ಸೈನ್ಯಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವಾಗ ಪ್ರಾಣ ತ್ಯಾಗ ಮಾಡುವ ಅಧಿಕಾರಿಗಳ ಸಂಖೆಯೇ ಹೆಚ್ಚು : ಪ್ರತಾಪ್ ರೆಡ್ಡಿ

4:56 PM, Tuesday, February 19th, 2013
Share
1 Star2 Stars3 Stars4 Stars5 Stars
(No Ratings Yet)
Loading...

Prataap Reddyಮಂಗಳೂರು : ಪೊಲೀಸ್ ಇಲಾಖೆಯನ್ನು ರಾಷ್ಟ್ರದ ಸೈನ್ಯಕ್ಕೆ ಹೋಲಿಸಿದರೆ ಪೊಲೀಸ್ ಇಲಾಖೆಗೆ ಸೈನ್ಯದಂತೆ ನೇರವಾದ ಶತ್ರುಗಳಿಲ್ಲ ಬದಲಿಗೆ ಶತ್ರುಗಳು ಸಮಾಜದಲ್ಲಿ ವಿವಿಧ ಸ್ತರಗಳಲ್ಲಿ, ಬೇರೆ ಬೇರೆ ರೂಪದಲ್ಲಿದ್ದಾರೆ. ಇಂತಹ  ಸಮಾಜ ಘಾತುಕ ವ್ಯಕ್ತಿಗಳನ್ನು ಮಟ್ಟ ಹಾಕಲು ಪೊಲೀಸರು ತಮ್ಮ ಇತಿಮಿತಿಗಳಿಗಿಂತ ಸ್ವಲ್ಪ ಹೆಚ್ಚಾಗಿ ಕ್ರಮ ಕೈಗೊಂಡರು ಕೂಡ ನಾಗರಿಕ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಸೈನ್ಯಕ್ಕಿಂತ ಪೊಲೀಸ್ ವ್ಯವಸ್ಥೆಯಲ್ಲಿ ಕರ್ತವ್ಯದಲ್ಲಿರುವಾಗ  ಪ್ರಾಣ ತ್ಯಾಗ ಮಾಡಿದ ಅಧಿಕಾರಿಗಳೆ ಹೆಚ್ಚಿನ  ಸಂಖ್ಯೆಯಲ್ಲಿದ್ದರು ಪೊಲೀಸ್ ಇಲಾಖೆಗೆ ಮಾತ್ರ ಸರಿಯಾದ ವ್ಯವಸ್ಥೆಗಳು ಸಿಗುತ್ತಿಲ್ಲ ಎಂದು ಪಶ್ಚಿಮವಲಯ ಪೊಲೀಸ್ ಮಹಾನಿರೀಕ್ಷಕ ಪ್ರತಾಪ್ ರೆಡ್ಡಿ ಹೇಳಿದರು

ಅವರು ಇಂದು ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯ ಕುರಿತ ಕಾರ್ಯಾಗಾರವನ್ನು ಉದ್ದೇಶಿಸಿ ಮಾತನಾಡಿದರು, ರಾಷ್ಟ್ರ ಮಟ್ಟದಲ್ಲಿ ನಡೆಯುವ ಘಟನೆಗಳು ಸ್ಥಳೀಯ ಘಟನೆಗಳ ಮೇಲೆ ಯಾವ ರೀತಿ ತಮ್ಮ ಪ್ರಭಾವವನ್ನು ಬೀರುತ್ತವೆ ಎಂಬುದಕ್ಕೆ ಕೆಲವು ತಿಂಗಳುಗಳ ಹಿಂದೆ ಈಶಾನ್ಯ ರಾಜ್ಯಗಳಲ್ಲಿ ನಡೆದ ಕೆಲವು ಘಟನೆಗಳೆ ನಿದರ್ಶನ ಎಂದ ಅವರು ರಾಷ್ಟ್ರ ಮಟ್ಟದ ವಿಷಯಗಳ ಬಗ್ಗೆ ಜ್ಞಾನ ಹೊಂದಿದ್ದರೆ ಇಂತಹ ವಿಷಯಗಳನ್ನು ಸುಲಭ ರೀತಿಯಲ್ಲಿ ಪರಿಹರಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಉಪಸ್ತಿತರಿದ್ದ  ಕ್ರೈಸ್ಟ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಬಿದಂಡ ಚಂಗಪ್ಪ ಮಾತನಾಡಿ,  ರಾಜ್ಯದಲ್ಲಿ ಐಎಸ್ ಐ ತನ್ನ ಬೇರುಗಳನ್ನು ಗಟ್ಟಿಗೊಳಿಸಲು ಪ್ರಯತ್ನ ಪಡುತ್ತಿದೆ ಏಕೆಂದರೆ ಕರ್ನಾಟಕದಲ್ಲಿ ದಕ್ಷಿಣ ಭಾರತದಲ್ಲಿಯೇ ಮುಸ್ಲಿಂ ಜನಸಂಖ್ಯೆ ಗಣನೀಯವಾಗಿ ಇದೆ. ಜೊತೆಗೆ  ಟಿಬೆಟ್ ನಿರಾಶ್ರಿತರ ಕೇಂದ್ರಗಳು ಕೂಡ ಕರ್ನಾಟಕದಲ್ಲಿದ್ದು ಚೀನ ದೇಶ ಕೂಡ ಈ ಸಮುದಾಯಗಳಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನ ಪಡುವ ಅಪಾಯವಿದೆ ಹಾಗಾಗಿ ರಾಜ್ಯದ ಪೊಲೀಸರು ರಾಷ್ಟ್ರ ಮಟ್ಟದಲ್ಲಿ ನಡೆಯುವ ವಿಚಾರಗಳ ಬಗ್ಗೆ ಹೆಚ್ಚಿನ ಜ್ಞಾನವನ್ನು ಹೊಂದಿರಬೇಕಾದ ಅಗತ್ಯವಿದೆ,  ರಾಜ್ಯದಲ್ಲಿಯೇ ಬೆಂಗಳೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರವಾಗಿದ್ದು ಇಲ್ಲಿ ಹಲವಾರು ಸಂಶೋಧನಾ ಕೇಂದ್ರಗಳು ಹಾಗು ಉನ್ನತ ತಂತ್ರಜ್ಞಾನ ಸಂಸ್ಥೆಗಳಿರುವುದರಿಂದ  ಬೆಂಗಳೂರು ಹಾಗೂ ರಾಜ್ಯದ ಮೇಲೆ ಐಎಸ್ ಐ ಯಂತಹ ಸಂಸ್ಥೆಗಳು ತಮ್ಮ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಲು ಗುರಿ ಮಾಡಿಕೊಂಡಿವೆ ಇದರಿಂದಾಗಿ ರಾಜ್ಯ ಪೊಲೀಸರ ಮೇಲೆ ಹೆಚ್ಚಿನ ಜವಾಬ್ದಾರಿಗಳಿವೆ ಎಂದು ಅವರು ಹೇಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English