ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಹರೇಕಳದ ಏಲಿಯಾರಪದವಿನಲ್ಲಿರುವ ಇಂಡೋ ಫಿಶರೀಸ್ ಮೀನಿನ ಸಂಸ್ಕರಣಾ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರುವಿಕೆಯಿಂದ ಓರ್ವ ಕಾರ್ಮಿಕ ಮೃತ ಪಟ್ಟಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ.
ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ರಿಯಾಜ್(22) ಮೃತಪಟ್ಟಿದ್ದು, ಕೋಟೆಕಾರು ಬೀರಿ ನಿವಾಸಿ ಹನೀಫ್(23) ಹಾಗೂ ಕಾಸರಗೋಡಿನ ಕುಂಬಳೆಯ ಸಂಕೇತ್(23) ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ರಾತ್ರಿ 8.30ರ ಸುಮಾರಿಗೆ ಫ್ಯಾಕ್ಟರಿಯಲ್ಲಿ ಮೀನಿನ ರಫ್ತಿಗಾಗಿ ಅವುಗಳನ್ನು ಸಂಗ್ರಹಿಸುತ್ತಿರುವಾಗ ಫ್ರೀಜರ್ ನಲ್ಲಿ ಹಠಾತ್ತಾಗಿ ಅಮೋನಿಯಾ ಅನಿಲ ಸೋರುವಿಕೆ ಉಂಟಾಯಿತು. ಇದನ್ನು ಗಮನಿಸಿದ ರಿಯಾಜ್ ಹಾಗೂ ಹನೀಫ್ ಅವರು ಸೋರುವಿಕೆಯನ್ನು ಪರೀಕ್ಷಿಸಲು ಹೋಗಿ ವಿಷಪೂರಿತ ದಟ್ಟ ಹೊಗೆಯೊಳಗೆ ಸಿಲುಕಿಕೊಂಡರು. ಅನಿಲವು ದೇಹದೊಳಗೆ ಪ್ರವೇಶಿಸಿದ ಕಾರಣ ತೀವ್ರತೆರನಾದ ಉಸಿರಾಟದ ತೊಂದರೆಯನ್ನು ಅನುಭವಿಸಿ ಅಸ್ವಸ್ಥರಾದರು. ತಕ್ಷಣ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ರಿಯಾಜ್ ಕೊನೆಯುಸಿರೆಳೆದಿದ್ದಾರೆ. ಸಂಕೇತ್ ಮತ್ತು ಹನೀಫ್ ಸ್ಥಿತಿ ಚಿಂತಾಜನಕವಾಗಿದ್ದು, ತೀವ್ರ ನಿಗಾ ಘಟಕದಲ್ಲಿಡಲಾಗಿದೆ.
ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದರಿಂದ ಎರಡು ಅಗ್ನಿಶಾಮಕ ವಾಹನಗಳಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಬಂದು ನೀರನ್ನು ಹಾಯಿಸುವ ಮೂಲಕ ಅಮೋನಿಯಾ ಅನಿಲದ ಪ್ರಬಲತೆಯನ್ನು ಕಡಿಮೆ ಮಾಡಿ ಅನಿಲ ಸೋರುವಿಕೆಯನ್ನು ತಡೆಗಟ್ಟಿದರು. ಕಳೆದ ೧೫ ವೇಷಗಳಲ್ಲಿ ಈ ಕಾರ್ಖಾನೆಯಲ್ಲಿ ಈ ರೀತಿಯ ಘಟನೆ ಇದೇ ಮೊದಲು ಎನ್ನಲಾಗಿದೆ.
Click this button or press Ctrl+G to toggle between Kannada and English