತ್ನ ಮಾಡಿ ಹೆರಿಗೆ ಸುಸೂತ್ರವಾಗಿ ಆಗುವಂತೆ ನೋಡಿಕೊಳ್ಳುತ್ತೇವೆ. ಆದರೂ ಕೆಲವು ಮಕ್ಕಳಲ್ಲಿನ ತೊಂದರೆಗಳಿಂದ ಹಾಗೂ ಬೆಳವಣಿಗೆಯಾಗದೇ ಇರುವುದರಿಂದ ಕೆಲವು ಮಕ್ಕಳು ಮೃತಪಡುತ್ತವೆ ಎಂದರು.

ಈ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಸರ್ವೇ ಸಾಮಾನ್ಯವಾಗಿದ್ದು ಹಿಂದೆಯೂ ಇಂತಹ ಹಲವಾರು ಘಟನೆಗಳು ನಡೆದಿವೆ. ಆದರೆ ಆಸ್ಪತ್ರೆಯ ಸಿಬ್ಬಂಧಿ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಈ ಘಟನೆಯಿಂದ ಇನ್ನಾದರೂ ಎಚ್ಚೆತ್ತುಕೊಳ್ಳಲಿ ಎಂಬುದು ಸಾರ್ವಜನಿಕರ ಅಭಿಪ್ರಾಯ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English