3ನೇ ತ್ತೈಮಾಸಿಕದಲ್ಲಿ 303.17 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಕೆ : ಅಜಯ್‌ ಕುಮಾರ್‌

12:53 PM, Saturday, February 2nd, 2013
Share
1 Star2 Stars3 Stars4 Stars5 Stars
(No Ratings Yet)
Loading...

Corp Bankಮಂಗಳೂರು : ಡಿಸೆಂಬರ್ 31ಕ್ಕೆ ಕಾರ್ಪೊರೇಶನ್‌ ಬ್ಯಾಂಕ್‌ ನ 3ನೇ ತ್ತೈಮಾಸಿಕ ಅಂತ್ಯಗೊಂಡಿದ್ದು ತ್ತೈಮಾಸಿಕದಲ್ಲಿ 303.17 ಕೋಟಿ  ರೂಪಾಯಿ ನಿವ್ವಳ ಲಾಭ ಗಳಿಸಿದ್ದು, ಒಟ್ಟು ವ್ಯವಹಾರ 2,44,827 ಕೋಟಿ  ರೂಪಾಯಿಗೆ ತಲುಪಿದೆ ಎಂದು ಬ್ಯಾಂಕ್ ಅಧ್ಯಕ್ಷ ಅಜಯ್‌ ಕುಮಾರ್‌ ಹೇಳಿದರು. ಅವರು ಶುಕ್ರವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ 3ನೇ ತ್ತೈಮಾಸಿಕ ಹಾಗೂ 9 ತಿಂಗಳಲ್ಲಿ ಬ್ಯಾಂಕ್‌ನ ನಿರ್ವಹಣೆ ಬಗ್ಗೆ ವಿವರಿಸಿದರು.

ಅವರು ಬ್ಯಾಂಕ್‌ನ ಠೇವಣಿ 1,40,384 ಕೋ. ರೂ.ಗೆ ಏರಿಕೆಯಾಗಿದ್ದು, ವರ್ಷದಿಂದ ವರ್ಷಕ್ಕೆ ಆಧಾರದಲ್ಲಿ ಶೇಕಡಾ 10.88 ಪ್ರಗತಿ ದಾಖಲಿಸಿದೆ. ಮುಂಗಡ 1,04,443 ಕೋಟಿ ರೂಪಾಯಿ ಗೆ ಏರಿಕೆಯಾಗಿದ್ದು ವರ್ಷದಿಂದ ವರ್ಷಕ್ಕೆ ಶೇಕಡಾ 13.06 ಪ್ರಗತಿ ದಾಖಲಿಸಿದೆ. ಒಟ್ಟು ವ್ಯವಹಾರದಲ್ಲಿ 25,842 ಕೋಟಿ ರೂಪಾಯಿ ಹೆಚ್ಚಳವಾಗಿದ್ದು, ಶೇಕಡಾ 11.80 ಪ್ರಗತಿ ಸಾಧಿಸಲಾಗಿದೆ ಎಂದರು.

ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಮೊದಲ 9 ತಿಂಗಳಿನಲ್ಲಿ ಬ್ಯಾಂಕ್‌ ಒಟ್ಟು 1079.14 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ನಿರ್ವಹಣಾ ಲಾಭ 2114.54 ಕೋಟಿ ರೂಪಾಯಿ ಗೆ ಏರಿಕೆಯಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ 72.83 ಕೋಟಿ ರೂಪಾಯಿ ಹೆಚ್ಚಳವಾಗಿದೆ. ಬ್ಯಾಂಕ್‌ 1,653 ಶಾಖೆಗಳು, 1,306 ಎಟಿಎಂಗಳು ಹಾಗೂ 3,545 ಶಾಖಾರಹಿತ ಬ್ಯಾಂಕ್‌ ಘಟಕಗಳನ್ನು ಹೊಂದಿದ್ದು, ದೇಶಾದ್ಯಂತ 153 ಹೊಸ ಶಾಖೆಗಳನ್ನು ತೆರೆದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾದ ಅಮರ್‌ಲಾಲ್‌ ದೌಲ್ತಾನಿ, ಬಿ.ಕೆ. ಶ್ರೀವಾಸ್ತವ, ಮಹಾಪ್ರಬಂಧಕ ಸಿ.ಜಿ. ಪಿಂಟೋ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English