ಮಂಗಳೂರು: ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ಕೇರಳ ರಾಜ್ಯಕ್ಕೆ ಕೆ.ಎ.19 ಝಡ್ 1636 ಇಂಡಿಕಾ ಕಾರಿನಲ್ಲ್ಲಿ ಸಾಗಿಸಿ ಅಲ್ಲಿ ಹೆಚ್ಚಿನ ಜಿಲ್ಲೆಗೆ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಪಡೆದ ಪಶ್ಚಿಮ ವಲಯದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇದ ದಳದ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ವಿಶ್ವನಾಥ ಪಂಡಿತ್ ರವರು ಪೊಲೀಸ್ ಉಪನಿರೀಕ್ಷಕರಾದ ನಾರಾಯಣ ಬೈಂದೂರು ಹಾಗೂ ಸಿಬ್ಬಂದಿಯವರೊಂದಿಗೆ ದಿನಾಂಕ 07-10-2010 ರಂದು ಮಧ್ಯಾಹ್ನ ಮುಡಿಪು ಜಂಕ್ಷನ್ ನಲ್ಲಿ ಹೊಂಚು ಹಾಕಿ ಕಾದು ಕುಳಿತುಕೊಂಡಿದ್ದಾಗ ಮಧ್ಯಾಹ್ನ ಸುಮಾರು 3.30 ಗಂಟೆಗೆ ಮುಡಿಪು ಕಡೆಯಿಂದ ಪಾತೂರು ರಸ್ತೆಯಲ್ಲಿ ಕೇರಳ ಕಡೆಗೆ ಧಾವಿಸಿ ಬರುತ್ತಿದ್ದ ಮೇಲ್ಕಾಣಿಸಿದ ಕಾರನ್ನು ನಿಲ್ಲಿಸಲು ಚಾಲಕನಿಗೆ ಸೂಚಿಸಿದಾಗ ಆರೋಪಿ ಚಾಲಕ ಹಾಗೂ ಇನ್ನೋರ್ವ ಕಾರನ್ನು ನಿಲ್ಲಿಸದಿದ್ದಾಗ, ಪೊಲೀಸ್ರು ಹಿಂಬಾಲಿಸಿದ್ದನ್ನು ಕಂಡು ಆರೋಪಿ ಚಾಲಕ ಮತ್ತು ಇನ್ನೋರ್ವ ಕಾರನ್ನು ನಿಲ್ಲಿಸಿ ಕಾಡಿನಲ್ಲಿ ಓಡಿ ತಪ್ಪಿಸಿಕೊಂಡರು.
ಕಾರಿನಲ್ಲಿದ್ದ ಸುಮಾರು ರೂ.80,000/- ಬೆಲೆಯ ಗೋವಾ ಮದ್ಯ, ಸುಮಾರು ರೂ.2.50 ಲಕ್ಷ ಬೆಲೆಯ ಕಾರು ಹಾಗೂ ಒಂದು ನಕಲಿ ನಂಬರ್ ಫ್ಲೇಟ್ ಹೀಗೆ ಒಟ್ಟು ರೂ. 3.30 ಲಕ್ಷ ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡು ತಪ್ಪಿಸಿಕೊಂಡ ಆರೋಪಿಗಳ ತಲಾಶೆಗಾಗಿ ವ್ಯಾಪಕ ಬಲೆ ಬೀಸಲಾಗಿದೆ. ಈ ಕಾರ್ಯಾಚರಣೆಯಲ್ಲಿ ಡಿ.ವೈ.ಎಸ್.ಪಿ ಕಛೇರಿಯ ಸಿಬ್ಬಂದಿಯವರಾದ ಜಯರಾಮ, ಶರೀಫ್, ಸುಚಿನ್, ವಿವೇಕ್ ಮತ್ತು ಗುರುರಾಜ್ ಭಾಗಿಯಾಗಿರುತ್ತಾರೆ.
Click this button or press Ctrl+G to toggle between Kannada and English