ಕೋಮುಸೌಹಾರ್ದ ಹದಗೆಡಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕಾರಣ : ಕುಮಾರಸ್ವಾಮಿ

6:20 PM, Saturday, February 2nd, 2013
Share
1 Star2 Stars3 Stars4 Stars5 Stars
(No Ratings Yet)
Loading...

JDS rallyಮಂಗಳೂರು : ಜಾತ್ಯಾತೀತ ಜನತಾದಳದ ಮಂಗಳೂರು ಮಹಿಳಾ ಘಟಕದ ಸಮಾವೇಶವು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಂದ ಫಳ್ನೀರ್ ನ ಜನತಾದಳದ ಕಛೇರಿಯಲ್ಲಿ ಉದ್ಘಾಟನೆಗೊಂಡಿತು. ಅದಕ್ಕೂ ಮುನ್ನ ಆಕರ್ಷಕ ಬೈಕ್ ರ್ಯಾಲಿಯಲ್ಲಿ ಜ್ಯಾತ್ಯಾತೀತ ಜನತಾದಳ ನಾಯಕರು ಪಾಲ್ಗೊಂಡರು. ಬೈಕ್ ರ್ಯಾಲಿಯು ಬಂಟ್ಸ್ ಹಾಸ್ಟೆಲ್ ತಲುಪಿದಾಗ ಕುಮಾರಸ್ವಾಮಿಯವರು ತೆರೆದ ಜೀಪಿನಲ್ಲಿ ರ್ಯಾಲಿಯಲ್ಲಿ ಪಾಲ್ಗೊಂಡರು.

JDS rallyಬಳಿಕ  ಫಳ್ನೀರ್ ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಕುಮಾರಸ್ವಾಮಿಯವರು ಮಾತನಾಡುತ್ತಾ, ಎರಡೂ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಳು ಜನಹಿತ ಕಾರ್ಯಕ್ರಮದಲ್ಲಿ ಸೋತಿದೆಯಲ್ಲದೆ, ಉಳ್ಳವರು ಮತ್ತು ಇಲ್ಲದವರ ಅಂತರ ಬಹಳ ಹೆಚ್ಚಿದೆಯೆಂದರು. ಕೆಳವರ್ಗದವರ ಸ್ಥಿತಿ ದಿನೇ ದಿನೇ ದುರ್ಬರವಾಗಲು ಜನತಾದಳ ಜಾರಿಗೊಳಿಸಿದ್ದ ಕಾರ್ಯಕ್ರಮವನ್ನು ರದ್ದುಪಡಿಸಿದ್ದೇ ಕಾರಣ ಎಂದರು.

JDS rallyಕಾಂಗ್ರೆಸ್ಸಿಗರು ನಾಲ್ಕುವರೆ ವರ್ಷದ ಗಾಢ ನಿದ್ರೆಯಿಂದ ಎಚ್ಚೆತ್ತು ಚುನಾವಣೆ  ಸಮೀಪಿಸುತ್ತಿರುವಂತೆ ಶ್ವೇತದಾರಿಗಳಾಗಿ ಪಾದಯಾತ್ರೆಯಲ್ಲಿ ತೊಡಗಿದ್ದಾರೆ. ನಿಜವಾಗಿ ಸಾಮರಸ್ಯವನ್ನು ಕೆಡಿಸಿದವರು ಇವರೆ. ಟಿಪ್ಪು ವಿಶ್ವವಿದ್ಯಾನಿಲಯದ ವಿಚಾರದಲ್ಲಿ ಅನಗತ್ಯ ಗುಲ್ಲು ಎಬ್ಬಿಸಿ ಎರಡೂ ಪಕ್ಷಗಳು ರಾಜಕೀಯ ಲಾಭ ಎತ್ತಲು ಪ್ರಯತ್ನಿಸುತ್ತಿವೆಯಲ್ಲದೆ, ನಿಜವಾಗಿ ಕೋಮು ಸೌಹಾರ್ದ ಹದಗೆಡಲು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಕಾರಣವಾಗಿದೆ ಎಂದರು ಅವರು ಹುಬ್ಬಳ್ಳಿಯ ಈದ್ಗಾ ಹಾಗೂ ಬಾಬಾ ಬುಡನ್ ಗಿರಿಯನ್ನು ಉದಾಹರಿಸುತ್ತಾ  ಈ ಮಾತನ್ನು ಹೇಳಿದರು.

jds rallyತನ್ನ ಪಕ್ಷ ಅಧಿಕಾರಕ್ಕೆ ಬಂದರೆ ವೃದ್ದಾಪ್ಯ ವೇತನವನ್ನು ರೂಪಾಯಿ 400 ರಿಂದ 1500 ಕ್ಕೆ ಏರಿಸುತ್ತೇನೆ, ಗರ್ಭಿಣಿ ಮಹಿಳೆಯರಿಗೆ ಹೆರಿಗೆ ನಂತರ ಮುರು ತಿಂಗಳವರೆಗೆ ರೂಪಾಯಿ  500೦ ಬಾಣಂತಿ ಬತ್ತೆ, ಅನಾಥ ಮಹಿಳೆಯರಿಗೆ ರೂಪಾಯಿ 1500 ರ ಮಾಸಿಕ ವೇತನ ಮೊದಲಾದ ಕೊಡುಗೆಗಳನ್ನು ಘೋಷಿಸಿದರು. ಈ ಬಾರಿ ಯಾರ ಸಹಾಯವೂ ಇಲ್ಲದೆ ಸ್ವತಂತ್ರವಾಗಿ ಗೆದ್ದು ಬರುವ ಆಶಯವನ್ನು ವ್ಯಕ್ತಪಡಿಸುತ್ತಾ, ಯುವಕರು ಪಕ್ಷದ ಕೈ ಬಲಪಡಿಸಲು ಕರೆಕೊಟ್ಟರು.

jds rallyವೇದಿಕೆಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಎ. ಸದಾನಂದ ಶೆಟ್ಟಿ, ಮಧು ಬಂಗಾರಪ್ಪ, ಅಮರ್ ನಾಥ್ ಶೆಟ್ಟಿ, ನಾಗರಾಜ್ ಶೆಟ್ಟಿ, ಹಿಂದುಳಿದ ವರ್ಗದ ಅಧ್ಯಕ್ಷ ಹುಚ್ಚಪ್ಪ, ಮಹಿಳಾ ವಿಭಾಗದಲ್ಲಿ ಜಯಲಕ್ಷ್ಮಿ ಶೆಟ್ಟಿ, ರಾಜಶ್ರೀ ಹೆಗ್ದೆ, ಅನಿತಾ.ಎಸ್, ಮೀನಾ ಶೆಟ್ಟಿ ಮುಂತಾದವರು ವೇದಿಕೆಯಲ್ಲಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English