ಸಾಗರೋತ್ಪನ್ನಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದ್ದ ಕಂಪನಿಗೆ ವಂಚನೆ, ಆರೋಪಿಯ ಬಂಧನ

4:13 PM, Wednesday, February 6th, 2013
Share
1 Star2 Stars3 Stars4 Stars5 Stars
(No Ratings Yet)
Loading...

Shameer Bashyarಮಂಗಳೂರು : ಸಾಗರೋತ್ಪನ್ನಗಳನ್ನು ಉತ್ಪಾದಿಸಿ ರಫ್ತು ಮಾಡುತ್ತಿದ್ದ ನಗರದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉಳ್ಳಾಲ ನಿವಾಸಿ ಶಮೀರ್ ಬಶಾರ್ ಎಂಬಾತನು ಕಂಪನಿಗೆ 3.3 ಕೋಟಿ ರೂಪಾಯಿಗಳ ಮೋಸವನ್ನು ಮಾಡಿದ್ದಾನೆ ಎಂದು ಕಂಪನಿಯು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ನಿಟ್ಟಿನಲ್ಲಿ  ಪಾಂಡೇಶ್ವರ ಪೊಲೀಸರು ಉಳ್ಳಾಲ ನಿವಾಸಿ ಶಮೀರ್ ಬಶಾರ್ ನನ್ನು ಬಂಧಿಸಿದ್ದು ಇತರರ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕಂಪನಿಯು ದೂರಿನಲ್ಲಿ ಶಮೀರ್ ತನ್ನ ಕಂಪನಿಗೆ ಬರಬೇಕಾಗಿದ್ದ ಕೋಟ್ಯಾಂತರ ರೂಪಾಯಿಗಳನ್ನು ತನ್ನ ಖಾತೆಗೆ ಬರುವಂತೆ ಮಾಡಿ ಹಲವು ವರ್ಷಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ವಂಚಿಸುತ್ತಿದ್ದ, ಜೊತೆಗೆ ಕಂಪನಿಯ ಇನ್ನೊಬ್ಬ ನೌಕರ ಮಹಮ್ಮದ್ ಇಶಾನ್ ಎಂಬುವವನು ಕೂಡ ಶಾಮೀಲಾಗಿದ್ದಾನೆ ಎಂದು ದೂರಿನಲ್ಲಿ ತಿಳಿಸಿತ್ತು.

ಪೊಲೀಸರು ಶಮೀರ್ ನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಈತನೊಂದಿಗೆ ಇತರ ಆರು ಮಂದಿ ಶಾಮಿಲಾಗಿದ್ದು ಅವರಲ್ಲಿ ಒಬ್ಬ ಕೊರಿಯಾ ದೇಶದವನಿದ್ದು ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English