ಕುದ್ರೋಳಿಯಲ್ಲಿ ನವೀಕೃತ ಜಾಮಿಯ ಮಸೀದಿಯ ಉದ್ಘಾಟನೆ

4:38 PM, Saturday, February 16th, 2013
Share
1 Star2 Stars3 Stars4 Stars5 Stars
(No Ratings Yet)
Loading...

Jamiya Masjidಮಂಗಳೂರು : ಮಂಗಳೂರು ನಗರದ ಕುದ್ರೋಳಿ ಪರಿಸರದಲ್ಲಿ ನವಿಕೃತ ಜಾಮಿಯ ಮಸೀದಿಯ ಉದ್ಘಾಟನೆಯನ್ನು ಕೇಂದ್ರ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕೆ.ರೆಹಮಾನ್ ಖಾನ್ ಇಂದು ನೆರವೇರಿಸಿದರು.

ಉದ್ಘಾಟನೆ ನೆರವೇರಿಸಿದ ಕೇಂದ್ರ ಸರ್ಕಾರದ ಸಚಿವ ಕೆ.ರೆಹಮಾನ್ ಖಾನ್ ಮಾತನಾಡಿ ಧರ್ಮದ ಹೆಸರಿನಲ್ಲಿ ಕಚ್ಚಾಡದೆ ನಮ್ಮ ದೇಶದ ಪ್ರಬಲ ಶಕ್ತಿಯಾಗಿರುವ ವಿವಿಧತೆಯಲ್ಲಿ ಏಕತೆಯನ್ನು ಪಾಲಿಸೋಣ. ನಮ್ಮ ದೇಶವು ಈ ವ್ಯವಸ್ಥೆಯಲ್ಲಿ ಬೇರೂರಿದೆ ಹೊರತು ಧರ್ಮದ ನೆಲೆಯಲ್ಲಿ ಅಲ್ಲ. ಇಲ್ಲಿನ ಈ ನವೀಕೃತ ಮಸೀದಿಯ ಉಪಯೋಗವನ್ನು ಪ್ರತಿಯೊಬ್ಬನು ಪಡೆದುಕೊಳ್ಳಲಿ, ಈ ಮಸೀದಿಯನ್ನು ನವೀಕರಿಸಲು ಶ್ರವಹಿಸಿದ  ಎರಡೂ ಜಮಾತ್ ಗಳ ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ಮಸೀದಿಯ ಜೀರ್ಣೋದ್ದಾರದ  ಆಡಳಿತ ಸಮಿತಿಯ ಅಧ್ಯಕ್ಷ ಕೆ.ಎಸ್.ಮಹಮ್ಮದ್ ಮಸೂದ್,  ಈ ಮಸೀದಿಯು ಸುಮಾರು ನೂರೈವತ್ತು ವರ್ಷಗಳ ಇತಿಹಾಸವನ್ನು ಹೊಂದಿದ್ದು ಟಿಪ್ಪು ಸುಲ್ತಾನ್ ಈ ಮಸೀದಿಯ ನಿರ್ಮಾಣ ಕಾರ್ಯವನ್ನು ಮಾಡಿದ್ದ. ತನ್ನ ಸೈನಿಕರಿಗೆ ನಮಾಜ್ ಮಾಡಲು ಈ ಮಸೀದಿಯನ್ನು ಆತ ನಿರ್ಮಿಸಿದ್ದು ಇಲ್ಲಿ ಒಂದೇ ರೀತಿಯ ಎರಡು ಮಸೀದಿಗಳಿದ್ದವು ಹಾಗಾಗಿ ಇದನ್ನು ಜೋಡು ಮಸೀದಿ ಎಂದು ಕರಯಲಾಗುತ್ತಿತ್ತು. ಈ ಮಸೀದಿಯನ್ನು ನವೀಕರಣಗೊಳಿಸಲು ಈ ಎರಡೂ ಮಸೀದಿಗಳಿಗೆ ಸೇರಿದ ಜಮಾತ್ ಗಳೊಂದಿಗೆ ಚರ್ಚಿಸಿದಾಗ ಎರಡೂ ಜಮಾತ್ ಗಳು ಒಪ್ಪಿಕೊಂಡು ಎರಡು ಮಸೀದಿಗಳ ಜಾಗದಲ್ಲಿ ಬೃಹತಾದ  ಒಂದೇ ಮಸೀದಿಯನ್ನು ನಿರ್ಮಿಸಲು ಒಪ್ಪಿಕೊಂಡವು ಅದರಂತೆ ಇಲ್ಲಿ ಮಸೀದಿ ನಿರ್ಮಾಣಗೊಂಡಿದೆ ಎಂದು ಅವರು ಹೇಳಿದರು.

Jamiya Masjidರಾಜ್ಯ ವಿಧಾನ ಸಭೆಯ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಮಾತನಾಡಿ  ಈ ಮಸೀದಿಯು ಶಾಂತಿ ಸಮೃದ್ದಿ ನೆಲೆಸಿ ಸಹಬಾಳ್ವೆಯ ವಾತಾವರಣ ಸೃಷ್ಟಿಯಾಗುವಂತೆ ಮಾಡುವಲ್ಲಿ ಮುಖ್ಯಪಾತ್ರ ವಹಿಸಲಿ ಎಂದು ಹಾರೈಸಿದರು.

ಸಮಾರಂಭದಲ್ಲಿ ಅಖಿಲ ಭಾರತ ಮುಸ್ಲಿಂ ಕಾನೂನು ಮಂಡಳಿಯ ಸದಸ್ಯ ಮೌಲಾನ ಮುಫ್ತಿ ಮಹಮ್ಮದ್ ಅಶ್ರಫ್ ಅಲೊ ಬುಖಾರಿ, ದಕ್ಷಿಣ ಕನ್ನಡ ಜಿಲ್ಲಾ ಖಾಝಿಗಳಾದ ಅಲ್ ಹಜ್ ತ್ವಾಖಾ ಅಹಮದ್ ಮೌಲವಿ ಕಝಿಯಾರಕ್ಕಮ್, ಶಾಸಕ ಯು.ಟಿ.ಖಾದರ್, ಮಹಮ್ಮದ್ ಒಬೈದುಲ್ಲ ಶರೀಫ್, ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಬೋರ್ಡಿನ ಅಧ್ಯಕ್ಷ ಹಾಜಿ ಹೆಚ್.ಎಸ್.ಉಸ್ಮಾನ್, ಪಾಲಿಕೆ ಸದಸ್ಯ ಅಬ್ದುಲ್ ಅಜೀಜ್ ಕುದ್ರೋಳಿ, ಜಿಲ್ಲಾ ಹಜ್ ಕಮಿಟಿ ಅಧ್ಯಕ್ಷ ವೈ.ಮಹಮ್ಮದ್ ಕುಞ, ಝೀನತ್ ಬಕ್ಷ್ ಜುಮ್ಮಾ ಮಸೀದಿ ಬಂದರ್ ಇದರ ಅಧ್ಯಕ್ಷ ವೈ.ಅಬ್ದುಲ್ಲ ಕುಞ, ಕೆ.ಎಸ್.ನಿಸಾರ್ ಅಹಮದ್, ಮಹಮ್ಮದ್ ಅಬ್ದುಲ್ಲ ಸಾಹೇಬ್, ಪ್ರೇಮಾನಂದ ಶೆಣೈ, ಎಂ.ಶಾಹಿದ್ ರೆಹಮಾನ್, ಸುರೇಶ್ ಬಲ್ಲಾಳ್, ವಿಜಯಕುಮಾರ್ ಶೆಟ್ಟಿ, ಬಿ.ಎ.ಮೊಯಿದಿನ್, ಮೊಯಿದಿನ್ ಬಾವ, ಐವನ್ ಡಿಸೋಜ ಹಾಗೂ ಇತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English