ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಹಾಗೂ ರಾಮಕೃಷ್ಣ ಪದವಿ ಪೂರ್ಣ ಕಾಲೇಜು ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಗರ ನೈರ್ಮಲೀಕರಣ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಿರ್ಮಲ ನಗರ ಅಭಿಯಾನ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ನಡೆಯಿತು.
ನಿರ್ಮಲ ನಗರ ಅಭಿಯಾನವು ಜಾಥಾ ಹಾಗೂ ಬೀದಿನಾಟಕದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ನಾವು ನಮ್ಮ ಮನೆ ಹಾಗೂ ಹಿತ್ತಿಲನ್ನು ಹೇಗೆ ಸ್ವಚ್ಚವಾಗಿಡುತ್ತೇವೆಯೋ ಹಾಗೆ ನಾವು ಸಂಚರಿಸುವ ಪರಿಸರವನ್ನು ಶುಚಿಯಾಗಿಡಬೇಕು, ಅನಾಗರಿಕ ನೀತಿಯಿಂದ ಪರಿಸರ ಹಾಳಾಗುತ್ತಿದೆ. ಶಿಸ್ತು ಹಾಗೂ ಕ್ರಮಬದ್ದ ಜೇವನದಿಂದ ನೈರ್ಮಲ್ಯ ಜೀವನದ ಪಾಠ ಕಲಿಯಬಹುದು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಎಂ.ಜೆ.ಎಫ್. ಜಿಲ್ಲಾ ಗವರ್ನರ್, ಲ.ಜೆ.ಕೆ. ರಾವ್, ರಾಮಕೃಷ್ಣ ಕಾಲೇಜ್ ನ ಸಂಚಾಲಕ ಎಂ. ಸುಂದರ ಶೆಟ್ಟಿ, ಲಯನೆಸ್ ಕ್ಲಬ್
ನ ಅಧ್ಯಕ್ಷರು, ಲ. ಪಾವನ ಜೆ. ಶೆಟ್ಟಿ, ಎನ್.ಎಸ್.ಎಸ್ ಯೋಜನಾಧಿಕಾರಿ ಕು. ರೇಷ್ಮಾ ಶೆಟ್ಟಿ ರಾಮಕೃಷ್ಣ ಕಾಲೇಜು ಉಪಸ್ಥಿತರಿದ್ದರು.
ಲ. ಜೀವನ್ ದಾಸ್ ಶೆಟ್ಟಿ, ಅಧ್ಯಕ್ಷರು, ಲಯನೆಸ್ ಕ್ಲಬ್, ಹೈಲ್ಯಾಂಡ್, ಮಂಗಳೂರು ಧನ್ಯವಾದವಿತ್ತರು.
Click this button or press Ctrl+G to toggle between Kannada and English