ಮಂಗಳೂರಿನಲ್ಲಿ ಹೆಲ್ಮೆಟ್ ಗಳಿಗೆ ದಂಡಂ ದಶಗುಣಂ !

5:08 PM, Tuesday, February 12th, 2013
Share
1 Star2 Stars3 Stars4 Stars5 Stars
(No Ratings Yet)
Loading...

sub standard helmets in Mangaloreಮಂಗಳೂರು : ಕಳಪೆ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಮಂಗಳೂರು ನಗರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ತಲೆಯನ್ನು ಪೂರ್ತಿಯಾಗಿ ಮುಚ್ಚುವಂತಹ ಹಾಗೂ ಗಟ್ಟಿಮುಟ್ಟಾದ ಹೆಲ್ಮೆಟ್ ಧರಿಸಬೇಕು ಎಂಬ ನಿರ್ದೇಶನ ವಿದ್ದರೂ, ದ್ವಿಚಕ್ರವಾಹನ ಸವಾರರು ಧರಿಸಿದ್ದ ಸುರಕ್ಷಿತವಲ್ಲದ ಹೆಲ್ಮೆಟ್ ಗಳನ್ನು ಪೊಲೀಸರು ಇನ್ನೂ ಮುಂದೆ ಹಿಡಿದು ದಂಡ ಹಾಕುವ ಕೆಲಸಕ್ಕೆ ಕೈ ಹಾಕಲಿದ್ದಾರೆ.

ಮಂಗಳೂರು ನಗರ ಸಂಚಾರಿ ಪೊಲೀಸರು ಈ ಸಂಬಂಧ ‘ಸ್ಪೆಷಲ್ ಡ್ರೈವ್’ ಎಂಬ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದೆ. ಬಹುತೇಕ ದ್ವಿಚಕ್ರ ವಾಹನ ಸವಾರರು ಕಡಿಮೆ ಬೆಲೆಯ, ಗಟ್ಟಿಯಾಗಿರದೆ ಒಂದೇ ಹೊಡೆತಕ್ಕೆ ಪುಡಿಯಾಗುವ ಹಾಗೂ ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸುತ್ತಿರುವುದು ಗಮನಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೇವಲ ಹೆಲ್ಮೆಟ್ ಮಾತ್ರವಲ್ಲದೆ ಬೆಳಗ್ಗಿನ ಹೊತ್ತು ನಗರದ ಹೊರ ಭಾಗದಲ್ಲಿ ಯುವಕರು ಪರವಾನಗಿಯಿಲ್ಲದೆ ಹಾಗೂ ಸಂಚಾರ ನಿಯಮ ಪಾಲಿಸದೆ ವಾಹನ ಸವಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆ ಪ್ರಾರಂಭಿಸಿದ್ದಾರೆ. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ 9 ಗಂಟೆ ವರೆಗೆ ಹಾಗೂ ರಾತ್ರಿ 9 ಗಂಟೆಯಿಂದ 11.30ರ ವರೆಗೆ ನಗರದ ಹೊರಭಾಗದಲ್ಲಿ ಪೊಲೀಸರು ವಿಶೇಷ ತಪಾಸಣೆ ನಡೆಸಲಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English