ಕೊಂಡೆವೂರು ಸಹಸ್ರ ಚಂಡಿಕಾ ಮಾಹಾಯಾಗ : ಹೊರೆಕಾಣಿಕೆ ಸಿದ್ಧತೆಯ ಪೂರ್ವಬಾವಿ ಸಭೆ.

1:47 PM, Thursday, February 21st, 2013
Share
1 Star2 Stars3 Stars4 Stars5 Stars
(4 rating, 5 votes)
Loading...

Kondevoor sahashra chandika yagaಮಂಗಳೂರು : ಸಹಸ್ರ ಚಂಡಿಕಾಯಾಗ ಸಮಿತಿ ಆಶ್ರಯದಲ್ಲಿ ಶ್ರೀ ಧಾಮ ಮಾಣಿಲದ ಪರಮ ಪೂಜ್ಯ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರ ನೇತ್ರತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಆಚಾರ್ಯತ್ವದಲ್ಲಿ ಉಪ್ಪಳದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ ಶ್ರೀ ಗಾಯತ್ರಿ ದೇವೀ ದಿವ್ಯ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ “ಸಹಸ್ರ ಚಂಡಿಕಾ ಮಹಾಯಾಗ”ವು ದಿನಾಂಕ  27-02-13 ನೇ ಬುಧವಾರ ಮೊದಲ್ಗೊಂಡು 06-3-13 ನೇ ಬುಧವಾರದವರೆಗೆ ಬಹಳ ವಿಜೃಭಂಣೆಯಿಂದ ಜರುಗಲಿರುವುದು.

ಜನಹಿತಕ್ಕಾಗಿ ನಡೆಯಲಿರುವ ಈ ಪುಣ್ಯ ಕಾರ್ಯಕ್ಕೆ ಶ್ರೀ ಶರವು ಗಣಪತಿ ದೇವಸ್ಥಾನ, ಶ್ರೀ ಮಂಗಳಾ ದೇವಿ ದೇವಸ್ಥಾನ, ಬೋಳಾರ ಮಾರಿಗುಡಿ ದೇವಸ್ಥಾನ, ಮುಖ್ಯ ಪ್ರಾಣ ದೇವಸ್ಥಾನ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಉರ್ವಾ ಮಾರಿಗುಡಿ ದೇವಸ್ಥಾನ, ಪಾಂಡೇಶ್ವರ ಮಾಲಿಂಗೇಶ್ವರ ದೇವಸ್ಥಾನ, ಕಾವೂರು ಮಾಲಿಂಗೇಶ್ವರ ದೇವಸ್ಥಾನ, ಶ್ರೀ ಕ್ಷೇತ್ರ ಕದ್ರಿ ಸೇರಿದಂತೆ ಸುಮಾರು 30 ವಿವಿದ ಕ್ಷೆತ್ರಗಳಿಂದ ಹೊರೆಕಾಣಿಕೆ ಬರಲಿದೆ. ಈ ಹೊರೆಕಾಣಿಕೆ ಮೆರವಣಿಗೆಯು ಹೊರೆಕಾಣಿಕೆ ಸಮಿತಿಯ ಅಧ್ಯಕ್ಷರಾದ ಶ್ರೀ ಶರಣ್ ಪಂಪ್‌ವೆಲ್‌ರವರ ನೇತ್ರತ್ವದಲ್ಲಿ ಫೆ. 27ರಂದು ಮಧ್ಯಾಹ್ನ 1.30ಕ್ಕೆ ಶ್ರೀ ಕ್ಷೇತ್ರ ಕದ್ರಿಯಿಂದ ಶ್ರೀ ಕ್ಷೇತ್ರಕ್ಕೆ ಸಾಗಲಿರುವುದು.

Kondevoor sahashra chandika yagaಈ ಪ್ರಯುಕ್ತ ಹೊರೆಕಾಣಿಕೆ ಸಮಿತಿ ರಚನೆ ಹಾಗೂ  ಮಂಗಳೂರು ವಲಯ ಸಮಿತಿಯ ಪೂರ್ವಬಾವಿ ಸಭೆಯು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಫೆ.20ರಂದು ಮಂಗಳೂರಿನ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ಜರಗಿತು.

ಕರ್ನಾಟಕ ವಿಧಾನ ಸಭಾ ಉಪಸಭಾಪತಿ ಶ್ರೀ ಎನ್. ಯೋಗೀಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಮೀನುಗಾರಿಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ನಿತಿನ್ ಕುಮಾರ್, ಸಹಸ್ರ ಚಂಡಿಕಾಯಾಗ ಸಮಿತಿಯ ಅಧ್ಯಕ್ಷರಾದ ಶ್ರೀ ಎಂ.ಬಿ.ಪುರಾಣಿಕ್, ಕಾರ್ಯಾಧ್ಯಕ್ಷರುಗಳಾದ ಶ್ರೀ ಮೋನಪ್ಪ ಭಂಡಾರಿ, ಶ್ರೀ ಗೋಪಾಲ್ ಬಂದ್ಯೋಡ್, ಉಪಾಧ್ಯಕ್ಷ ಮೋಹನ್‌ದಾಸ್ ಕೊಂಡೆವೂರ್, ಕೋಶಾಧ್ಯಕ್ಷ ಶ್ರೀ ಜಿತೇಂದ್ರ ಕೊಟ್ಟಾರಿ, ಯಾಗ ಸಮಿತಿಯ ಮಾತೃಮಂಡಳಿ ಅಧ್ಯಕ್ಷೆ ಡಾ. ಆಶಾಜ್ಯೋತಿ ರೈ, ಮಾಜಿ ಮೇಯರ್ ಶ್ರೀಮತಿ ರಜನಿ ದುಗ್ಗಣ್ಣ, ನ್ಯಾಯಾವಾದಿ ಶ್ರೀ ಜಗದೀಶ್ ಶೇಣವ ಮತ್ತಿತರರ ಯಾಗಸಮಿತಿ ಪಧಾಧಿಕಾರಿಗಳು ಉಪಸ್ಥಿತರಿದ್ದರು.

ಯಾಗ ಸಮಿತಿಯ ಮಂಗಳೂರು ವಲಯ ಅಧ್ಯಕ್ಷ ಶ್ರೀಕರ್ ಪ್ರಭು ಸ್ವಾಗತಿಸಿ, ಪ್ರಸ್ತಾವನೆಗೈದರು. ಕಾರ್ಯಾದರ್ಶಿ ಪ್ರವೀಣ್ ಸ್ವಾಗತಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English