ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರಿಂದ ಬ್ರಹತ್ ಮಂಗಳೂರು ದಸಾರಕ್ಕೆ ಚಾಲನೆ

8:36 PM, Friday, October 8th, 2010
Share
1 Star2 Stars3 Stars4 Stars5 Stars
(2 rating, 1 votes)
Loading...

ಮಂಗಳೂರು ದಸರಾಮಂಗಳೂರು :  ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾವನ್ನು ದ.ಕ. ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ದೀಪ ಬೆಳಗಿಸುವುದರ ಮೂಲಕ ಇಂದು ಮಧ್ಯಾಹ್ನ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಪೊನ್ನುರಾಜ್ ಅವರಿಂದ ಮಂಗಳೂರು ದಸರಾಕ್ಕೆ ಚಾಲನೆ
ಅ.8 ರಿಂದ 18 ರವರೆಗೆ ನಡೆಯುವ ನವರಾತ್ರಿ ಉತ್ಸವ ಮತ್ತು ಮಂಗಳೂರು ದಸರಾ ಪೂಜಿಸಲ್ಪಡುವ ನವದುರ್ಗೆಯರ ಮತ್ತು ಶಾರದ ಮಾತೆಯ ವಿಗ್ರಹ ಹಾಗೂ ಗಣಪತಿಯ ವಿಗ್ರಹ ವನ್ನು  ಕ್ಷೇತ್ರದ ಶ್ರೀ ಗೋಕರ್ಣ  ಕಲ್ಯಾಣಮಂಟಪದಲ್ಲಿ ಆಕರ್ಷಕವಾಗಿ ನಿರ್ಮಿಸಿದ ಸ್ವರ್ಣಮಯ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಯಿತು.
ಕ್ಷೇತ್ರದ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಉಪಾದ್ಯಕ್ಷರಾದ ರಾಘವೇಂದ್ರ ಕುಳೂರು, , ಕೋಶಾಧಿಕಾರಿ ಪದ್ಮರಾಜ್ ಆರ್, ಶ್ರೀಮತಿ ಮಾಲತಿ ಜನಾರ್ಧನ ಪೂಜಾರಿ, ಶ್ರೀಮತಿ ಉರ್ಮಿಳಾ ರಮೇಶ್,  ಡಾ| ಬಿ.ಜಿ ಸುವರ್ಣ, ಹರಿಕ್ರಷ್ಣ ಬಂಟ್ವಾಳ , ಬಿ.ಕೆ.ತಾರನಾಥ್, ರವಿಶಂಕರ್ ಮಿಜಾರ್, ಸುರೇಶ್ ಬಳ್ಳಾಲ್, ಟಿಕೆ.ಸುಧೀರ್ ಮೊದಲಾದ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮಂಗಳೂರು ದಸರಾದಲ್ಲಿ ಶಾರದಾ ಮಾತೆಯ ವಿಗ್ರಹ
10 ದಿನಗಳ ಕಾಲ ನಡೆಯಲಿರುವ ಈ ದಸರಾ ಮಹೋತ್ಸವವು ಅ. 17 ರಂದು ಜನಾರ್ದನ ಪೂಜಾರಿ ಅವರ ನೇತ್ರತ್ವದಲ್ಲಿ ಮಂಗಳೂರು ದಸರಾದ ಬೃಹತ್ ಮೆರವಣಿಗೆ ಯೊಂದಿಗೆ ಕೊನೆಗೊಳ್ಳಲಿದೆ.  ದಸರಾ ಮಹೋತ್ಸವದ ಸಂದರ್ಭದಲ್ಲಿ ಪ್ರತಿ ದಿನ ಕ್ಷೇತ್ರದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಮಂಗಳೂರು ದಸರಾದಲ್ಲಿ ಶಾರದಾ ಮಾತೆಯ ವಿಗ್ರಹ
ಮಂಗಳೂರು ದಸರಾ ಎಂದೇ ಪ್ರಖ್ಯಾತಿ ಪಡೆದಿರುವ ಶ್ರೀ ಕುದ್ರೋಳಿ ಗೋಕರ್ಣ ಕ್ಷೇತ್ರದ ದಸರಾ ಮಹೋತ್ಸವಕ್ಕೆ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English