ಮಂಗಳೂರು: ಸಾಂಸ್ಕೃತಿಕ, ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸಾಧನೆಮಾಡಿದ ಹಿರಿಯ ಸಾಹಿತಿ ದಿ| ಕೆ. ಅನಂತರಾಮ ರಾವ್ ಅವರ ಸಂಸ್ಮರಣೆ ಕಾರ್ಯಕ್ರಮ ಇಂದು ಬೆಳಿಗ್ಗೆ ಕೊಡಿಯಾಲ್ ಬೈಲ್ ನಲ್ಲಿರುವ ಶಾರದಾ ವಿದ್ಯಾಲಯದಲ್ಲಿ ನಡೆಯಿತು.
ನಾರಾಯಣ ಭಟ್ ರಾಮಕುಂಜ ಬರೆದ ‘ಉತ್ತಮ ಶಾಲೆಗೊಂದು ಮಾರ್ಗದರ್ಶಿ’ ಕೃತಿಯನ್ನು ವಿಶ್ವೇಶ ತೀರ್ಥ ಶ್ರೀಪಾದರು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ವಿಶ್ವೇಶ ತೀರ್ಥ ಶ್ರೀಪಾದಂಗಳವರು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ದಿ| ಅನಂತರಾಮರು ಅಪಾರ ಸೇವೆಯನ್ನು ಮಾಡಿದ್ದಾರೆ. ಅವರ ಜೀವಿತದಲ್ಲಿ ಸಂಪೂರ್ಣ ರಾಮಾಯಣ, ಸಂಪೂರ್ಣ ಮಹಾಭಾರತ ಕೃತಿಗಳನ್ನು ಮಿತ ಭಾಷೆಯಲ್ಲಿ ಪ್ರಕಟಿಸಿ ಸಂಸ್ಕೃತಿಯ ಬಗ್ಗೆ ಗಮನಾರ್ಹ ಚಿಂತನೆಯನ್ನು ನಡೆಸಿದ್ದಾರೆ ಅಲ್ಲದೆ ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಸಲ್ಲಿಸಿದ ಸೇವೆ ಇಂದಿಗೂ ಅಜರಾಮರವಾಗಿದೆ ಎಂದರು.
ದಿ| ಅನಂತರಾಮರು ಸ್ಥಾಪಿಸಿದ ವಿದ್ಯಾ ಪಬ್ಲಿಷಿಂಗ್ ಹೌಸ್ ನ 15 ನೇ ವರ್ಷಾಚರಣೆ ಸಮಾರಂಭವು ಇದೇ ಸಂದರ್ಭದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೆಂಚುರಿ ಬಿಲ್ಡರ್ಸ್ ನ ನಿರ್ದೇಶಕರಾದ ಪಿ. ದಯಾನಂದ ಪೈ ವಹಿಸಿದ್ದರು. ವಿಶೇಷ ಅತಿಥಿಗಳಾದ ಕರ್ನಾಟಕ ಬ್ಯಾಂಕ್ ನಿರ್ದೇಶಕರಾದ ಪಿ. ಜಯರಾಮ್ ಭಟ್, ಎಸ್.ಎಲ್ ಶೇಟ್ ಜುವೆಲ್ಲರ್ಸ್ ಮಾಲಕ ರಘುನಾಥ್ ಶೇಟ್, ಶಾರದಾ ವಿದ್ಯಾಲಯದ ಅಧ್ಯಕ್ಷರಾದ ಎಂ.ಬಿ. ಪುರಾಣಿಕ್, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಿ| ಅನಂತರಾಮರ ಪತ್ನಿ ವಿನೋದ ಅನಂತರಾಮ ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English