ಮಂಗಳೂರು : ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವತಿಯಿಂದ ಬುಧವಾರ ದ.ಕ. ಜಿಲ್ಲಾಧಿಕಾರಿ ಎನ್. ಪ್ರಕಾಶ್ ರವರ ಅದ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಡ್ರಗ್ ಮಾಫಿಯಾದ ಮೂಲವನ್ನು ಪತ್ತೆಹಚ್ಚಿ ನಿರ್ಮೂಲನ ಮಾಡಲು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.
ಜಿಲ್ಲಾಡಳಿತ ಮಾದಕ ದ್ರವ್ಯ ವಿರುದ್ಧದ ಕಾರ್ಯಾಚರಣೆಗೆ ಸಂಬಂಧಿಸಿ ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಜೊತೆಗೆ ಅಬಕಾರಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆಯ ಜತೆಗೆ ಕೈಜೋಡಿಸಲಿದೆ ಎಂದರು.
ಶುಕ್ರವಾರ ಫೆಬ್ರವರಿ ೮ ರಂದು ನಗರದ ಪ್ರಮುಖ ಕಾಲೇಜುಗಳ ಪ್ರಾಂಶುಪಾಲರ ಸಭೆಯನ್ನು ಕರೆದಿದ್ದು, ಮುಂದಿನ ಒಂದು ವರ್ಷಗಳ ಕಾಲ ಈ ಜಾಲದ ವಿರುದ್ಧ ನಿತ್ಯ-ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಈ ಕಾರ್ಯಕ್ರಮದಲ್ಲಿ ಹೆತ್ತವರ, ಶಿಕ್ಷಣ ಸಂಸ್ಥೆಗಳ, ಹಾಗೂ ಸರಕಾರೇತರ ಸಂಘಸಂಸ್ಥೆಗಳ ಸಹಕಾರ ಅಗತ್ಯ ಎಂದರು.
ಸಾರ್ವಜನಿಕರು ಮಾದಕ ದ್ರವ್ಯ ಪತ್ತೆ ಜಾಲದ ಬಗ್ಗೆ ಮಾಹಿತಿ ತಿಳಿದಿದ್ದಲಿ 222807 ಅಥವಾ 9480802305 ಅಥವಾ 100ಕ್ಕೆ ಕರೆ ಮಾಡಿ ಎಂದು ಸಾರ್ವಜನಿಕರಲ್ಲಿ ಕೋರಿದರು. ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂಬುದನ್ನು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಪಾಲ್ಗೊಂಡ ಪಾಲಿಕೆ ಆಯುಕ್ತ ಡಾ| ಹರೀಶ್ ಕುಮಾರ್ ವಿದ್ಯಾರ್ಥಿಗಳ ಮೇಲೆ ಅದರಲ್ಲೂ ಪಿಯು ಕಾಲೇಜು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾ ಇಡುವುದು ಅಗತ್ಯವಿದ್ದು, ಎಲ್ಲ ಕಾಲೇಜುಗಳ ಪ್ರತಿಯೊಂದು ತರಗತಿಗಳಿಗೆ ಒಬ್ಬ ಶಿಕ್ಷಕರ ಉಸ್ತುವಾರಿ ಹಾಗೂ ಕೌನ್ಸಿಲರ್ ನೇಮಕ ಮಾಡಬೇಕೆಂದು ಅವರು ಸಲಹೆ ನೀಡಿದರು.
ನಗರದ 37 ಕಾಲೇಜುಗಳಲ್ಲಿ ಈ ಸಂಬಂಧ ನಿರಂತರ ಸಭೆಗಳಾಗುತ್ತಿದ್ದರೂ ಈ ಸಭೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಡಿವೈಎಸ್‌ಪಿ ರ್‍ಯಾಂಕಿನ ಪೊಲೀಸರು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಡಿಸಿಪಿ ಮುತ್ತುರಾಯ ಹೇಳಿದರು. ಈ ಸಂಬಂಧ ಪೊಲೀಸ್ ಕಮಿಷನರೆಟ್ ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಹೆತ್ತವರ, ಶಿಕ್ಷಕರ ಹಾಗೂ ಸಾರ್ವಜನಿಕರ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯವಿದೆ ಎಂದರು.
Click this button or press Ctrl+G to toggle between Kannada and English