ಬೆಂಗಳೂರು : ಧ್ವನಿಮತದ ಮೂಲಕ ವಿಶ್ವಾಸಮತವನ್ನು ಅಂಗೀಕರಿಸಲಾಗಿದೆ ಎಂದು ಸೋಮವಾರ ಬೆಳಗ್ಗೆ 10ಗಂಟೆಗೆ ಸರಿಯಾಗಿ ಸ್ಪೀಕರ್ ಕೆ ಜಿ ಬೋಪಯ್ಯ ಸದನದಲ್ಲಿ ಘೋಷಿಸುತ್ತಿದ್ದಂತೆ . ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆ ರಣರಂಗವಾಗಿ ಮಾರ್ಪಟ್ಟಿತು. ಬಳಿಕ ಸ್ಪೀಕರ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು
ಸರಕಾರದ ಪರವಾಗಿ 106 ಮತಗಳು ಇರುವುದರಿಂದ ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತಾಗಿದ್ದು, ವಿರುದ್ಧ ಶೂನ್ಯ ಮತಗಳು ಬಿದ್ದಿವೆ ಎಂದು ಬೋಪಯ್ಯ ಘೊಷಿಸಿದ್ದಾರೆ. ಇನ್ನು ಮುಂದಿನ ನಿರ್ಣಯ ರಾಜ್ಯಪಾಲರ ಕೈಯಲ್ಲಿದೆ ಅಲ್ಲೂ ಸಾಧ್ಯವಾಗದಿದ್ದರೆ ಪ್ರತಿ ಪಕ್ಷಗಳು ರಾಷ್ಟ್ರ ಪತಿಗಳ ಮೊರೆ ಹೊಗಲಿದ್ದಾರೆ.
16 ಮಂದಿ ಅತೃಪ್ತ ಬಿಜೆಪಿ ಹಾಗೂ ಸ್ವತಂತ್ರ ಶಾಸಕರ ಅನರ್ಹತೆಯ ನಡುವೆಯೇ ವಿಶ್ವಾಸಮತ ಕಲಾಪ ನಡೆದಿದ್ದು, ಸದ್ಯಕ್ಕೆ ಯಡಿಯೂರಪ್ಪ ಸರಕಾರ ವಿಶ್ವಾಸಮತ ಗೆದ್ದುಕೊಂಡಿದೆ.
ಪ್ರತಿ ಪಕ್ಷಗಳು ರಾಜಭವನದ ಮುಂದೆ ಬಹುಮತ ಸಾಬಿತು ಪಡಿಸಲು ಪರೇಡ್ ನಡೆಸುತ್ತಿದ್ದಾರೆ. ರಾಜ್ಯಪಾಲರು, ವಿಧಾನಮಂಡಲ ಅಮಾನತಿಗೇನಾದರೂ ಕ್ರಮ ಕೈಗೊಳ್ಳುವರೇ, ರಾಷ್ಟ್ರಪತಿಗೆ, ಕೇಂದ್ರಕ್ಕೆ ವರದಿ ಸಲ್ಲಿಸುವರೇ ಎಂಬುದು ಮತ್ತು ಮುಂದೇನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಇದೀಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ
Click this button or press Ctrl+G to toggle between Kannada and English