ಮಂಗಳೂರು : ಕೇರಳದ ಕೋಯಿಕೋಡ್ ನಿಂದ ಉಡುಪಿಗೆ ಸಾಗುತ್ತಿದ್ದ ಮೀನಿನ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಕುಂಟಿಕಾನ್ ಹಾಗೂ ಕೆಪಿಟಿ ಜಂಕ್ಷನ್ ನಡುವೆ ಉರುಳಿ ಬಿದ್ದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಚಾಲಕನು ಅತೀ ವೇಗದಲ್ಲಿ ಲಾರಿಯನ್ನು ಚಲಾಯಿಸಿದ ಕಾರಣದಿಂದಾಗಿ ಈ ಘಟನೆಯು ಸಂಭವಿಸಿದ್ದು, ಲಾರಿಯಲ್ಲಿದ್ದ ಚಾಲಕ ರಿಯಾಜ್ ಹಾಗೂ ಕ್ಲೀನರ್ ನಜೀಬ್ ಗೆ ಯಾವುದೇ ಪ್ರಾಣಾಪಾಯವಿಲ್ಲದೆ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಲಾರಿಯಲ್ಲಿದ್ದ 195 ಮೀನಿನ ಪಟ್ಟಿಗೆಗಳು ರಸ್ತೆಗೆ ಬಿದ್ದು, ಚೆಲ್ಲಾಪಿಲ್ಲಿಯಾಗಿವೆ. ಸುದ್ದಿ ಹರಡುತ್ತಿದ್ದಂತೆ ರಾಶಿ ರಾಶಿ ಮೀನನ್ನು ಕಂಡ ಸ್ಥಳೀಯರು ತಮ್ಮ ತಮ್ಮ ಚೀಲಗಳಲ್ಲಿ ತುಂಬಿಸಿಕೊಂಡು ಹೋದರು.
Click this button or press Ctrl+G to toggle between Kannada and English