ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿನ ಬದಲು ಫರ್ಡಿನೆಂಡ್ ಕಿಟ್ಟೆಲ್ ಹೆಸರಿಡುವುದು ಸೂಕ್ತ : ಟಿ. ಜೆ. ಅಬ್ರಹಾಂ

11:28 AM, Saturday, February 16th, 2013
Share
1 Star2 Stars3 Stars4 Stars5 Stars
(No Ratings Yet)
Loading...

University in Srirangapatnaಮಂಗಳೂರು : ಕೇಂದ್ರ ಸರ್ಕಾರವು ಮೈಸೂರಿನ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ನಿರ್ಧರಿಸಿರುವ ಅಲ್ಪಸಂಖ್ಯಾತ ವಿಶ್ವವಿದ್ಯಾನಿಲಯಕ್ಕೆ ಟಿಪ್ಪು ಹೆಸರಿನ ಬದಲು  ಶಿಕ್ಷಣ ಕ್ಷೇತ್ರಕ್ಕೆ ಗಣನೀಯವಾದ ಸೇವೆ ಸಲ್ಲಿಸಿದ್ದ ರೆ.ಫಾ.ಫರ್ಡಿನೆಂಡ್ ಕಿಟ್ಟೆಲ್  ಹೆಸರಿಡುವುದು ಸೂಕ್ತ ಎಂದು ಸಾಮಾಜಿಕ ಕಾರ್ಯಕರ್ತ ಹಾಗೂ ಆ್ಯಂಟಿ ಗ್ರಾಫ್ಟ್ ಮತ್ತು ಎನ್ವಿರಾನ್‌ಮೆಂಟ್ ಫೋರಂನ ಅಧ್ಯಕ್ಷ ಟಿ. ಜೆ. ಅಬ್ರಹಾಂ ಹೇಳಿದರು.

ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ಟಿಪ್ಪು ಸುಲ್ತಾನ್ ಒಬ್ಬ ಶ್ರೇಷ್ಟ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಎಂಬುದು ನಿಜ. ಆದರೆ ಆತ ಶಿಕ್ಷಣ ಕ್ಷೇತ್ರಕ್ಕೆ ಯಾವುದೇ ರೀತಿಯ ಕೊಡುಗೆ ನೀಡಿರಲಿಲ್ಲ. ಟಿಪ್ಪು ಕನ್ನಡ ಭಾಷೆಗೆ ಆದ್ಯತೆ ನೀಡದೆ ಪರ್ಶಿಯನ್ ಭಾಷೆಯನ್ನೇ ಆಡಳಿತ ಭಾಷೆಯಾಗಿ ಮಾಡಲು ಒತ್ತು ನೀಡಿದ್ದನು, ಕರಾವಳಿಯ 27 ಚರ್ಚ್‌ಗಳನ್ನು ಕೆಡವಿ, ಆ ಕಲ್ಲುಗಳ ಮೂಲಕ ಮಸೀದಿ ಕಟ್ಟಲಾಗಿದೆ ಹಾಗು ಕರಾವಳಿ ಭಾಗದ ಸುಮಾರು 70,000 ದಿಂದ 80,000 ಕ್ರೈಸ್ತರನ್ನು ಒತ್ತಾಯ ಪೂರ್ವಕವಾಗಿ ಮತಾಂತರ ಮಾಡಿದ್ದ ಆದ್ದರಿಂದ ಟಿಪ್ಪುವಿನ ಹೆಸರು ಕ್ರೈಸ್ತ ಸಮುದಾಯಕ್ಕೆ ನೋವನ್ನು ನೆನಪಿಸುತ್ತದೆ ಎಂದರು.

ಆದರಿಂದ ಕನ್ನಡ ಭಾಷೆಗಾಗಿ ಮತ್ತು ಶಿಕ್ಷಣಕ್ಕಾಗಿ ಶ್ರಮಿಸಿದ ಕಿಟೆಲ್ ಅವರ ಹೆಸರಿಡುವುದು ಸೂಕ್ತ. ಮುಸ್ಲಿಂ ಸಮುದಾಯವನ್ನು ಮಾತ್ರ ಓಲೈಸಲು ಕೇಂದ್ರ ಸರ್ಕಾರ ವಿವಿಗೆ ಟಿಪ್ಪು ಹೆಸರಿಡಲು ಮುಂದಾಗಿದೆ. ಒಂದು ವೇಳೆ ಮುಸ್ಲಿಂ ಹೆಸರನ್ನೇ ಟಿಪ್ಪು ವಿವಿಗೆ ಇಡುವುದಾದರೆ ಸಂತ ಶಿಶುನಾಳ ಶರೀಫ್ ಅಥವಾ ಎಪಿಜೆ ಅಬ್ದುಲ್ ಕಲಾಂ ಹೆಸರನ್ನು ಇಡಬಹುದಲ್ಲ ಎಂದು ಅವರು  ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕ್ಯಾಥಲಿಕ್ ಕ್ರಿಶ್ಚಿಯನ್ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ರಫಾಯಲ್ ರಾಜ್ ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English