ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಮಿತಿಯಿಂದ ತನನ್ನು ದೂರ ಇಡಲಾಗಿದೆ : ಮಾಜಿ ಮೇಯರ್ ಅಶ್ರಫ್

12:46 PM, Thursday, February 21st, 2013
Share
1 Star2 Stars3 Stars4 Stars5 Stars
(No Ratings Yet)
Loading...

DCC Pressmeetಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಜಿಲ್ಲಾ ಕಾಂಗ್ರೆಸ್ಸ್ ಯಲ್ಲಿ ತನನ್ನು ಕೈಬಿಡಲಾಗಿದೆ ಹಾಗು ಇತ್ತೀಚೆಗೆ ಪಕ್ಷದಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಮೇಯರ್ ಅಶ್ರಫ್ ದೂರಿದ ಘಟನೆ ಬುಧವಾರ ನಡೆಯಿತು. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಸಮಿತಿಯೊಂದನ್ನು ರಚಿಸಿದ್ದು ಈ ಕುರಿತ ಮಾಹಿತಿಯನ್ನು ಜಿಲ್ಲೆಯಲ್ಲಿ ಚುನಾವಣಾ ಉಸ್ತುವಾರಿ ಹೊಂದಿರುವ ಮಾಜಿ ಸಂಸದ ಬಿ.ಜನಾರ್ದನ ಪೂಜಾರಿ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೆ ನೀಡುತ್ತಿದ್ದ ಸಂದರ್ಭದಲ್ಲಿ  ಅಶ್ರಫ್ ಅಸಮಧಾನ ವ್ಯಕ್ತಪಡಿಸಿದರು. ಅಸಮಧಾನ ಗೊಂಡ ಅವರನ್ನು ಸಮಾಧಾನ ಪಡಿಸಲು ಇತರೆ ನಾಯಕರು ಪ್ರಯತ್ನಿಸಿದರೂ,  ಚೇರಿಯ ಹೊರಗಿದ್ದ ಅಶ್ರಫ್ ಬೆಂಬಲಿಗರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡುಬಂದಿತು.

ಆದರೆ ಇದಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಜನಾರ್ದನ ಪೂಜಾರಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಉಸ್ತುವಾರಿಯನ್ನು ತಮಗೆ ವಹಿಸಿದ್ದು, ಅದರಂತೆ ಅಭ್ಯರ್ಥಿಗಳ ಆಯ್ಕೆಯನ್ನು ಮಾಡುವ ಸಲುವಾಗಿ ಸಮಿತಿಯೊಂದನ್ನು ರಚಿಸಿದ್ದು ಈ ಸಮಿತಿಯಲ್ಲಿ ಬಿ.ರಮಾನಾಥ ರೈ, ವಿನಯ್ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಕೆ.ವಸಂತ ಬಂಗೇರ, ಯು.ಟಿ.ಖಾದರ್, ಬಿಎ ಮೊಯಿದ್ದೀನ್, ಕೆ.ಎಂ.ಎಸ್ ಮಸೂದ್, ಬಿ.ಇಬ್ರಾಹಿಂ, ವಿಜಯಕುಮಾರ್ ಶೆಟ್ಟಿ, ಐವನ್ ಡಿಸೋಜ, ಮೋಹನ್ ಪಿವಿ, ಮಿಥುನ್ ರೈ, ಮೊಯಿದೀನ್ ಬಾವ, ಆಶಿತ್ ಪಿರೇರಾ, ಪದ್ಮನಾಭ ನರಿಂಗಾನ, ಅರುಣ್ ಕುವೆಲ್ಲೊ, ಜೆ.ಆರ್ ಲೋಬೊ, ಶಶಿಧರ್ ಹೆಗ್ಡೆ, ದೀಪಕ್ ಪೂಜಾರಿ, ಕೃಪಾ ಅಮರ್ ಆಳ್ವ, ಅಶೋಕ್ ಡಿ.ಕೆ ಇರುವುದಾಗಿ ತಿಳಿಸಿದರು. ಈ ಸಮಿತಿಯು ಅಭ್ಯರ್ಥಿಗಳನ್ನು ಅವರ ಕ್ಷೇತ್ರ ಸಾಧನೆ, ಹಾಗೂ ಜಯಗಳಿಸುವ ಸಾಮರ್ಥ್ಯ ವನ್ನು ಅವಲಂಭಿಸಿ ನಿರ್ಧರಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ರಮಾನಾಥ ರೈ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕೆ.ಎಂ.ಎಸ್.ಮಸೂದ್, ಮೇಯರ್ ಗುಲ್ಜಾರ್ ಬಾನು ಹಾಗೂ ಇತರರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English