ಮುನಿಸಿಪಲ್ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಶಿಬಿರ

3:11 PM, Saturday, February 16th, 2013
Share
1 Star2 Stars3 Stars4 Stars5 Stars
(No Ratings Yet)
Loading...

SK Municipal Employees Union ಮಂಗಳೂರು : ಎಸ್ .ಕೆ ಮುನಿಸಿಪಲ್ ಎಂಪ್ಲಾಯಿಸ್ ಯುನಿಯನ್ (ರಿ ) ಮಂಗಳೂರು ಹಾಗೂ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಂಕನಾಡಿ ಮಂಗಳೂರು ಇದರ ಸಹಯೋಗದೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರವನ್ನು ಇಂದು ಬೆಳಗ್ಗೆ ಮುನಿಸಿಪಾಲ್ ಎಂಪ್ಲಾಯೀಸ್ ಯೂನಿಯನ್ ನ ಕರ್ನಾಟಕ ರಾಜ್ಯ ನೌಕರರ ಸಂಘದ ಅಧ್ಯಕ್ಷ ಜಾರ್ಜ್ ಪಿಂಟೋ ಉದ್ಘಾಟಿಸಿದರು .

SK Municipal Employees Union ಕಾರ್ಯಕ್ರಮದ ಅದ್ಯಕ್ಷತೆಯನ್ನು ಸತೀಶ್ ಕುಮಾರ್ ಬಂಟ್ವಾಳ ವಹಿಸಿದ್ದರು. ಡಾ. ದಾಸ್  ಆಚಾರ್ಯ ಪ್ರೊಫೆಸರ್ ಮತ್ತು ವಿಭಾಗ ಮುಖ್ಯಸ್ಥ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಇವರು ಮುಖ್ಯ ಅತಿಥಿಗಳಾಗಿದ್ದರು.

SK Municipal Employees Union ಇಂದು 9.30 ರಿಂದ ಮದ್ಯಾಹ್ನ 1 ಗಂಟೆಯವರೆಗೆ ಉಚಿತ ತಪಾಸಣೆ ನಡೆಯಲಿದೆ. 1969  ರಲ್ಲಿ ಆರಂಭವಾದ ಎಸ್. ಕೆ ಮುನಿಸಿಪಲ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಮೊದಲಬಾರಿಗೆ ಉಚಿತ ವೈಧ್ಯಕೀಯ ಶಿಬಿರವು ನಡೆದಿದೆ.

SK Municipal Employees Union ಅಧ್ಯಕ್ಷ  ಶಿವರಾಜ್ ಪಿ.ಬಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಭಾಸ್ಕರ ಸಿ ವಂದಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English