ಉಡುಪಿಯಲ್ಲಿ ಡಾ| ವಿ.ಎಸ್‌. ಆಚಾರ್ಯ ರ ಸ್ಮರಣಾರ್ಥ ಪ್ರತಿಮೆ ಅನಾವರಣ

2:19 PM, Friday, February 15th, 2013
Share
1 Star2 Stars3 Stars4 Stars5 Stars
(No Ratings Yet)
Loading...

VS Acharya ಉಡುಪಿ : ಉಡುಪಿ ನಗರಸಭೆ ಕಚೇರಿ ಮತ್ತು ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಬಳಿ  ಸ್ಥಾಪಿಸಲಾದ ಡಾ| ವಿ.ಎಸ್‌. ಆಚಾರ್ಯ ರ ಪ್ರತಿಮೆಗಳನ್ನು ಫೆಬ್ರವರಿ  14 ಶುಕ್ರವಾರದಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅನಾವರಣಗೊಳಿಸಿದರು. ಹಾಗು ಈ ಸಂದರ್ಭ  ಉಡುಪಿ ಜಿಲ್ಲಾ ಪಂಚಾಯತಿ  ಸಭಾಂಗಣಕ್ಕೆ ಡಾ| ಆಚಾರ್ಯ ಅವರ ಹೆಸರನ್ನಿಡಲಾಯಿತು.

ಅನಂತರ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ‘ದಿ| ಡಾ| ವಿ.ಎಸ್‌. ಆಚಾರ್ಯ ಅವರು ಈ ಶತಮಾನ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಓರ್ವರು. ಅವರ ಬದುಕು, ಚಿಂತನೆ, ರಾಜಕೀಯ ಮೌಲ್ಯಗಳು ಆದರ್ಶವಾದುದು. ನಗರಾಡಳಿತದ ಅಭಿವೃದ್ಧಿಗೆ ವಿಶೇಷ ಕಾಳಜಿ ತೋರಿಸಿದ್ದರಿಂದ ರಾಜ್ಯ ಸರಕಾರವು ಮೈಸೂರಿನ ನಗರಾಡಳಿತ ತರಬೇತಿ ಕೇಂದ್ರಕ್ಕೆ  ಅವರ ಹೆಸರನ್ನಿಡಲು ತೀರ್ಮಾನಿಸಿದೆ’ ಎಂದು ಹೇಳಿದರು.

VS Acharyaಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಉಡುಪಿ ಶಾಸಕ ಕೆ. ರಘುಪತಿ ಭಟ್‌ ಮಾತನಾಡಿ,  ಡಾ| ವಿ.ಎಸ್‌. ಆಚಾರ್ಯ ಅಭಿವೃದ್ಧಿಪರ ಚಿಂತನೆಯನ್ನು ಹೊಂದಿದ್ದರು ಅವರ ಈ ಚಿಂತನೆಗಳನ್ನು ಜನಪ್ರತಿನಿಧಿಗಳು, ಕಾರ್ಯಕರ್ತರು ಅನುಷ್ಠಾನಕ್ಕೆ ತರಬೇಕಾಗಿದೆ. ಡಾ| ವಿ.ಎಸ್‌. ಆಚಾರ್ಯ  ರವರ ಹೆಸರಿನಲ್ಲಿ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದವರೆಗಿನ ರಸ್ತೆಯನ್ನು ಚತುಷ್ಪಥಗೊಳಿಸಲಾಗುವುದು ಎಂದವರು ಹೇಳಿದರು.

ಉಡುಪಿ ನಗರಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್‌, ಜಿ.ಪಂ. ಅಧ್ಯಕ್ಷ ಉಪೇಂದ್ರ ನಾಯಕ್‌,  ತಿಂಗಳೆ  ವಿಕ್ರಮಾರ್ಜುನ ಹೆಗ್ಡೆ, ನಗರಸಭೆ ಅಧ್ಯಕ್ಷ ಕಿರಣ್‌ ಕುಮಾರ್‌, ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಜಿಲ್ಲಾಧಿಕಾರಿ ಡಾ| ಎಂ.ಟಿ. ರೆಜು, ಜಿ.ಪಂ. ಉಪಾಧ್ಯಕ್ಷೆ ಮಮತಾ ಶೆಟ್ಟಿ, ಜಿ.ಪಂ. ಮಾಜಿ ಅಧ್ಯಕ್ಷ ಕಟಪಾಡಿ ಶಂಕರ ಪೂಜಾರಿ, ನಗರಸಭೆ ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಹೆರ್ಗ, ತಾ.ಪಂ. ಅಧ್ಯಕ್ಷೆ ಗೌರಿ ಪೂಜಾರಿ, ಪೌರಾಯುಕ್ತ ಗೋಕುಲ್‌ದಾಸ್‌ ನಾಯಕ್‌, ನಗರಸಭೆ ಉಪಾಧ್ಯಕ್ಷೆ ಭಾರತಿ ಚಂದ್ರಶೇಖರ್‌ , ವಿ.ಎಸ್‌. ಆಚಾರ್ಯ ಅವರ ಪುತ್ರರಾದ ಡಾ ಕಿರಣ್ ಆಚಾರ್ಯ, ಡಾ ರವಿರಾಜ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English