ವಿವಿಧ ಬೇಡಿಕೆಗಳಿಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಧರಣಿ.

4:44 PM, Monday, February 4th, 2013
Share
1 Star2 Stars3 Stars4 Stars5 Stars
(No Ratings Yet)
Loading...

Guest lecturer's Protestಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸುವ ಕುರಿತು ನೊಂದ ಅಧ್ಯಾಪಕರು ಜ್ಯೋತಿ ಸರ್ಕಲಿನ ಸರ್ಕಾರದ ಪದವಿಪೂರ್ವ ಕಾಲೇಜಿನಿಂದ ಡಿ.ಸಿ. ಆಫೀಸಿಗೆ ಪ್ರತಿಭಟನಾ ಮೆರವಣಿಗೆಯಿಂದ ಘೋಷಣೆ ಕೂಗುತ್ತಾ ಬಂದರು. ಪ್ರತಿಭಟನಾ ಸಮಾವೇಶದ ಉದ್ಘಾಟನೆಯನ್ನು ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಹರಿಕೃಷ್ಣ ಪುನರೂರು ರವರು ದಿI ರಾಷ್ಟ್ರಪತಿ ಡಾ. ರಾಧಕೃಷ್ಣ ರವರ ಭಾವ ಚಿತ್ರಕ್ಕೆ ಹೂ ಹಾರ ಹಾಕುವ ಮೂಲಕ ನೆರವೇರಿಸಿದರು.

Guest lecturer's Protestಬಳಿಕ ಮಾತನಾಡುತ್ತಾ ಶೋಷಿತ ಅಧ್ಯಾಪಕರ ವಿಷಯದಲ್ಲಿ ತಾನು ಸದಾ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ದ. ಗುರುದೇವೋ ಭವ ಎಂದು ಪೂಜಿಸುವ ಭಾರತದಲ್ಲಿ ಅಧ್ಯಾಪಕರ ಪಾಡು ತುಂಬಾ ಕಷ್ಟಕರ. ನಮ್ಮ ಮಕ್ಕಳಿಗೆ ವಿಧ್ಯೆ ಕೊಡುವ ಪ್ರಾಧ್ಯಾಪಕರಿಗೆ ನಿಗಧಿತ ವೇತನವನ್ನು ಕೊಡದೆ ಸತಾಯಿಸುತ್ತಿರುವ ಸರಕಾರ ನಾಚಿಕೆಗೇಡಿ. ಪ್ರಾಧ್ಯಾಪಕರ ಬೇಡಿಕೆಯಾದ ರೂಪಾಯಿ15,000 ಮಾಸಿಕ ಸಂಬಳ ಏನೂ ಸಾಲದು ಕಡಿಮೆ ಪಕ್ಷ ರೂಪಾಯಿ 50,oooವಾದರೂ ಮಾಸಿಕ ವೇತನ ಸಿಗಬೇಕು. ಆ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನವನ್ನು ಮಾಡಲಾಗುವುದು ಎಂದರು.

Guest lecturer's Protestತದನಂತರ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವರು ಮಾತನಾಡುತ್ತಾ ಪ್ರಾಧ್ಯಾಪಕರ ಬೇಡಿಕೆಯನ್ನು ಈಡೇರಿಸಲು ಸರ್ವ ಪ್ರಯತ್ನವನ್ನು ಮಾಡಲಾಗುವುದೆಂದು ಭರವಸೆ ನೀಡಿದರು.

Guest lecturer's Protestಆ ಬಳಿಕ ಜಯಲಕ್ಷ್ಮಿ ಶೆಟ್ಟಿ ಅವರು ಸಂಬಳ ಕೊಡದೆ ದುಡಿಸುವುದು ಅಕ್ಷಮ್ಯ ಅಪರಾಧ ಅದೂ ಶಿಕ್ಷಕರಿಗೆ ಈ ರೀತಿ  ಆದರೆ ಉಳಿದವರ ಗತಿಯಾದರು ಏನು ಎಂದು ವಿಷಾದ  ವ್ಯಕ್ತಪಡಿಸಿದರು. ಶ್ರೀ ಚಂದ್ರಶೇಖರ್ ರವರು ಧನ್ಯವಾದ ಅರ್ಪಿಸಿದರು.

ಒಂದು ದಿನದ ಸಾಂಕೇತಿಕ  ಮುಷ್ಕರದ ಅಂಗವಾಗಿ ಸಂಜೆ ತನಕ ಪ್ರತಿಭಟನೆಯ ಭಾಗವಾಗಿ ನೊಂದ ಪ್ರಾಧ್ಯಾಪಕರು ಪ್ರತಿಭಟನೆ ಮುಂದುವರಿಸಿದರು.

ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಚಂದ್ರಶೇಖರ್,  ಅತಿಥಿ ಉಪನ್ಯಾಸಕರ ಸಂಘದ ರಾಜ್ಯ ಸಂಚಾಲಕ ಆನಂದ ಪೂಜಾರಿ, ಉಡುಪಿ ತಾಲೂಕು ಅಧ್ಯಕ್ಷ ಪಾಂಡುರಂಗ,  ಅತಿಥಿ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಕೇಶವ ಮೊದಲಾದವರು ಉಪಸ್ಥಿತರಿದ್ದರು.

ಅವರ ಬೇಡಿಕೆಗಳು :-

1. ಕಳೆದ 2012-13ರ ಸಾಲಿನ ಬಾಕಿ ವೇತನವನ್ನು ತಕ್ಷಣ ನೀಡುವುದು
2.2012-13 ನೇ ಸಾಲಿನ ಸುತ್ತೋಲೆಯ ಅಸ್ಪಷ್ಟತೆ ನಿವಾರಿಸುವುದು. ಹಾಗೂ 09 ತಿಂಗಳು ವೇತನ ನೀಡುವ ಸ್ಪಷ್ಟ ಆದೇಶವನ್ನು ನೀಡಿ     ತಿಂಗಳುವಾರು ವೇತನ ನೀಡುವುದು.
3. ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯಲ್ಲಿ ಸೇವಾ ಹಿರಿತನಕ್ಕೆ ಆದ್ಯತೆ ನೀಡುವುದು.
4. ಕೆ.ಪಿ.ಎಸ್.ಸಿ. ಆಯ್ಕೆ ಪ್ರಕ್ರಿಯೆಯಲ್ಲಿ ಅತಿಥಿ ಉಪನ್ಯಾಸಕರ ಸೇವಾ ಹಿರಿತನವನ್ನು ಪರಿಗಣಿಸುವುದು.
5. ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸುವುದು.

Guest lecturer's Protest

Guest lecturer's Protest

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English