ಮೇಯರ್ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾ, ಗುಲ್ಜಾರ್ ಬಾನುರವರಿಗೆ ಜಯ

3:51 PM, Thursday, February 7th, 2013
Share
1 Star2 Stars3 Stars4 Stars5 Stars
(No Ratings Yet)
Loading...

Gulzar Banuಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಗುಲ್ಜಾರ್ ಬಾನುರವರ ವಿರುದ್ಧ ಬಿಜೆಪಿಯ ರೂಪಾ ಡಿ.ಬಂಗೇರ ಹಾಗೂ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು 3ನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ  ನ್ಯಾಯಾಧೀಶರು ವಜಾಗೊಳಿಸಿದ್ದಾರೆ ಆ ಮೂಲಕ ಗುಲ್ಜಾರ್ ಬಾನುರವರ ಆಯ್ಕೆಯನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಹಾಲಿ ಐದು ವರ್ಷಗಳ ಅಧಿಕಾರಾವಧಿಯ ಅಂತಿಮ ಮೇಯರ್‌ ಸ್ಥಾನಕ್ಕೆ 7-3-2012ರಂದು ಮೀಸಲು ನೆಲೆಯಲ್ಲಿ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನಿಂದ ಗುಲ್ಜಾರ್‌ಬಾನು ಮತ್ತು ಬಿಜೆಪಿಯಿಂದ ರೂಪಾ ಡಿ. ಬಂಗೇರಾ ನಾಮಪತ್ರ ಸಲ್ಲಿಸಿದ್ದರು. ಆದರೆ ಆದರೆ, ರೂಪಾ ಬಂಗೇರ ಅವರು ಸಕಾಲದಲ್ಲಿ ಜಾತಿ ಪ್ರಮಾಣಪತ್ರ ಸಲ್ಲಿಸಲಿಲ್ಲ ಎಂಬ ನೆಲೆಯಲ್ಲಿ ಅವರ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದರು. ಹಾಗಾಗಿ ಮಾರ್ಚ್ ೭ ೨೦೧೨ ರಂದು ಕಾಂಗ್ರೆಸ್‌ನ ಗುಲ್ಝಾರ್ ಬಾನು ಅವಿರೋಧ ಆಯ್ಕೆಯಾಗಿದ್ದರು.

ಇದಕ್ಕೆ ವಿರುದ್ಧವಾಗಿ ಬಿಜೆಪಿಯ  ರೂಪಾ ಡಿ. ಬಂಗೇರಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಾಥಮಿಕ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಈ ಅರ್ಜಿಯನ್ನು ಪುರಸ್ಕರಿಸಲಿಲ್ಲ; ಆದರೆ, ಜಿಲ್ಲಾ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಸೂಚಿಸಿತ್ತು. ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಗುಲ್ಜಾರ್‌ಬಾನು ಪರವಾಗಿ ನ್ಯಾಯವಾದಿ ಎಂ. ಪಿ. ಶೆಣೈ ವಾದಿಸಿದ್ದರು. ಫೆಬ್ರವರಿ 21ರ ವರೆಗೆ ಗುಲ್ಜಾರ್‌ಬಾನು ಅವರ ಅಧಿಕಾರಾವಧಿ ಇರುತ್ತದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English