ಯೆಯ್ಯಾಡಿ ಬಳಿ ಭೀಕರ ರಸ್ತೆ ಅಪಘಾತ ಇಬ್ಬರ ಸಾವು

12:41 PM, Monday, February 18th, 2013
Share
1 Star2 Stars3 Stars4 Stars5 Stars
(No Ratings Yet)
Loading...

car hit to bike at Yeyyadiಮಂಗಳೂರು : ನಗರದ ಯೆಯ್ಯಡಿ ಕೊಂಚಾಡಿ ಖಾಸಗಿ ಶಾಲೆ ಬಳಿ ಶನಿವಾರ  ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವಕರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೂಡುಶೆಡ್ಡೆ ಚಂದ್ರಹಾಸ್ ಮತ್ತು ಸುನಿತಾ ದಂಪತಿ ಪುತ್ರ ಯೋಗೀಶ್ (27) ಮತ್ತು ಕಲ್ಲಡ್ಕ ವೀರಕಂಭದ ಸೋಮಪ್ಪ ನಾಯಕ್ ಮತ್ತು ನೀಲಮ್ಮ ನಾಯಕ್ ಅವರ ಪುತ್ರ ಜಯಪ್ರಕಾಶ್ (23) ಮೃತಪಟ್ಟವರಾಗಿದ್ದಾರೆ.

ಸ್ನೇಹಿತರಾದ ಇವರಿಬ್ಬರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್‌ಗಳಾಗಿದ್ದು, ಸುರತ್ಕಲ್ ಬಳಿ ಕೆಲಸ ನಿರ್ವಹಿಸಿ ಸ್ಕೂಟರ್‌ನಲ್ಲಿ ವಾಪಸಾಗುತ್ತಿದ್ದು, ಯೆಯ್ನಾಡಿ ಪೆಟ್ರೋಲ್‌ ಪಂಪ್‌ ಬಳಿ ಜಯ ಪ್ರಕಾಶ್‌ ಮತ್ತು ಯೋಗೀಶ್‌ ಸ್ಕೂಟರ್‌ನಿಂದ ಇಳಿದು, ಫುಟ್‌ಪಾತ್‌ನಲ್ಲಿ ನಿಂತು ಮಾತನಾಡುತ್ತಿದ್ದಾಗ ಕಾರೊಂದು ವೇಗವಾಗಿ ಬಂದು ಮೊದಲು ರಸ್ತೆ ಬದಿಯ ಕಟ್ಟೆಗೆ ಢಿಕ್ಕಿಯಾಗಿ ಬಳಿಕ ಸ್ಕೂಟರಿಗೆ ಹಾಗೂ ನಂತರ ಫುಟ್‌ಪಾತ್‌ ಏರಿ ಬಂದು ಜಯಪ್ರಕಾಶ್‌ ಮತ್ತು ಯೋಗೀಶ್‌ ಅವರಿಗೆ ಢಿಕ್ಕಿ ಹೊಡೆದಿದ್ದು ಮತ್ತೆ ಮುಂದುವರಿದು ರಸ್ತೆ ಬದಿಯ ಡಿವೈಡರ್‌ಗೆ ಢಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಇಬ್ಬರೂ ದೂರ ಹಾರಿ ಬಿದ್ದಿದ್ದು, ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಾತ್ರಿ ಸುಮಾರು 12.30ರ ಹೊತ್ತಿಗೆ ಅಪಘಾತ ಸಂಭವಿಸಿದ್ದು, 2.30ರ ವರೆಗೆ ಅವರಿಬ್ಬರೂ ಘಟನಾ ಸ್ಥಳದಲ್ಲೇ ಬಿದ್ದಿದ್ದರು ಎನ್ನಲಾಗಿದೆ.

ಮಹಾರಾಷ್ಟ್ರ ನೋಂದಣಿಯ ಶವರ್ಲೆ ಕಾರಿನಲ್ಲಿದ್ದವರು ವೈದ್ಯಕೀಯ ಕಾಲೇಜಿನ ವಿದ್ಯಾಥಿಗಳೆಂದು ಪೊಲೀಸರು ತಿಳಿಸಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English