ಕಿನ್ನಿಪದವು ಕೊಲೆ ಚಿನ್ನ ದೋಚುವ ಉದ್ದೇಶದಿಂದ ಕೃತ್ಯ , ಆರೋಪಿಯ ಬಂಧನ

12:06 PM, Saturday, February 16th, 2013
Share
1 Star2 Stars3 Stars4 Stars5 Stars
(No Ratings Yet)
Loading...

Kinnipadavu maurder caseಮಂಗಳೂರು : ಬುಧವಾರ ರಾತ್ರಿ ಬಜಪೆ ಸಮೀಪದ ಕಿನ್ನಿಪದವು ಎಂಬಲ್ಲಿ ಕೊಲೆಯಾದ ಸಂಕಲರಿಯ ನಿವಾಸಿ ಯಶವಂತ ಮಡಿವಾಳ ಕೊಲೆಗೆ ಸಂಬಂಧಿಸಿದಂತೆ ಬಜ್ಪೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕಿನ್ನಿಪದವು ನಿವಾಸಿ ದತ್ತ ಕೃಷ್ಣ ಶೆಟ್ಟಿ(21) ಬಂಧಿತ ಆರೋಪಿಯಾಗಿದ್ದಾನೆ.

ಹಲವು ವರ್ಷಗಳಿಂದ ಯಶವಂತ ಮಡಿವಾಳ ಮತ್ತು  ದತ್ತ ಸ್ನೇಹಿತರಾಗಿದ್ದರು. ಯಾವಾಗಲೂ ಜತೆಯಾಗಿಯೇ ಓಡಾಡುತ್ತಿದ್ದ ಇವರು ಘಟನೆಯ ಮುನ್ನಾ ದಿನ ಕಿನ್ನಿಪದವಿನ ಮಾಂಕಾಳಿ ದೈವಸ್ಥಾನದಲ್ಲಿನ ನೇಮದಲ್ಲಿ ಯಶವಂತ ಮತ್ತು ದತ್ತ ಒಟ್ಟಾಗಿ ಕೋಲದಲ್ಲಿ ಭಾಗವಹಿಸಿದ್ದರು ಆದರೆ ಯಶವಂತರು ಹಾಕಿದ್ದ ಚಿನ್ನದ ಉಂಗುರ,ಬ್ರಾಸ್‌ ಲೈಟ್‌ನ್ನು ದೋಚುವ ಉದ್ದೇಶ ಹೊಂದಿದ್ದ  ದತ್ತ ಬುಧವಾರ ರಾತ್ರಿ ಕೋಲದ ಸಂದರ್ಭದಲ್ಲಿ ಯಶವಂತನನ್ನು ಕಿನ್ನಿಪದವಿನ ನಿರ್ಮಾಣ ಹಂತದ ಮನೆಗೆ ಕರೆದು ಕೊಂಡು ಹೋಗಿ ಮರದ ಸೊಂಟೆಯಿಂದ ಮುಖಕ್ಕೆ ಹೊಡೆದು ಅವರು ಹಾಕಿದ್ದ ಎರಡು ಚಿನ್ನದ ಉಂಗುರ, ಒಂದು ಬ್ರಾಸ್‌ ಲೈಟ್‌ನ್ನು ದೋಚಿದ್ದಾನೆ. ಬಂಧಿತ ದತ್ತನಿಂದ ಸುಮಾರು 1.5ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಬಜಪೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English