ಮಾದಕ ದ್ರವ್ಯದ ಚಟಕ್ಕೆ ಒಳಗಾದ ಅಸ್ಸಾಂ ಮೂಲದ ವ್ಯಕ್ತಿಗೆ ನವಜೀವನ ನೀಡಿದ ತಲಪಾಡಿ ತೂಮಿನಾಡಿನ ಸ್ನೇಹಾಲಯ

1:21 PM, Saturday, February 16th, 2013
Share
1 Star2 Stars3 Stars4 Stars5 Stars
(No Ratings Yet)
Loading...

 Snehalaya Charitable Trust ಮಂಗಳೂರು : ಮಾದಕ ದ್ರವ್ಯದ ಚಟಕ್ಕೆ ಒಳಗಾಗಿ, ಮನೆ ಬಿಟ್ಟು ಬೀದಿಪಾಲದ  ಅಸ್ಸಾಂ ಮೂಲದ ದೀಪಕ್ ಛಾತ್ರಿ ಎಂಬಾತನಿಗೆ ತಲಪಾಡಿ ತೂಮಿನಾಡಿನ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ನೀಡಿದ  ಆಶ್ರಯದಿಂದಾಗಿ  ಇದೀಗ ಗುಣಮುಖನಾದ ಈತ ಸುಮಾರು ೬ ವರ್ಷಗಳ ಬಳಿಕ ತನ್ನ ಮನೆ ಸೇರುವಂತಾಗಿದೆ.

ಮೂಲತಃ ಅಸ್ಸಾಂ ರಾಜ್ಯದ ಅಫ್ಲಾಂಗ್ ನಿವಾಸಿ, ದಿ. ಅಮೃತ್ ಬಹದ್ದೂರ್ ಛಾತ್ರಿ ಹಾಗೂ ರಾಧಾ ಛಾತ್ರಿ ದಂಪತಿ ಪುತ್ರ ದೀಪಕ್ ಛಾತ್ರಿ (26)  ಎಳೆವಯಸ್ಸಿನಲ್ಲಿಯೇ ಸ್ನೇಹಿತರ ಸಹವಾಸದಿಂದ ಗಾಂಜಾ, ಕುಡಿತ ಇನ್ನಿತರ ದುರಾಭ್ಯಾಸಗಳನ್ನು ಮೈಗಂಟಿಸಿಕೊಂಡಿದ್ದ, ತನ್ನ ದುರಭ್ಯಾಸದಿಂದ ಕಳ್ಳತವನ್ನು ಆರಂಭಿಸಿದ್ದ  ಈತನ ಈ ದುರಭ್ಯಾಸದಿಂದ  ಕುಟುಂಬದವರು ನೊಂದಿದ್ದರು,  ಈ ಕಾರಣದಿಂದ ಈತನ ತಂದೆ ಈತನ ಮೇಲೆ ಹಲ್ಲೆ ನಡೆಸಿದ್ದರಿಂದ ನೊಂದು ಮನೆ ಬಿಟ್ಟ ಈತ ಊರೂರು ಅಲೆದಾಡಿದ್ದ. ಮೂರು ವರ್ಷಗಳ ಹಿಂದೆ ಗಡ್ಡಧಾರಿಯಾಗಿ, ಕೊಳಕು ಬಟ್ಟೆಯನ್ನುಟ್ಟು ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಬಂದಿಳಿದಿದ್ದ ಈತನನ್ನು ಗಮನಿಸಿದ ಸ್ಥಳೀಯರು ಈತನ ಬಗ್ಗೆ ಸ್ಥಳೀಯರು ಅನಾಥರ ಸೇವೆ ಮಾಡುತ್ತಿರುವ ತೂಮಿನಾಡು ಸ್ನೇಹಾಲಯ ಟ್ರಸ್ಟ್ ನ ಜೋಸೆಫ್ ಅವರಿಗೆ ತಿಳಿಸಿದ್ದರು.

ಇವರ ಆಶ್ರಯದಲ್ಲಿ ಮೂರು ವರ್ಷಗಳಿಂದ ಸ್ನೇಹಾಲಯದ ಆಶ್ರಮದಲ್ಲಿ ಮತ್ತು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆದುಕೊಂಡ ದೀಪಕ್ ಛಾತ್ರಿ ಇದೀಗ ಸಂಪೂರ್ಣ ಗುಣಮುಖನಾಗಿದ್ದು ಎರಡು ತಿಂಗಳ ಹಿಂದೆಯಷ್ಟೇ ತನ್ನ ಹೆಸರು, ಊರಿನ ಹಾಗೂ ಓದಿದ ಶಾಲೆಯ ವಿವರವನ್ನು ತಿಳಿಸಿದ್ದನು. ಅದರಂತೆ ಆತನ ಊರಿಗೆ ಪತ್ರ ಹಾಗೂ ಭಾವಚಿತ್ರವನ್ನು ರವಾನಿಸಿದ ಹಿನ್ನೆಲೆಯಲ್ಲಿ ಸಹೋದರ ನವೀನ್ ಛಾತ್ರಿ ಶುಕ್ರವಾರ ಆಸ್ಪತ್ರೆಗೆ ಭೇಟಿ ನೀಡಿ ಆರು ವರ್ಷಗಳಿಂದ ನಾಪತ್ತೆಯಾದ ಸಹೋದರನನ್ನು ವಾಪಸ್ಸು ಕರೆದೊಯ್ದಿದ್ದಾರೆ.ಇನ್ನು ಮುಂದೆ ಮನೆ ಬಗ್ಗೆ ಕಾಳಜಿ ವಹಿಸುವುದಾಗಿ ಆತನ ನವಜೀವನಕ್ಕೆ ಕಾರಣರಾದ ಜೋಸೆಫ್ ರವರಿಗೆ ಭರವಸೆ ನೀಡಿ ದೀಪಕ್ ಛಾತ್ರಿ ಹಿಂದುರಿಗಿದ್ದಾನೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English