ಸಮತಾ ಬಳಗದಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆ.

5:41 PM, Friday, August 20th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಸಮತಾ (ರಿ) ಮಹಿಳಾ ಬಳಗದ, ಬಿಜೈ ಮಂಗಳೂರು (ದ.ಕ.) ಇದರ ವತಿಯಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯು ಇಂದು ಸಂಜೆ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ನಡೆಯಿತು.


ಸಮತಾ ಮಹಿಳಾ ಬಳಗವು ಈ ವರ್ಷ ವಿಂಶತಿ ಉತ್ಸವವನ್ನು ಆಚರಿಸುತ್ತಿದ್ದು, ತಲಾ 7 ವರ್ಷಗಳಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯನ್ನು ಆಚರಿಸುತ್ತಾ ಬಂದಿದ್ದು, ಸುಮಾರು 400 ಮಹಿಳೆಯರು ಇದರ ಸದಸ್ಯರಾಗಿದ್ದಾರೆ. ಈ ಸಂಘವು ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇಂದು ವರಮಹಾಲಕ್ಷೀ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಿತು. ಮುತ್ತೈದೆಯರಿಗೆ ಬಾಗಿನ ನೀಡಿ ಸತ್ಕರಿಸಲಾಯಿತು.
ಕಾತ್ಯಾಯಿನಿ ಸೀತರಾಮ್, ಸಮತಾ ಮಹಿಳಾ ಬಳಗದ ಅಧ್ಯಕ್ಷೆ ಪೂರ್ಣಿಮಾ ಪೇಜಾವರ, ಸಂಘದ ಕಾರ್ಯದರ್ಶಿ ಹಾಗೂ ಸಮತಾ ಮಹಿಳಾ ಬಳಗದ ಸದಸ್ಯರೆಲ್ಲರೂ ಒಟ್ಟಾಗಿ ಪೂಜೆಯನ್ನು ನೆರವೇರಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English