ಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮಾರ್ಚ್ 7 ರಂದು ನಡೆಯಲಿದ್ದು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿದೆ ಆದ್ದರಿಂದ ಅರ್ಹತೆ ಹೊಂದಿರುವ ಮತದಾರ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದಲ್ಲಿ ನೋಂದಾಯಿಸಿಕೊಳ್ಳಲು ಫೆಬ್ರವರಿ 23 ಶನಿವಾರದವರೆಗೆ ಅವಕಾಶ ಇದೆ ಎಂದು ಮಂಗಳೂರು ತಹಶೀಲ್ದಾರ್ ರವಿಚಂದ್ರ ನಾಯಕ್ ತಿಳಿಸಿದರು.
ಚುನಾವಣೆಯಲ್ಲಿ ಮತ ಚಲಾಯಿಸಬೇಕಾದರೆ ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿದೆ. ಎಲ್ಲಾ ಮತದಾರರು ತಮ್ಮ ಹೆಸರು ಪರಿಷ್ಕ್ರತ ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬ ಬಗ್ಗೆ ಖಚಿತ ಪಡಿಸಿ ಒಂದು ವೇಳೆ ಬಿಟ್ಟು ಹೋಗಿದ್ದಲ್ಲಿ www.ceokarnataka.nic.in ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ತಮ್ಮ ಹೆಸರನ್ನು ದಾಖಲೆಗಳೊಂದಿಗೆ ಸಲ್ಲಿಸಬಹುದು ಅಥವಾ ಮಂಗಳೂರು ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಶನಿವಾರ ಸಂಜೆಯೊಳಗೆ ಸಲ್ಲಿಸಬೇಕು, ಈಗಾಗಲೇ ಇರುವ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಖಚಿತ ಪಡಿಸಿಕೊಳ್ಳಲು ಕೆಎಐಪಿಐಸಿ ಎಂದು ಟೈಪ್ ಮಾಡಿದ ನಂತರ ಸ್ಪೇಸ್ ಕೊಟ್ಟು ತಮ್ಮ ಮತದಾರರ ಗುರುತಿನ ಚೀಟಿಯ ನಂಬರನ್ನು ಟೈಪ್ ಮಾಡಿ ನಂತರ 9243355223 ಗೆ ಕಳುಹಿಸಿದಲ್ಲಿ ತಮ್ಮ ಮತದಾರರ ಪಟ್ಟಿಯಲ್ಲಿನ ವಿವರಣೆ, ಬೂತ್ ಸಂಖ್ಯೆ ಹಾಗೂ ಮನೆ ವಿಳಾಸ ಕುರಿತ ಎಸ್ ಎಂ ಎಸ್ ಆ ಕೂಡಲೇ ಮತದಾರರಿಗೆ ಬರಲಿದೆ ಎಂದು ಅವರು ತಿಳಿಸಿದರು.
Click this button or press Ctrl+G to toggle between Kannada and English