ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ‘ಕೊಂಕಣಿ ಅಭಿಮಾನ್‌’

11:45 AM, Saturday, February 23rd, 2013
Share
1 Star2 Stars3 Stars4 Stars5 Stars
(No Ratings Yet)
Loading...

Konkani Abhimanಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಶುಕ್ರವಾರ ಅಕಾಡೆಮಿ ಕಚೇರಿಯಲ್ಲಿ  ತುಳು ಭಾಷಿಗರ ಕೊಂಕಣಿ ಕಾರ್ಯಕ್ರಮ ‘ಕೊಂಕಣಿ ಅಭಿಮಾನ್‌’ ನಡೆಯಿತು  ಇದರ ಉದ್ಘಾಟನೆಯನ್ನು ಮಣಿಪಾಲ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎಂ. ಹೆಗ್ಡೆ  ಅವರು ನೆರವೇರಿಸಿದರು.

ಇಂಗ್ಲಿಷ್‌ ಭಾಷೆಗೆ ತನ್ನದೇ ಆದ ಲಿಪಿ ಇಲ್ಲದಿದ್ದರೂ ಜಗತ್ತಿನ ಎಲ್ಲ ಭಾಷೆಗಳ ಶಬ್ದಗಳನ್ನು ಸ್ವೀಕರಿಸುವ ಮೂಲಕ ಬೆಳವಣಿಗೆ ಹೊಂದಿ ಅಗ್ರಮಾನ್ಯ ಭಾಷೆ ಎನಿಸಿದೆ. ಅದೇ ರೀತಿ ಕೊಂಕಣಿ ಭಾಷೆ ಕೂಡ ಲಿಪಿ ಪ್ರಶ್ನೆ ಬದಿಗಿರಿಸಿ ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲ ಲಿಪಿಗಳನ್ನು ಬಳಸಿಕೊಂಡು ಬೆಳವಣಿಗೆ ಹೊಂದಬೇಕು. ಮತ್ತು  ಇತರ ಭಾಷೆಗಳ ಉತ್ತಮ ಕೃತಿಗಳನ್ನು ಕೊಂಕಣಿ ಭಾಷೆಗೆ ಹಾಗು ಕೊಂಕಣಿ ಭಾಷೆಯ ಕೃತಿಗಳನ್ನು ಇತರೆ ಭಾಷೆಗಳಿಗೆ ಅನುವಾದ ಮಾಡುವ ಕಾರ್ಯವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಳ್ಳಬೇಕು. ಇದರಿಂದ ಕೊಂಕಣಿ ಭಾಷೆ ಮತ್ತು ಸಾಹಿತ್ಯ ಇನ್ನಷ್ಟು ಬೆಳೆಯಲು ಸಾಧ್ಯವಿದೆ ಎಂದವರು ಹೇಳಿದರು.

ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಅವರು ಈ ಸಂದರ್ಭ ಆಶೀರ್ವಚನ ನೀಡಿದರು. ಅಕಾಡಮಿ ರಿಜಿಸ್ಟ್ರಾರ್‌ ಡಾ| ದೇವದಾಸ್‌ ಪೈ,  ಅಕಾಡೆಮಿ ಸದಸ್ಯ ರೋಯ್‌ ಕ್ಯಾಸ್ಟಲಿನೊ, ಅಕಾಡಮಿಯ ಮಾಜಿ ಅಧ್ಯಕ್ಷ ಎರಿಕ್ ಓಜಾರಿಯೋ ಮುಂತಾದವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English