ಹಸಿರು ರಕ್ಷಣೆಗಾಗಿ ೧೦೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ : ಅನಂತ ಹೆಗಡೆ ಅಶೀಸರ

11:54 AM, Friday, February 15th, 2013
Share
1 Star2 Stars3 Stars4 Stars5 Stars
(No Ratings Yet)
Loading...

Ananth Hegde Ashisaraಮಂಗಳೂರು :  ಅರಣ್ಯ ಸಂರಕ್ಷಣೆಗೆ 18 ಕೋಟಿ ರೂಪಾಯಿ ಹಣವನ್ನು, ರಾಜ್ಯದ ಒಂದು ಗ್ರಾಮವನ್ನು ಹಸಿರು ಗ್ರಾಮವಾಗಿ ಪರಿವರ್ತಿಸಲು 3 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ ಎಂದು ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಅವರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದರು.

ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ  ಅರಣ್ಯ ಸಂರಕ್ಷಣೆಗೆ ಇತರೆ ವಿಷಯಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯ ವನ್ನು ನೀಡಲು ಯೋಚಿಸಿದ್ದು, ಒಟ್ಟು 18 ಕೋಟಿ ರೂಪಾಯಿ ಹಣವನ್ನು ಹಸಿರು ಹಾಗೂ ಅರಣ್ಯ ರಕ್ಷಣೆಗೆ ಮೀಸಲಿರಿಸಲಾಗಿದೆ. ರಾಜ್ಯದೆಲ್ಲೆಡೆ ಹಲಸು ಹಾಗೂ ಜೇನು ಕೃಷಿಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತರಲಾಗುವುದು ಮತ್ತು ರಸ್ತೆ ಬದಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಅದಕ್ಕಾಗಿ 12 ಕೋಟಿ ರೂಪಾಯಿ ಯನ್ನು, ರಾಜ್ಯದ ಒಂದು ಗ್ರಾಮವನ್ನು ಹಸಿರು ಗ್ರಾಮವಾಗಿ ಪರಿವರ್ತಿಸಲು 3 ಕೋಟಿ ರೂಪಾಯಿ, ದೇವರ ಕಾಡು ರಕ್ಷಣೆಗೆ 8 ಕೋಟಿ ರೂಪಾಯಿ  ರಾಷ್ಟ್ರೀಯ ಉದ್ಯಾನವನ ಪುನರ್ವಸತಿಗೆ 10 ಕೋಟಿ ರೂಪಾಯಿ, ವನ್ಯ ಜೀವಿ ಸಂರಕ್ಷಣೆಗೆ 66 ಕೋಟಿ ರೂಪಾಯಿ ಗಳನ್ನು ಒದಗಿಸಲಾಗಿದೆ ಎಂದು ಅವರು ವಿವರಿಸಿದರು.

ಇದುವರೆಗೆ ಒಟ್ಟು ೧೦೦೦ ಕೋಟಿ  ರೂಪಾಯಿಗಳನ್ನು ಹಸಿರು ರಕ್ಷಣೆಗಾಗಿ ನೀಡಲಾಗಿದ್ದು, ದಕ್ಷಿಣ ಕನ್ನಡ, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲಿ ಕಾಂಡ್ಲಾ ವನ, ಶ್ರೀ ಗಂಧದ ವನ ಹಾಗೂ ದೇವರ ಕಾಡುಗಳನ್ನು ರಕ್ಷಿಸುವ ಹಾಗೂ ಬೆಳೆಯುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಪದ್ಮನಾಭ ಗೌಡ ಹಾಗೂ ಪ್ರಾದೇಶಿಕ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ ಹಾಗೂ ಇತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English