ಮಂಗಳೂರು : ವಿವಿಧ ಕಾರ್ಮಿಕ ಸಂಘಟನೆಗಳು ನೀಡಿದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಆದರೆ ಎರಡನೇ ದಿನವಾದ ಇಂದು ಯಾವುದೇ ರೀತಿಯ ಮುಷ್ಕರಗಳು ನಡೆಯದೆ ಎಂದಿನಂತೆ ಜನರು ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಬಸ್ ಸಂಚಾರ ಆರಂಭವಾಗಿದೆ.
ಬೆಲೆ ಏರಿಕೆ ವಿರುದ್ಧ ಭುಗಿಲೆದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳು ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಎಲ್ಲ ಕಾರ್ಮಿಕರು ಹತ್ತು ಸಾವಿರ ಕನಿಷ್ಠ ಕೂಲಿ ನಿಗದಿ ಪಡಿಸಿ, ಬೋನಸ್ ಗಿರುವ ಎಲ್ಲ ಮಿತಿಗಳನ್ನು ತೆಗೆದುಹಾಕಬೇಕು, ಆಟೋ ಚಾಲಕರ ನೋಂದಾವಣೆ ಹಾಗೂ ಕಲ್ಯಾಣ ಯೋಜನೆಗಳ ಜಾರಿಗಾಗಿ 60 ವರ್ಷದ ನಂತರ ಸರ್ಕಾರಿ ಪಿಂಚಣಿ ನೀಡಬೇಕು, ಸರ್ಕಾರಿ ಬಸ್ಸುಗಳ ಡೀಸೆಲ್ ಗೆ ಖಾಸಗಿ ಬಸ್ಸಿಗಿಂತ ಹೆಚ್ಚಿನ ದರ ವಿಧಿಸಿದ್ದು, ಡಿಸೇಲ್ ದರ ಇಳಿಕೆಯಾಗಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆದರು, ಕರಾವಳಿಯಲ್ಲಿ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.
ಇಂದು ಅಂಗಡಿ ಮುಂಗಟ್ಟುಗಳು, ಶಾಲಾ-ಕಾಲೇಜುಗಳು ಹೊಟೇಲುಗಳು ತೆರೆದುಕೊಂಡಿದ್ದು, ಸರಕಾರಿ ಕಚೇರಿಗಳು ಹಾಗೂ ಬ್ಯಾಂಕುಗಳು ಮುಚ್ಚಲ್ಪಟ್ಟಿವೆ.
Click this button or press Ctrl+G to toggle between Kannada and English