ಮಂಗಳೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಬ್ಯಾಂಕ್ ಗಳ ಜಂಟಿ ಯೋಜನೆಯಲ್ಲಿ ನಗರದಲ್ಲಿ ಭಿತ್ತಿ ಚಿತ್ರ ಅಭಿಯಾನಕ್ಕೆ ಚಾಲನೆ

6:14 PM, Tuesday, February 12th, 2013
Share
1 Star2 Stars3 Stars4 Stars5 Stars
(No Ratings Yet)
Loading...

novel project in cityಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಬ್ಯಾಂಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಗ್ಗೆ ನಗರದ ಪ್ರಮುಖ ಸ್ಥಳಗಳಲ್ಲಿನ ಆವರಣ ಗೋಡೆಗಳಲ್ಲಿ ಭಿತ್ತಿ ಚಿತ್ರಗಳನ್ನು ರಚಿಸುವ ಅಭಿಯಾನಕ್ಕೆ  ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ.ಜಯರಾಮ್ ಭಟ್  ಚಾಲನೆ ನೀಡಿದರು. ನಗರ ಸೌಂದರ್ಯ ಮತ್ತು ನಗರ ನೈರ್ಮಲ್ಯವನ್ನು ಕಾಪಾಡುವ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಬ್ಯಾಂಕ್ ಈ ಅಭಿಯಾನವನ್ನು ಹಮ್ಮಿಕೊಂಡಿವೆ.

ಈ ಸಂದರ್ಭ ಮಾತನಾಡಿದ ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ.ಜಯರಾಮ್ ಭಟ್  ನಗರದ ಸೌಂದರ್ಯವನ್ನು ಕಾಪಾಡುವ ಉದ್ದೇಶದಿಂದ ಕೈಗೊಂಡ ಈ ಅಭಿಯಾನ ನಿಜಕ್ಕೂ  ಒಂದು ಉತ್ತಮ ಕಾರ್ಯವಾಗಿದ್ದು ಈ ಅಭಿಯಾನದಿಂದ  ನಗರ ಸೌಂದರ್ಯದ ಜತೆಗೆ ಚಿತ್ರಕಲೆ ಕೂಡ ಪಸರಿಸಿದಂತಾಗುತ್ತದೆ. ಇಂತಹ ಜನೋಪಯೋಗಿ ಕೆಲಸಗಳಿಗೆ ಯಾವಾಗಲು ಕರ್ನಾಟಕ ಬ್ಯಾಂಕ್ ಪ್ರೋತ್ಸಾಹ ನೀಡುತ್ತದೆ, ಇದಕ್ಕೆ ಜನಬೆಂಬಲ ತುಂಬಾ ಅಗತ್ಯ ಎಂದವರು ಹೇಳಿದರು.

ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪಾಲಿಕೆ ನಗರ ನೈರ್ಮಲ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ  ನೀಡುತ್ತಿದ್ದು ಪಾಲಿಕೆಯ ಈ ಎಲ್ಲಾ ಕಾರ್ಯಗಳಿಗೆ ಕರ್ನಾಟಕ ಬ್ಯಾಂಕ್ ಸಹಕಾರ ನೀಡುತ್ತಿರುವುದು ಸಂತಸ ತಂದಿದೆ. ನಗರದ ಸೌಂದರ್ಯ ಕಾಪಾಡಲು ಗೋಡೆಗಳಲ್ಲಿ ಭಿತ್ತಿ ಚಿತ್ರಗಳನ್ನಮು ರಚಿಸಿದರೂ ಅವುಗಳ ಮೇಲೆಯೇ ಜಾಹೀರಾತುಗಳ ಭಿತ್ತಿ ಪತ್ರಗಳನ್ನು ಅಂಟಿಸುತ್ತಾರೆ. ಮುಂದಿನ ದಿನಗಳಲ್ಲಿ ಪಾಲಿಕೆಯು ಈ ಬಗ್ಗೆ ಸೂಕ್ತ ರೀತಿಯಾದ ಶಿಸ್ತಿನ ಕ್ರಮಗಳನ್ನು ಕೈಗೊಳ್ಳುತ್ತದೆ ಹಾಗೂ ಕಟ್ಟಡ ರಚನೆಗೆ ಸಂಬಂಧಿಸಿದ ನಿಯಮಗಳಂತೆಯೇ ಇದಕ್ಕೂ ಕೂಡ ನಿಯಮಗಳನ್ನು ರೂಪಿಸಲಾಗುವುದು,  ಈ ಭಿತ್ತಿ ಚಿತ್ರಗಳನ್ನು ಜ್ಯೋತಿಯ ಅಂಬೇಡ್ಕರ್ ವೃತ್ತದ ಬಳಿಯ ಗೋಡೆ, ರೈಲ್ವೆ ಸ್ಟೇಶನ್ ಬಳಿಯ ಗೋಡೆ, ಪಿವಿಎಸ್ ಕುದ್ಮುಲ್ ರಂಗರಾವ್ ಸ್ಮಾರಕ ಹಾಸ್ಟೆಲ್ ಬಳಿಯ ಆವರಣ ಗೋಡೆಗಳಲ್ಲಿ ರಚಿಸಲಾಗುವುದು ಎಂದು ಹೇಳಿದರು.

ಕಲಾವಿದರುಗಳಾದ ದಿನೇಶ್ ಹೊಳ್ಳ, ಕೋಟಿ ಪ್ರಸಾದ್ ಆಳ್ವ, ಹರೀಶ್ ಮರ್ಣೆ, ಹರೀಶ್ ಕೊಡಿಯಾಲ್ ಬೈಲ್ ಎಸ್.ಡಿ.ಎಸ್ ಕೋರ್ ಡೆಕೋರ್ ನ ಶಶಾಂಕ್ ಮುಂತಾದವರು ಉಪಸ್ಥಿತರಿದ್ಧರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English