ರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಸಾರ್ವಜನಿಕರಿಂದ ಪ್ರತಿಭಟನೆ

6:19 PM, Tuesday, February 19th, 2013
Share
1 Star2 Stars3 Stars4 Stars5 Stars
(No Ratings Yet)
Loading...

Kuppe Padavu protestಎಡಪದವು : ಇಲ್ಲಿನ ಕುಪ್ಪೆಪದವು ಗ್ರಾಮದ ಕಾಡಕೇರಿ ಬಳಿಯ ಬೋಳಿಯಕ್ಕೆ ಹೋಗುವ ಸುಮಾರು 2.5 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಆ ರಸ್ತೆಯಲ್ಲಿ ತೆರಳಲು ಸಾರ್ವಜನಿಕರು ಹಾಗೂ  ವಾಹನಗಳು ಬಹಳಷ್ಟು ಕಷ್ಟ ಪಡುತ್ತಿರುವುದರಿಂದ ಈ ರಸ್ತೆಯನ್ನು ಈ ಕೂಡಲೆ ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಕುಪ್ಪೆಪದವು ಗ್ರಾಮಸ್ಥರು ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ  ನಡೆಸಿದರು.

Kuppe Padavu protestಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡುತ್ತಾ, ಕರ್ನಾಟಕ ಬಿಜೆಪಿ ಸರ್ಕಾರದ ನಾಯಕರು ರಾಜ್ಯದ  ಜನರ ಬಗ್ಗೆ ಚಿಂತಿಸದೆ ಕೇವಲ ತಮ್ಮ ಆಂತರಿಕ ಕಚ್ಚಾಟಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಭ್ರಷ್ಟಾಚಾರ ಬಿಟ್ಟರೆ ಬೇರಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಈ  ಪರಿಸರದ ಸಾರ್ವಜನಿಕರು ಇಲ್ಲಿನ ರಸ್ಥೆ ಅವ್ಯವಸ್ಥೆಯ ಬಗ್ಗೆ ಸಾಕಷ್ಟು ಬಾರಿ ಗ್ರಾಮ ಪಂಚಾಯತ್ ಗೆ ಸ್ಥಳೀಯ ಶಾಸಕರಿಗೆ, ಸಂಸದರಿಗೆ ಮನವಿ ಸಲ್ಲಿಸಿದರೂ ಕೂಡ ಅವರಿಗೆ ಕೇವಲ ಆಶ್ವಾಸನೆಗಳು  ದೊರೆತವು ಹೊರತು ಆ ಆಶ್ವಾಸನೆಗಳು ಕಾರ್ಯ ರೂಪಕ್ಕೆ ಬಂದಿಲ್ಲ. ಹಾಗಾಗಿ ಇಂದು ಕುಪ್ಪೆಪದವು ಗ್ರಾಮದ ಗ್ರಾಮಸ್ಥರು ಯಾವುದೇ ಪಕ್ಷ ಭೇದವಿಲ್ಲದೆ ಇಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ಥಳೀಯ  ರಾಜಕೀಯ ಮುಖಂಡರು ಈ ರಸ್ಥೆಯ ಅವ್ಯವಸ್ಥೆಯ ಬಗ್ಗೆ ಗಮನ ಹರಿಸಿ ಶೀಘ್ರದಲ್ಲಿ ಈ ರಸ್ಥೆಯನ್ನು ಡಾಂಬರೀಕರಣ ಮಾಡಬೇಕು ಇಲ್ಲದೇ ಹೋದಲ್ಲಿ ಎಡಪದವು ಬಳಿಯ ರಾಷ್ಟ್ರೀಯ ಹೆದ್ದಾರಿಯನ್ನೇ  ಬಂದ್ ಮಾಡಿ ಪ್ರತಿಭಟನೆಯನ್ನು ಇನ್ನಷ್ಟು ಉಗ್ರವಾಗಿ ನಡೆಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಉಪಾಧ್ಯಕ್ಷೆ ಪುಷ್ಪನಾಯಕ್ ಹಾಗೂ ಕಾರ್ಯದರ್ಶಿಯವರು ಪ್ರತಿಭಟನಾ ಸ್ಥಳಕ್ಕೆ ತೆರಳಿ ಪ್ರತಿಭಟನಾ ನಿರತರಿಂದ ಮನವಿ ಪಡೆದು ಈ  ಬಗ್ಗೆ ಶೀಘ್ರದಲ್ಲೆ ಅಗತ್ಯ ಕ್ರಮಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಪ್ರತಿಭಟನಾ ನಿರತರಿಗೆ ಆಶ್ವಾಸನೆ ನೀಡಿದರು. ಪ್ರತಿಭಟನೆಯಲ್ಲಿ ಜೆಡಿಎಸ್ ನಾಯಕರುಗಳಾದ ಸುರೇಶ್ಚಂದ್ರ ಶೆಟ್ಟಿ, ಸುದರ್ಶನ್  ಶೆಟ್ಟಿ, ಡಿ.ಎಂ ಅಸ್ಲಂ, ಸಿಪಿಐಎಂ ನಾಯಕ ಸದಾಶಿವದಾಸ್ ಹಾಗೂ ಇತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English