ಶ್ರೀ ಸರಸ್ವತಿ ಮಂದಿರದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸಲು ನಿರಾಕರಿಸುತ್ತಿರುವ ಮಧ್ಯಪ್ರದೇಶ ಸರಕಾರದ ವಿರುದ್ಧ ಪ್ರತಿಭಟನೆ

4:36 PM, Saturday, February 16th, 2013
Share
1 Star2 Stars3 Stars4 Stars5 Stars
(No Ratings Yet)
Loading...

Vasanth Panchami Pooja at Dharaಮಂಗಳೂರು : ಶ್ರೀ ಕಾಶಿ ಸುಮೇರೂ ಪೀಠದ ಶಂಕರಾಚಾರ್ಯ ನರೇಂದ್ರಾನಂದ ಸರಸ್ವತಿ ಅಪಹರಣ ಮತ್ತು ಹಿಂದೂ ಧರ್ಮಗುರುಗಳ ಘೋರ ಅಪಮಾನವನ್ನು ಖಂಡಿಸಲು ಇಂದು ಬೆಳಗ್ಗೆ ಮಂಗಳೂರು ಮಹಾನಗರ ಪಾಲಿಕೆಯ ಕಟ್ಟಡದ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಯಿತು.

ಮಧ್ಯಪ್ರದೇಶದಲ್ಲಿನ ದಾರದ ಪ್ರಾಚೀನ ಶ್ರೀ ಸರಸ್ವತಿ ಮಂದಿರದಲ್ಲಿ (ಭೋಜಶಾಲೆ) ವಸಂತಪಂಚಮಿಯ ದಿನ ಹಿಂದೂಗಳಿಗೆ ಪೂಜೆ ಮಾಡುವ ಅಧಿಕಾರವಿದೆ. ಈ ಬಾರಿ ವಸಂತಪಂಚಮಿ ಶುಕ್ರವಾರ ಬಂದಿರುವುದರಿಂದ ಅಲ್ಲಿ ಶುಕ್ರವಾರದ ಪೂಜೆಯನ್ನು ನಿಲ್ಲಿಸಿ ಮಧ್ಯಾಹ್ನ ಮುಸಲ್ಮಾನರಿಗೆ ನಮಾಜು ಪಠಿಸಲು ಸರಕಾರವು ಅನುಮತಿ ನೀಡಿತ್ತು.

ಶ್ರೀ ಸರಸ್ವತಿ ಮಂದಿರದಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ವರ್ಷದಲ್ಲಿ ಒಂದೇ ಬಾರಿ ಅಂದರೆ ವಸಂತಪಂಚಮಿಯ ದಿನ ಅನುಮತಿ ಇರುತ್ತದೆ. ಹೀಗಿರುವಾಗ ಸರ್ಕಾರವು  ಹಿಂದೂಗಳ ಕುತ್ತಿಗೆ ಹಿಚುಕುತ್ತಿದೆ. ಹಾಗಾಗಿ ಇದನ್ನು ವಿರೋಧಿಸಲು ಮತ್ತು ಹಿಂದೂಗಳಿಗೆ ನ್ಯಾಯಯುತ ಪೂಜೆಯಾ ಅಧಿಕಾರ ಸಿಗಲು ಶ್ರೀ ಕಾಶಿ ಸುಮೇರೂ ಪೀಠದ ಶಂಕರಾಚಾರ್ಯ ನರೇಂದ್ರಾನಂದ ಸರಸ್ವತಿ ಸ್ವಾಮಿಜಿಯವರು ಮಧ್ಯಪ್ರದೇಶದ ಶ್ರೀ ಸರಸ್ವತಿ ಮಂದಿರಕ್ಕೆ ಹೋಗಿ ಅಲ್ಲಿ ಪೂಜೆ ಮಾಡುವ ನಿರ್ಣಯ ಕೈಗೊಂಡಿದ್ದರು. ಅದಕ್ಕಾಗಿ ಫೆಬ್ರವರಿ 14, 2013 ರಂದು ಇಂದೂರಿಗೆ ತಲುಪುವವರಿದ್ದರು. ಭಾಜಪ ಸರ್ಕಾರವು ಶಂಕರಾಚಾರ್ಯರು ಇಂದೂರು  ತಲುಪಬಾರದೆಂದು ಅವರ ವಿಮಾನ ಟಿಕೆಟನ್ನೇ ರದ್ದುಗೊಳಿಸಿತು. ಮುಸಲ್ಮಾನರ ನಮಾಜಿಗಾಗಿ ರತ್ನಗಂಬಳಿ ಹಾಸುವ ಭಾಜಪ ಸರಕಾರವು ಶಂಕರಾಚಾರ್ಯರು ಪ್ರವಾಸವನ್ನು ಸಹ ಮಾಡಲು ಬಿಡುತ್ತಿಲ್ಲ.ಆದರೂ ಶಂಕರಾಚಾರ್ಯರು ದೃಢನಿರ್ಧಾರ ಮಾಡಿ ಮತ್ತೊಮ್ಮೆ ಟಿಕೇಟು ತೆಗೆದು ಇಂದೂರಿಗೆ ತಲುಪಿದರು. ಅನಂತರ ಭಾಜಪ ಸರ್ಕಾರವು ಶಂಕರಾಚಾರ್ಯರಿಗೆ ಮುಂದಿನಂತೆ ಹಿಂಸೆ ನೀಡಿ ಅವಮಾನಾಸ್ಪದವಾಗಿ ವರ್ತಿಸಿದೆ. ಎಂದು ಹಿಂದೂ ಸಂಘಟನೆಯ ಮುಖಂಡ ರಾಮಚಂದ್ರ ಗೌಡ ಹೇಳಿದರು.

Vasanth Panchami Pooja at Dharaಪ್ರತಿಭಟನೆಯಲ್ಲಿ ರಾಮ್ ಭಟ್ ಮಾತನಾಡಿ, ಶಂಕರಾಚಾರ್ಯರೊಂದಿಗೆ ವರ್ತಿಸಿದಂತೆ ಭಾಜಪ ಸರ್ಕಾರಕ್ಕೆ ಯಾರಾದರೊಬ್ಬ ಪೋಪ್ ಅಥವಾ ಜಾಮಾ ಮಸೀದಿಯ ಇಮಾನ ಬುಖಾರಿಯವರೊಂದಿಗೆ ತೋರಿಸುವ ಧೈರ್ಯ ಇತ್ತೇನು? ಪುರಾತತ್ತ್ವ ವಿಭಾಗವು ಧಾರ (ಮಧ್ಯಪ್ರದೇಶ) ಇಲ್ಲಿನ ಭೋಜಶಾಲೆಯಲ್ಲಿ ಮುಸಲ್ಮಾನರಿಗೆ 2 ಗಂಟೆ ನಮಾಜು ಹಾಗೂ ಹಿಂದೂಗಳಿಗೆ ಪೂಜೆಯ ಅಧಿಕಾರವನ್ನು ನೀಡಿದೆ. ಹೀಗಿರುವಾಗ ಭಾಜಪದ ಮಂತ್ರಿಗಳೇ ಶಂಕರಾಚಾರ್ಯರೊಂದಿಗೆ ಸಿಹಿ ಮಾತನ್ನಾಡಿ ಮೋಸಗೊಳಿಸಿ ಅಪಹರಿಸಿದೆ. ಇದು ಹಿಂದೂಗಳ ಮೇಲಿನ ಮಾನವಾಧಿಕಾರ ಮತ್ತು ಧಾರ್ಮಿಕ ಅಧಿಕಾರಗಳ ಮೇಲಿನ ಆಕ್ರಮಣವಾಗಿದೆ. ಇದರ ಎಲ್ಲ ರೀತಿ ದುಷ್ಪರಿಣಾಮಗಳನ್ನು ಭಾಜಪ ಸರ್ಕಾರವು ಭೋಗಿಸಬೇಕಾಗುವುದು. ಶ್ರೀ ಕಾಶೀ ಸುಮೇರೂ ಪೀಠದ ಶಂಕರಾಚಾರ್ಯ ಸ್ವಾಮಿ ನರೇಂದ್ರಾನಂದ ಸರಸ್ವತಿ ಇವರೊಂದಿಗೆ ಅಪಮಾನಾಸ್ಪದವಾಗಿ ವರ್ತಿಸುವ ಮಧ್ಯಪ್ರದೇಶದಲ್ಲಿನ ಭಾಜಪ ಸರ್ಕಾರವನ್ನು ಸಮಸ್ತ ಹಿಂದೂ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಶಂಕರಾಚಾರ್ಯರನ್ನು ಅಪಮಾನಾಸ್ಪದವಾಗಿ ವರ್ತಿಸಿದ ಮಧ್ಯಪ್ರದೇಶದ ಭಾಜಪ ಸರ್ಕಾರವು ಹಿಂದೂದ್ರೋಹ ಗೈದಿದೆ. ಭಾರತದಾದ್ಯಂತವಿರುವ ಸಮಸ್ತ ಹಿಂದೂನಿಷ್ಠ ಸಂಘಟನೆಗಳು ಕಟೋರ ಶಬ್ದಗಳಲ್ಲಿ ಇದನ್ನು ವಿರೋಧಿಸುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸುಕನ್ಯ ಆಚಾರ್ಯ, ಲೀಲಾವತಿ, ಲೋಕೇಶ್, ಸಂಗೀತಪ್ರಭು ಭಾಗವಹಿಸಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English