ಮಂಗಳೂರು : ಕರ್ನಾಟಕ ಅಂತರ್ಜಲ ಅಭಿವೃದ್ಧಿ ಪಡಿಸುವ ಮತ್ತು ಅಂತರ್ಜಲ ಅತಿ ಬಳಕೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕರ್ನಾಟಕ ಅಂತರ್ಜಲ ಅಧಿನಿಯಮ 2011 ನಿಯಮಾವಳಿ-2012ರನ್ವಯ ನೂತನವಾಗಿ ರಚಿಸಿರುವ ಜಿಲ್ಲಾ ಮಟ್ಟದ ಅಂತರ್ಜಲ ಪ್ರಾಧಿಕಾರದ ಪ್ರಥಮ ಸಭೆಯು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಇದರ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ರವರು ವಹಿಸಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ ಹಾಗೂ ಪುತ್ತೂರು ತಾಲೂಕುಗಳ 43 ಗ್ರಾಮಗಳನ್ನು ಅಂತರ್ಜಲ ಅತಿ ಬಳಕೆ ಗ್ರಾಮಗಳೆಂದು ಘೋಷಿಸಲಾಗಿದೆ. ಈ ಗ್ರಾಮಗಳಲ್ಲಿ ಇನ್ನು ಮುಂದೆ ಖಾಸಗಿ ಅಥವಾ ಸಾರ್ವಜನಿಕ ಕೊಳವೆ ಬಾವಿಗಳನ್ನು ಕೊರೆಯಲು ನೂತನವಾಗಿ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಅಂತರ್ಜಲ ಪ್ರಾಧಿಕಾರದ ಅನುಮತಿ ಪಡೆಯಬೇಕು. ಇಲ್ಲವಾದಲ್ಲಿ 5,000 ರೂಪಾಯಿ ದಂಡ ಹಾಗೂ 6 ತಿಂಗಳ ಜೈಲು ಶಿಕ್ಷೆಗೆ ಒಳಪಡಿಸಲಾಗುವುದು ಎಂದು ಅವರು ತಿಳಿಸಿದರು.
ಕರ್ನಾಟಕ ಅಂತರ್ಜಲ ಅಧಿನಿಯಮ 2011 ನಿಯಮಾವಳಿ 2012ರನ್ವಯ ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ, ಅನಂತಾಡಿ, ಬಾಳೆಪುಣಿ, ಬೊಳಂತೂರು, ಇಡಿRದು, ಇರಾ, ಪದವು, ಕನ್ಯಾನ, ಕರಿಯಂಗಳ, ಕರೋಪಾಡಿ, ಕೇಪು, ಕೊಲಾ°ಡ್, ಕುಳ, ಮಂಚಿ, ನರಿಂಗಾನ, ಮಾಣಿಲ, ಪೆರುವಾಯಿ, ನೆಟ್ಲಮುಟ್ನೂರು, ಸಜಿಪಪಡು, ಪುಣಚ, ವೀರಕಂಭ, ಸಾಲೆತ್ತೂರು, ವಿಟ್ಲಮುಟ್ನೂರು, ವಿಟ್ಲ ಮತ್ತು ವಿಟ್ಲ ಮಟ್ನೂರು ಸೇರಿ ಒಟ್ಟು 24 ಗ್ರಾಮಗಳಲ್ಲಿ ಮತ್ತು ಮಂಗಳೂರು ತಾಲೂಕಿನ 5 ಗ್ರಾಮಗಳಾದ ಕಿನ್ಯಾ, ಕೋಣಾಜೆ, ಮಂಜನಾಡಿ, ಸೋಮೇಶ್ವರ ಮತ್ತು ತಲಪಾಡಿ, ಪುತ್ತೂರು ತಾಲೂಕಿನ 14 ಗ್ರಾಮಗಳಾದ ಅರಿಯಡ್ಕ, ಆರ್ಯಾಪು, ಬಡಗನ್ನೂರು, ಬಲಾ°ಡ್, ಬೆಟ್ಟಂಪಾಡಿ, ಕೊಡಿಪ್ಪಾಡಿ, ಕೆದಂಬಾಡಿ, ಇರ್ದೆ, ಕುರಿಯ, ಮಟ್ನೂರ್, ನಿಡಪಳ್ಳಿ, ಪಡುವನ್ನೂರು, ಪಾಣಾಜೆ ಮತ್ತು ಒಳಮೊಗರು ಗ್ರಾಮಗಳನ್ನು ಅಂತರ್ಜಲ ಅತಿಬಳಕೆ ಗ್ರಾಮಗಳೆಂದು ಘೋಷಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 6 ಕೊಳವೆ ಬಾವಿ ಕೊರೆಯುವ ಘಟಕಗಳು ನೋಂದಾಯಿತವಾಗಿದ್ದು, ಜಿಲ್ಲೆಯಲ್ಲಿ ಈಗಾಗಲೇ ಇರುವ ಕೊಳವೆ ಬಾವಿಗಳನ್ನು ಗೃಹ ಕೃತ್ಯಕ್ಕೆ ಅಥವಾ ವಾಣಿಜ್ಯ ಕಾರ್ಯಗಳಿಗೆ ಬಳಕೆಯಾಗುತ್ತಿದೆಯೇ ಎಂಬುದನ್ನು ಮಾಹಿತಿಯೊಂದಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಖಡ್ಡಾಯವಾಗಿ ನೋಂದಾಯಿಸಬೇಕು. ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆದರೆ ಅಂತಹ ಡ್ರಿಲ್ಲಿಂಗ್ ಯಂತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಮತ್ತು ಸಾರ್ವಜನಿಕ ನೀರಿನ ಮೂಲಗಳಿಂದ 500 ಮೀ. ಅಂತರದ ಒಳಗೆ ಯಾವುದೇ ಹೊಸ ಕೊಳವೆ ಬಾವಿಯನ್ನು ಕಾನೂನಿನಂತೆ ಕೊರೆಯಬಾರದು ಎಂದು ಅವರು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ| ಕೆ.ಎನ್. ವಿಜಯಪ್ರಕಾಶ್, ಜಿಲ್ಲಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್, ಅಪರ ಜಿಲ್ಲಾಧಿಕಾರಿ ದಯಾನಂದ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English